ನವದೆಹಲಿ: ಕೀಟನಾಶಕವಾಗಿ ಕೃಷಿಗಳಿಗೆ ಬಳಸುವ ಎಥಿಲೀನ್ ಆಕ್ಸೈಡ್ ಪ್ರಮಾಣ ‘ಎವರೆಸ್ಟ್ ಫಿಶ್ ಕರಿ ಮಸಾಲಾ’ದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿದೆ ಎಂದು ಆರೋಪಿಸಿರುವ ಸಿಂಗಾಪುರ ದೇಶ ಭಾರತದಿಂದ ಸಿಂಗಾಪುರಕ್ಕೆ ಆಮಾದಾಗುತ್ತಿದ್ದುದ್ದನ್ನು ಸಿಂಗಾಪುರ್ ಹಿಂದಿರುಗಿಸಲು ನಿರ್ಧರಿಸಿದ್ದು, . ಹಾಂಗ್ ಕಾಂಗ್ನ ಆಹಾರ ಸುರಕ್ಷತಾ ಕೇಂದ್ರವು ಹೊರಡಿಸಿದ ಅಧಿಸೂಚನೆ ಬಳಿಕ ಸಿಂಗಾಪುರ ಈ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
‘ಎವರೆಸ್ಟ್ ಫಿಶ್ ಕರಿ ಮಸಾಲಾ’ದಲ್ಲಿ ಎಥಿಲೀನ್ ಆಕ್ಸೈಡ್ ಅಂಶ ಹೆಚ್ಚು ಇದ್ದು, ಇದು ಮನುಷ್ಯರ ಬಳಕೆಗೆ ಸೂಕ್ತವಲ್ಲನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥಿಲೀನ್ ಆಕ್ಸೈಡ್ ಇರುವಿಕೆಯನ್ನು ಪತ್ತೆ ಹಚ್ಚಿದ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.ಸಿಂಗಾಪುರ್ ಫುಡ್ ಏಜೆನ್ಸಿ ಈ ಕುರಿತು ಹೇಳಿಕೆಯನ್ನು ಹೊರಡಿಸಿದ್ದು, ಅನುಮತಿಸಿದ ಮಿತಿಗಳನ್ನು ಮೀರಿದ ಮಟ್ಟದಲ್ಲಿ ಇಥಿಲೀನ್ ಆಕ್ಸೈಡ್ ಇರುವ ಕಾರಣದಿಂದ ಹಾಂಗ್ ಕಾಂಗ್ನ ಆಹಾರ ಸುರಕ್ಷತೆ ಕೇಂದ್ರವು ಭಾರತದಿಂದ ಎವರೆಸ್ಟ್ ಫಿಶ್ ಕರಿ ಮಸಾಲಾವನ್ನು ಹಿಂಪಡೆಯುವ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೇಳಿದೆ.
ಸಿಂಗಾಪುರ್ ಫುಡ್ ಏಜೆನ್ಸಿ, ಆಮದುದಾರರಾದ ಎಸ್ಪಿ ಮುತ್ತಯ್ಯ ಮತ್ತು ಸನ್ಸ್ ಪಿಟಿಇ ಲಿಮಿಟೆಡ್ಗೆ ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ಅಮದು ಮಾಡಿಕೊಳ್ಳದಂತೆ ನಿರ್ದೇಶಿಸಿದೆ. ಎಥಿಲೀನ್ ಆಕ್ಸೈಡ್ನ್ನು ಸಾಮಾನ್ಯವಾಗಿ ಸೂಕ್ಷ್ಮಜೀವಿಗಳನ್ನು ತಡೆಗಟ್ಟಲು ಕೃಷಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಸಿಂಗಾಪುರದ ನಿಯಮಗಳ ಪ್ರಕಾರ, ಮಸಾಲೆಗಳಲ್ಲಿ ರಾಸಾಯನಿಕವನ್ನು ಅಲ್ಪ ಪ್ರಮಾಣದಲ್ಲಿ ಮಾತ್ರ ಅನುಮತಿಸಲಾಗಿದೆ ಆದರೆ ಎವರೆಸ್ಟ್ ಫಿಶ್ ಕರಿ ಮಸಾಲಾದಲ್ಲಿನ ರಾಸಾಯನಿಕದ ಮಟ್ಟವು ಗ್ರಾಹಕರಿಗೆ ಸಂಭಾವ್ಯ ಆರೋಗ್ಯ ಅಪಾಯವನ್ನುಂಟುಮಾಡುತ್ತದೆ. ಈ ಉತ್ಪನ್ನವನ್ನು ಖರೀದಿಸಿದವರು ವೈದ್ಯರ ಸಲಹೆಯನ್ನು ಪಡೆಯಬೇಕು. ಗ್ರಾಹಕರು ಈ ಕುರಿತು ವಿಚಾರಣೆಗಾಗಿ ತಮ್ಮ ಖರೀದಿ ಕೇಂದ್ರವನ್ನು ಸಂಪರ್ಕಿಸಬೇಕು ಎಂದು ಸಿಂಗಾಪುರ ಫುಡ್ ಏಜೆನ್ಸಿ ಹೇಳಿದೆ.
ಇದನ್ನೂ ನೋಡಿ: ಬಿಜೆಪಿ ಪ್ರಣಾಳಿಕೆ : ಇವತ್ತೇನು ಎಂಬುದಕ್ಕೆ ಉತ್ತರ ಇಲ್ಲ – 25 ವರ್ಷ ಕಾಯಬೇಕು Janashakthi Media