ʼಉತ್ತರ-ದಕ್ಷಿಣ ಸಿನಿಮಾ ರಂಗದ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ’; ಜಾನ್ವಿ-ರಾಧಿಕಾ ಹೇಳಿಕೆ ವಿರುದ್ಧ ನಟಿ ರೆಜಿನಾ ಕೆಂಡ

  • ಪ್ರಾಜೆಕ್ಟ್ ಇಷ್ಟವಾಗದಿದ್ದರೆ ಆಗಲೇ ಹೊರಬರಬೇಕು ಹೊರತು, ವರ್ಷಗಳ ಬಳಿಕ ಟೀಕಿಸಿ ಉತ್ತರ-ದಕ್ಷಿಣ ವಿವಾದ ಸೃಷ್ಟಿಸಬಾರದು
  • ಸಿನಿಮಾದಲ್ಲಿ ಅಸಮಾಧಾನವಿದ್ದರೆ ನಟ-ನಟಿಯರಿಗೆ ಅದನ್ನು ತಿರಸ್ಕರಿಸುವ ಸ್ವಾತಂತ್ರ್ಯವಿದೆ ಎಂದ  ರೆಜಿನಾ ಕಸ್ಸಂದ್ರ
  • ಅಕ್ಷಯ್ ಕುಮಾರ್ ನಟನೆಯ ‘ಕೇಸರಿ: ಚಾಪ್ಟರ್ 2’ ಚಿತ್ರದ ಪ್ರಮೋಷನ್‌ನಿಂದ ಕೈಬಿಡಲಾಗಿದೆ ಈ ತಾರತಮ್ಯ ಯಾಕೆ ಎಂದ ರೆಜಿನಾ
Regina Cassandra: ʻನಿಮಗೆ ಸಿನಿಮಾದಲ್ಲಿ ನಟಿಸಲು ಮುಜುಗರವಾದರೆ ದಯವಿಟ್ಟು ಹೊರಗೆ ಬನ್ನಿ. ಹೊರ ನಡೆದು ಸುದ್ದಿಯಾಗಿ. ಯಾರು ಕೂಡ ಬಲವಂತವಾಗಿ ಅಲ್ಲಿ ಕೆಲಸ ಮಾಡಬೇಕಿಲ್ಲ. ಇಂತಹ ಹೇಳಿಕೆಗಳು ಉತ್ತರ ಮತ್ತು ದಕ್ಷಿಣ ಭಾರತದ ಚಿತ್ರರಂಗದ ನಡುವೆ ಅನಗತ್ಯವಾಗಿ ಭಿನ್ನಾಭಿಪ್ರಾಯ  ಸೃಷ್ಟಿಸುತ್ತವೆʼ ಹೀಗೆಂದು ನೇರಾ ನೇರ ಕಿಡಿಕಾರಿದ್ದು ನಟಿ ರೆಜಿನಾ ಕಸ್ಸಂದ್ರ. ರಾಧಿಕಾ ಆಪ್ಟೆ ಮತ್ತು ಪೆದ್ದಿ ಸಿನಿಮಾ ಬಗ್ಗೆ ಜಾನ್ವಿ ಕಪೂರ್‌ ನೀಡಿದ್ದ ಹೇಳಿಕೆ ವಿರುದ್ಧ ರೆಜಿನಾ ಬಹಿರಂಗವಾಗಿ ಗುಡುಗಿದರು. ರೆಜಿನಾ

ಪೆದ್ದಿ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಅವರನ್ನು ಐಟಂ ಗರ್ಲ್‌ನಂತೆ ಬಳಕೆ ಮಾಡಿಕೊಳ್ಳಲಾಗಿದೆ ಎನ್ನುವ ವಿವಾದ ಜೋರಾಗಿತ್ತು. ಈ ಬಗ್ಗೆ ಕರಣ್‌ ಜೋಹರ್‌ ಟಾಕ್‌ ಶೋನಲ್ಲಿ ಮಾತನಾಡಿದ್ದ ನಟಿ, ದಕ್ಷಿಣ ಭಾರತದಲ್ಲಿ ಫುಲ್‌ ಬೌಂಡ್‌ ಸಿನಿಮಾ ಸ್ಕ್ರಿಪ್ಟ್‌ ಸಿಗಲ್ಲ. ಹಾಗಾಗಿ ನಾವು ನಿರ್ದೇಶಕರು ಹೇಳಿದಂತೆ ಕೇಳಬೇಕಾಗುತ್ತದೆ. ಕ್ಯಾಮೆರಾ ಎಲ್ಲಿದೆ ಎನ್ನುವುದು ಗೊತ್ತಾಗಲ್ಲ. ನನ್ನದೂ ತಪ್ಪಿದೆ ಪ್ರಶ್ನಿಸಬೇಕಿತ್ತು ಎಂದಿದ್ದರು. ಇನ್ನೂ ರಾಧಿಕಾ ಆಪ್ಟೆ ಅವರು ಅಕ್ಕ ವೆಬ್‌ ಸರಣಿ ಪ್ರಚಾರ ಕಾರ್ಯದ ವೇಳೆ ಮಾತನಾಡಿ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಮಗಿಂತ ದೊಡ್ಡವರ ಜೊತೆ ರೊಮ್ಯಾನ್ಸ್‌ ಮಾಡಬೇಕು. ಅದು ಕಷ್ಟ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು

ರೆಜಿನಾ ಏನಂದ್ರು?

ʻಮೂಕುತಿ ಅಮ್ಮನ್‌ʼ ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿದ್ದ ನಟಿ ರೆಜಿನಾಗೆ ಈ ಬಗ್ಗೆ ಪ್ರಶ್ನೆ ನಿರೂಪಕಿ ಪ್ರಶ್ನೆ ಮಾಡಿದಾಗ ಅವರು ಮಾತನಾಡಿದ್ದು ಹೀಗೆ, ʻಒಬ್ಬ ಉತ್ತರ ಭಾರತದ ನಟಿಯು ದಕ್ಷಿಣ ಭಾರತದ ಸಿನಿಮಾದ ಬಗ್ಗೆ ಉತ್ತರ-ದಕ್ಷಿಣ ವಿಭಜನೆಯನ್ನು ಸೃಷ್ಟಿಸುವ ರೀತಿಯಲ್ಲಿ ಮಾತನಾಡುವುದನ್ನು ನಾನು ವಿರೋಧಿಸುತ್ತೇನೆ. ನಿಮಗೆ ಪ್ರಾಜೆಕ್ಟ್‌ನ ಕಲ್ಪನೆ ಇಷ್ಟವಾಗದಿದ್ದರೆ, ತಕ್ಷಣವೇ ಹೊರಬಂದು ಆ ಬಗ್ಗೆ ಸುದ್ದಿಯನ್ನು ಸೃಷ್ಟಿಸಿ. ಬದಲಿಗೆ, ಬಹಳ ಸಮಯದ ನಂತರ ಮಾತನಾಡಿ ಉತ್ತರ ಮತ್ತು ದಕ್ಷಿಣದ ನಡುವೆ ದ್ವೇಷವನ್ನು ಹುಟ್ಟುಹಾಕಬೇಡಿʼಎಂದು ರೆಜಿನಾ ಅಭಿಪ್ರಾಯಪಟ್ಟರು.

ತಿರಸ್ಕರಿಸುವ ಸ್ವಾತಂತ್ಯವಿದೆ

ಜಾನ್ವಿ ಕಪೂರ್ ಮತ್ತು ರಾಧಿಕಾ ಆಪ್ಟೆ ತಮ್ಮ ಅನುಭವಗಳ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ, ಕಲಾವಿದರಿಗೆ ತಾವು ಒಪ್ಪದ ವಿಚಾರಗಳು ಅಥವಾ ಪಾತ್ರಗಳಿದ್ದರೆ ನಿರ್ದೇಶಕರು ಅಥವಾ ನಿರ್ಮಾಪಕರ ಜೊತೆ ಮಾತನಾಡಿ ಆ ಪ್ರಾಜೆಕ್ಟ್‌ನಿಂದ ಹೊರಬರುವ ಸ್ವಾತಂತ್ರ್ಯವಿದೆ ರೆಜಿನಾ ಮನದಟ್ಟು ಮಾಡಿದರು.

ಇದನ್ನೂ ಓದಿ: ರಾಮಾಯಣ ಸಿನಿಮಾಕ್ಕೆ ವೀಕ್ಷಕರಿಂದ ಸಿಕ್ತು 3.5 ರೇಟಿಂಗ್;‌ ರಣಬೀರ್‌ ಆಕ್ಟಿಂಗ್‌ ಬೋರಿಂಗ್‌, ಯಶ್‌ ನಟನೆ ಅದ್ಭುತ ಎಂದ ಸಿನಿ ಪ್ರೇಮಿಗಳು

ಧರ್ಮ ಪ್ರೊಡಕ್ಷನ್ಸ್ ವಿರುದ್ಧ ರೆಜಿನಾ ಆರೋಪ

ಈ ಸಂದರ್ಭದಲ್ಲಿ ತಮ್ಮ ಸ್ವಂತ ಅನುಭವವೊಂದನ್ನು ಹಂಚಿಕೊಂಡ ರೆಜಿನಾ, ಕರಣ್ ಜೋಹರ್ ಅವರ ‘ಧರ್ಮ ಪ್ರೊಡಕ್ಷನ್ಸ್’ ಬ್ಯಾನರ್ ವಿರುದ್ಧ ಕಿಡಿಕಾರಿದರು.  ʻಅಕ್ಷಯ್ ಕುಮಾರ್ ಅಭಿನಯದ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ಅಕ್ಷಯ್ ಅವರ ಪತ್ನಿಯಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೂ, ಯಾವುದೇ ಸ್ಪಷ್ಟನೆ ನೀಡದೆ ಪ್ರಚಾರದಿಂದ ತಮ್ಮ ಹೆಸರನ್ನು ಕೈಬಿಟ್ಟಿದ್ದರು.  ಅಷ್ಟೇ ಅಲ್ಲದೆ, ತಾವಿದ್ದ ಹಾಡೊಂದನ್ನು ಬಿಡುಗಡೆ ಮಾಡಿದಾಗಲೂ ತಮ್ಮನ್ನು ಟ್ಯಾಗ್ ಮಾಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ರೀತಿಯ ತಾರತಮ್ಯಕ್ಕೆ ನಾನು ದಕ್ಷಿಣ ಭಾರತದ ನಟಿಯಾಗಿರುವುದೇ ಕಾರಣವೇ?ʼ ಎಂದು ರೆಜಿನಾ ಪ್ರಶ್ನಿಸಿದರು.

ಇದನ್ನೂ ನೋಡಿ:ಯುವತಲೆಮಾರಿಗಾಗಿ ಕುವೆಂಪು |’ವಿಚಾರ ಕ್ರಾಂತಿಗೆ ಆಹ್ವಾನ’ – ಧ್ವನಿ : ಎಚ್.ವಿ. ನಟರಾಜ

Donate Janashakthi Media

Leave a Reply

Your email address will not be published. Required fields are marked *