ಕೇಂದ್ರ ಸರ್ಕಾರದ ನೀತಿಗಳಿಂದ ಜನ ಕಂಗಾಲಾಗಿದ್ದಾರೆ – ಜನ್ನಿ

ಹಾಸನ : ಇಡೀ ದೇಶದಲ್ಲಿ ತುರ್ತು ಪರಿಸ್ಥಿತಿ ಎದುರಾಗಿದೆ, ಈಗಾಗಲೆ ಜನರು ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳಿಂದ ಕಂಗಾಲಾಗಿದ್ದಾರೆ, ಸಾಂಸ್ಕೃತಿಕ ದಾಳಿಗಳು ಹೆಚ್ಚಾಗಿ ಸಂವಿಧಾನದ ಮೂಲ ಆಶಯಗಳಿಗೆ ದೊಡ್ಡ ಪೆಟ್ಟುಬಿದ್ದಿದೆ‌. ಇವುಗಳ ವಿರುದ್ದ ಜನ ಜಾಗೃತರಾಗಿ ಈ ಬಾರಿ ಮತ ಚಲಾಯಿಸಬೇಕು ಎಂದು ಮೈಸೂರುಬರಂಗಾಯಣದ ಮಾಜಿ ನಿರ್ದೇಶಕರಾದ ಜನಾರ್ದನ (ಜನ್ನಿ) ಹೇಳಿದರು.

ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏರ್ಪಡಿಸಿದ್ದ “ಸಂವಿಧಾನ ಉಳಿವಿಗಾಗಿ ಸಾಂಸ್ಕೃತಿಕ ಪ್ರತಿಶೋಧ” ಸಮುದಾಯ ಕರ್ನಾಟಕದ ಜಾಥಾ ಕಾರ್ಯಕ್ರಮವನ್ನು ಹಾಸನ ನಗರದ ಮಹಾವೀರ ವೃತ್ತದಲ್ಲಿ ಉಧ್ಘಾಟಿಸಿ ಮಾತನಾಡುತ್ತಿದ್ದರು.

ಈ ಎಲ್ಲಾ ಬೆಳವಣಿಗೆಗಳಿಗೆ ವಿರುದ್ದವಾಗಿ ಸಮುದಾಯ ಕರ್ನಾಟಕ ಈ ಬಾರಿ ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಪ್ರತಿರೋಧ ಕೊಡಬೇಕೆಂದು ರಾಜಪ್ಪದಳವಾಯಿಯವರ “ಜನ ಸತ್ತಿಲ್ಲ” ಎಂಬ ಹೆಸರಿನ ಕಿರು ನಾಟಕವನ್ನು ರಾಜ್ಯಾದ್ಯಂತ ಪ್ರದರ್ಶಿಸುತ್ತಿದ್ದೇವೆ

ಈಗಾಗಲೆ ನಾವು ಬೆಂಗಳೂರು ಚಾಮರಾಜನಗರ, ಕೋಲಾರ ಜಿಲ್ಲೆಗಳಲ್ಲಿ ಮುಗಿಸಿ ಹಾಸನಕ್ಕೆ ಬಂದಿದ್ದೇವೆ. ಜನರು ಬಹಳ ಪ್ರೀತಿಯಿಂದ ನಮ್ಮನ್ನು ಸ್ವಾಗತಿಸಿ ಪ್ರೋತ್ಸಾಹ ಕೊಡುತ್ತಿದ್ದಾರೆ.
ನಾಟಕ ಇಂದಿನಿ ಭ್ರಷ್ಟ ಪರಿಸ್ಥಿತಿಗಳನ್ನು ಎತ್ತಿ ಹಿಡಿಯಲಾಗಿದೆ. ಹೀಗೆ ಕಳೆದ 50 ವರ್ಷಗಳಿಂದ ಸಮುದಾಯ ಕರ್ನಾಟಕ ಜನರ ನಡುವೆ ರೈತರು, ಕಾರ್ಮಿಕರು, ದಲಿತರು, ಶೋಷಿತರ ಪರವಾಗಿ ಕೆಲಸ ಮಾಡುತ್ತಾ ಬಂದಿದೆ ಜನರ ನಡುವೆ ನಾಟಕಗಳನ್ನು ಕಟ್ಟುತ್ತಾ ಹಾಡುತ್ತ ಎಚ್ಚರಿಸುತ್ತಾ ಬಂದ ಕಾರಣ ಇಂದು ಈ ಸರ್ವಾಧಿಕಾರಿ ವಿರುದ್ದ ನಾಟಕ ಕಟ್ಟಿ ಜನರನ್ನು ಎಚ್ಚರಿಸಲು ಬಂದಿದ್ದೇವೆ ಎಂದು ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿಪ್ರಚಾರದ ವೇಳೆ ಮಸೀದಿಯತ್ತ ಬಾಣದ ಸನ್ನೆ : ಬಿಜೆಪಿ ಅಭ್ಯರ್ಥಿಯಿಂದ ವಿವಾದ ಸೃಷ್ಟಿ

ಕೋವಿಡ್ ಸಮಯದಲ್ಲಿ ಪ್ರಧಾನ ಮಂತ್ರಿಗಳು ಮತ್ತು ರಾಜ್ಯದ 27 ಸಂಸದರು ಎಲ್ಲಿದ್ದರು ಎಂಬ ಪ್ರಶ್ನೆ ನಾವು ಮಾಡಬೇಕಿದೆ. ಸಾವಿರಾರು ಸಾವು ನೋವುಗಳಾದರು ಕೂಡ ಯಾವೊಬ್ಬ ಸಂಸದನು ಜನರ ನಡುವೆ ಇದ್ದು ಕೆಲಸ ಮಾಡಲಿಲ್ಲಾ ಆದರೆ ಇಂದು ಅವರೆ ನಮ್ಮ ಮನೆಗಳ ಮುಂದೆ ಮತಕ್ಕಾಗಿ ಅಂಗಲಾಚುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.

ಚುನಾವಣೆ ಹೆಸರಿನಲ್ಲಿ ಜನರನ್ನು ರಾಜಕಣಿಗಳು ಜಾತಿ, ಧರ್ಮದ ವಿಷ ಬೀಜ ಬಿತ್ತುವುದು, ಹಣ, ಹೆಂಡ ನೀಡಿ ಮತ ಖರೀಧಿಸುವುದು, ಧರ್ಮ ಧರ್ಮಗಳ ನಡುವೆ ಕಂದಕಗಳನ್ನು ತಂದು ಅದನ್ನು ಮತಗಳಾಗಿ ಪರಿವರ್ತಿಸುವುದನ್ನು ನಾಟಕ ತೆರೆದಿಟ್ಟಿದೆ. ಈ ಎಲ್ಲಾ ವಿಷಯಗಳನ್ನು ಒಳಗೊಂಡಂತೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ಈ ಸಂಧರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಪ್ರಸ್ತಾವಿಕವಾಗಿ ಮಾತನಾಡಿದರು, ಸಾಹಿತಿ ಬಾನು ಮುಷ್ತಾಕ್, ಲೇಖಕಿ ರೂಪ ಹಾಸನ, ಕೆ.ಟಿ ಶಿವಪ್ರಸಾದ್, ಸಂದೇಶ್, ಮಲ್ಲಪ್ಪ, ವಿಜಯ್ ಕುಮಾರ್, ರಾಜಶೇಖರ್, ನವೀನ್ ಕುಮಾರ್ ಇನ್ನಿತರು ಉಪಸ್ಥಿತರಿದ್ದರು. ಎಂ.ಜಿ.ಪೃಥ್ವಿ ಕಾರ್ಯಕ್ರಮ ನಿರ್ವಹಿಸಿದರು.

 

 

Donate Janashakthi Media

Leave a Reply

Your email address will not be published. Required fields are marked *