ಸಚಿವ ಸ್ಥಾನ ಸಿಗದ್ದಕ್ಕೆ ಬಿಜೆಪಿ ವಿರುದ್ಧ ಅಸಮಾಧಾನಗೊಂಡ ಕೆ ಎಸ್‌ ಈಶ್ವರಪ್ಪ; ಅಧಿವೇಶನಕ್ಕೆ ಗೈರು

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಬಿಜೆಪಿ ಪಕ್ಷದ ವಿಧಾನ ಪರಿಷತ್‌ ಸದಸ್ಯರ ಕೆ.ಎಸ್.‌ ಈಶ್ವರಪ್ಪ ಮರಳಿ ಸಚಿವ ಸ್ಥಾನ ಸಿಗದಿರುವ ಬಗ್ಗೆ ಬಿಜೆಪಿ ವಿರುದ್ಧ ಅಸಮಾಧಾನಗೊಂಡಿದ್ದಾರೆ.

ಬಿಜೆಪಿ ಪಕ್ಷದ ನಾಯಕರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿರುವ ಅವರು, ಮಂತ್ರಿ ಸ್ಥಾನ ನೀಡುವುದಕ್ಕೆ ವಿಳಂಬ ಮಾಡುತ್ತಿರುವುದರಿಂದ ಈಶ್ವರಪ್ಪ ಅಧಿವೇಶನಕ್ಕೂ ಬರದೇ ಅಸಮಾಧಾನಗೊಂಡಿದ್ದಾರೆ.

ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿರುವ ಕೆ.ಎಸ್. ಈಶ್ವರಪ್ಪ, ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದರೆ ಸಚಿವ ಸ್ಥಾನ ಕೊಡುವುದನ್ನು ವಿಳಂಬ ಮಾಡುತ್ತಿದ್ದಾರೆ. ಇದರಿಂದ ನನಗೆ ಅಸಮಾಧಾನವಾಗಿದೆ. ನಾನು ಅಧಿವೇಶನಕ್ಕೆ ಹೋಗುತ್ತಿಲ್ಲ. ಇದನ್ನು ಮುಚ್ಚುಮರೆ ಇಲ್ಲದೇ ಹೇಳುತ್ತೇನೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಸಚಿವ ಸ್ಥಾನ ನೀಡುವ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಹೈಕಮಾಂಡ್ ನಾಯಕರು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದಾರೆ.

ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಮೂಲ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ ಬಗ್ಗೆಯೂ ಈಶ್ವರಪ್ಪ ಮಾತನಾಡಿದ್ದು, ಇದು ನನ್ನ ಗಮನಕ್ಕೆ ಬಂದಿದೆ. ಕೆಲವರಿಗೆ ಬೇಸರ ವಿರುತ್ತೆ‌. ಅದು ಹೇಗೆ ಸರಿ ಮಾಡಬೇಕು ಅದನ್ನ ಸರಿ ಮಾಡ್ತೀವಿ. ಒಂದು ಮನೆಯ ಕುಟುಂಬದಲ್ಲೇ ಅಣ್ಣ ತಮ್ಮಂದಿರು ನಡೆಯವ ವ್ಯತ್ಯಾಸವಿರುತ್ತೆ…ನಮ್ಮದು ಪೊಲಿಟಿಕಲ್ ಪಾರ್ಟಿ.ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದ್ಯಾವುದೋ ಜಾತಿಯಲ್ಲಿ ಇರುತ್ತೇವೆ. ಒಂದು ಸಿದ್ದಾಂತದಲ್ಲಿದ್ದೇವೆ. ಕೆಲವರಿಗೆ ಬೇಸರವಾಗಿದೆ. ಬೆಸರವಾಗಿರೋರಿಗೆ ಬೆಸರ ಮಾಡಿದ್ದಾರೆ ಅಂತ ಹೇಳಿದವರನ್ನ ಕರೆಯಿಸಿ ರಾಜ್ಯಧ್ಯಕ್ಷರು ಮಾತನಾಡ್ತಾರೆ ಎಂದು ಹೇಳಿದರು

ಇನ್ನು ಇದೇ ವೇಳೆ  ಡಿಕೆಶಿ ಅವರಿಗೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳ್ಳನಿಗೆ ಡೇಟ್ ಕೇಳಿ ಕೋರ್ಟ್ ದಿನಾಂಕ ಕೊಡುತ್ತಾ..? ಕೋರ್ಟ್ ಕೊಡುವ ಡೇಟ್ ಗೆ ಕಳ್ಳ ವಿಚಾರಣೆಗೆ ಹೋಗಬೇಕು ನಾನು ಇದರಲ್ಲಿ ಯಾವುದೇ ರಾಜಕೀಯ ಮಾಡಲ್ಲ.. ಅವರು ವಿಚಾರಣೆಯಲ್ಲಿ ಆರೋಪ ಮುಕ್ತರಾಗಿ ಬರಲಿ ಎಂದು ಹಾರೈಸುತ್ತೇನೆ. ಆದರೆ ಭಾರತ್ ಜೋಡೋ, ಅಧಿವೇಶನ ಸಂದರ್ಭದಲ್ಲಿ ನನಗೆ ತೊಂದರೆ ಕೊಡ್ತಿದ್ದಾರೆ ಎಂದು ಹೇಳೋ ಮಾತು ಸರಿಯಲ್ಲ ಎಂದು ಟಾಂಗ್ ಕೊಟ್ಟರು.

Donate Janashakthi Media

Leave a Reply

Your email address will not be published. Required fields are marked *