ಪ್ರಚಾರದ ವೇಳೆ ಮಸೀದಿಯತ್ತ ಬಾಣದ ಸನ್ನೆ : ಬಿಜೆಪಿ ಅಭ್ಯರ್ಥಿಯಿಂದ ವಿವಾದ ಸೃಷ್ಟಿ

ಹೈದರಾಬಾದ್:‌ ಲೋಕಸಭಾ ಚುನಾವಣೆಯಲ್ಲಿ ಹೈದರಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರು ಮಸೀದಿಯತ್ತ ಬಾಣ ಬಿಡುತ್ತಿರುವಂತೆ ಸನ್ನೆ ಮಾಡಿದ ವಿಡಿಯೋವೊಂದು ವಿವಾದ ಸೃಷ್ಟಿಸಿದೆ.

ಕಳೆದ ಬುಧವಾರ ಹೈದರಾಬಾದ್ ನಲ್ಲಿ ನಡೆದ ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಮಾಧವಿ ಲತಾ,  ಕೇಸರಿ ಶಾಲು ಧರಿಸಿ ವಾಹನವೊಂದರ ಮೇಲೆ ನಿಂತು ಹೈದರಾಬಾದ್‌ನ ಓಲ್ಡ್ ಸಿಟಿಯಲ್ಲಿರುವ ಸಿದ್ದಿಯಂಬರ್ ಬಜಾರ್ ಮಸೀದಿಯತ್ತ ಅವರು ಬಾಣ ಬಿಟ್ಟಂತೆ ಸನ್ನೆ ಮಾಡಿದ್ದಾರೆ. ಸುತ್ತಲು ಕೇಸರಿ ಧ್ವಜ ಹಿಡಿದು ನಿಂತಿದ್ದ ನೂರಾರು ಜನರು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮೊಳಗಿಸಿದ್ದು ವಿಡಿಯೋದಲ್ಲಿದೆ.

ಬಿಜೆಪಿಯ ಮಾಧವಿ ಲತಾ ಬಾಣ ಮಸೀದಿಯ ಮೇಲೆ ರಾಮನಂತೆ ಬಾಣ ಹೂಡುತ್ತಿರುವ ದೃಶ್ಯಕ್ಕೆ ಪ್ರತಿಪಕ್ಷಗಳಿಂದ ಟೀಕೆಗಳು ವ್ಯಕ್ತವಾಗಿದ್ದು,ಈ ರೀತಿಯ ಕ್ರಮಗಳು ನಗರದ ಶಾಂತಿಗೆ ಧಕ್ಕೆ ತರುತ್ತವೆ  ಎಂದು ವಿಪಕ್ಷಗಳು ಹೇಳಿವೆ. ಸಾಂಪ್ರದಾಯಿಕ ಕ್ಷಮೆಯಾಚನೆಯಿಂದ ಬಿಜೆಪಿಯ ದ್ವೇಷದ ಪ್ರಚಾರದಿಂದ ಉಂಟಾದ ಹಾನಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ.

ಇದನ್ನೂ ಓದಿ: “ಸಾರ್ವಜನಿಕ ತುರ್ತು ಪರಿಸ್ಥಿತಿ”: ನಾಗಾಲ್ಯಾಂಡ್‌ನ ಆರು ಜಿಲ್ಲೆಗಳಲ್ಲಿ 0% ಮತದಾನ

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ವಿವಾದ ಸೃಷ್ಟಿಸಿರುವ ಈ ದೃಶ್ಯಕ್ಕೆ ಪ್ರತಿಕ್ರಿಯಿಸಿ, ಮತದಾರರು ಬಿಜೆಪಿ ಅಭ್ಯರ್ಥಿಯ “ಅಶ್ಲೀಲ ಮತ್ತು ಪ್ರಚೋದನಕಾರಿ” ನಡವಳಿಕೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ.

ತೆಲಂಗಾಣ ಮತ್ತು ಹೈದರಾಬಾದ್‌ನ ಜನರು ಬಿಜೆಪಿಯ ಉದ್ದೇಶಗಳೇನು ಎಂಬುದನ್ನು ತಿಳಿದಿದ್ದಾರೆ. “ಹೈದರಾಬಾದ್‌ನ ಮತದಾರರು ತಮ್ಮ ಮತಗಳನ್ನು ಸಂವೇದನಾಶೀಲವಾಗಿ ಚಲಾಯಿಸುವಂತೆ ಓವೈಸಿಸಿ ಮನವಿ ಮಾಡಿದ್ದಾರೆ.”

ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಲತಾ, ವೀಡಿಯೊ “ಈ ವಿಡಿಯೋ ಅಪೂರ್ಣವಾಗಿದ್ದು, ಇದನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನಕಾರಾತ್ಮಕವಾಗಿ ಪ್ರಸಾರಮಾಡಲಾಗುತ್ತಿದೆ “ನಾನು ಎಲ್ಲ ವ್ಯಕ್ತಿಗಳನ್ನು ಗೌರವಿಸುತ್ತೇನೆ. ಈ ವಿಡೀಯೋದಿಂದ ಯಾರದ್ದಾದರೂ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿತ್ತೇನೆ ಎಂದು ಲತಾ ಹೇಳಿದ್ದಾರೆ.

ಇದನ್ನೂ ನೋಡಿ: ಸಂವಿಧಾನದ ಮೇಲೆ ದಾಳಿ ಮಾಡುತ್ತಿರುವ ಬಿಜೆಪಿಯನ್ನು ದೇಶದಜನ ಸೋಲಿಸಬೇಕು – ಡಾ. ಜಿ. ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *