- 2000 ಸರ್ಕಾರಿ ಶಾಲೆಗಳ ಖಾಸಗೀಕರಣ ಹಾಗೂ 45,000 ಶಾಲೆಗಳ ಮುಚ್ಚುವಿಕೆ ಯತ್ನ.
- ಸರ್ಕಾರದ ವಿರುದ್ಧ AIDSO ಆಕ್ರೋಶ, ಹಾಸನದಲ್ಲಿ ಪ್ರತಿಭಟನೆ.
- ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆ ನೀಗಿಸಿಕೊಳ್ಳದೆ ಸರ್ಕಾರ ಜಾರಿಕೊಳ್ಳುತ್ತಿದೆ.
ಹಾಸನ: ಕೆಪಿಎಸ್-ಮ್ಯಾಗ್ನೆಟ್ ನೀತಿ ಹಾಗೂ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಸಾಲದ ಒಪ್ಪಂದದ ಮೂಲಕ ರಾಜ್ಯದ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರದ ಜನದ್ರೋಹಿ ನಿರ್ಧಾರವನ್ನು ಖಂಡಿಸಿ ಎಐಡಿಎಸ್ಒ ಹಾಸನದಲ್ಲಿ ಪ್ರತಿಭಟನೆ ನಡೆಸಿತು. ಸರ್ಕಾರಿ ಶಾಲೆ
ಖಾಸಗಿ ಶಾಲೆಗಳು, ಗ್ರಾಮೀಣ ಶಾಲೆಗಳ ಅಭಿವೃದ್ಧಿಗಾಗಿ ದತ್ತು ಪಡೆದುಕೊಳ್ಳಿ. ಶಿಕ್ಷಕರನ್ನು, ಕಂಪ್ಯೂಟರ್ ಲ್ಯಾಬ್ ಒದಗಿಸಿ ಎಂದು ಬುಧವಾರ ವಿಧಾನಸೌಧದಲ್ಲಿ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದರು. ಸರ್ಕಾರಿ ಶಾಲೆಗಳ ಖಾಸಗೀಕರಣದ ವಿರುದ್ಧ ಹಾಸನ ಜಿಲ್ಲಾ ಕೌನ್ಸಿಲ್ ನೇತೃತ್ವದಲ್ಲಿ ನಗರದ ಹೇಮಾವತಿ ಪ್ರತಿಮೆ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಎಐಡಿಎಸ್ಒ ಹೇಳಿದ್ದೇನು?
ಸರ್ಕಾರಿ ಶಾಲೆಗಳನ್ನು ಕಾರ್ಪೊರೇಟ್ ಕಂಪನಿಗಳು ಹಾಗೂ ಖಾಸಗಿ ಶಾಲೆಗಳಿಗೆ ಹಸ್ತಾಂತರಿಸಲು ನವೆಂಬರ್ 4ರಂದು ವಿಧಾನಸೌಧದಲ್ಲಿ ಸಭೆ ನಡೆಸಿ, ಮೊದಲ ಹಂತದಲ್ಲಿ 2000 ಶಾಲೆಗಳನ್ನು ಖಾಸಗಿಯವರಿಗೆ ದತ್ತು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ: ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ AIDSO ಜಿಲ್ಲಾಧ್ಯಕ್ಷೆ ಚೈತ್ರ, “ಒಂದೆಡೆ ದೇಶಾದ್ಯಂತ ‘ಪ್ರಜಾತಂತ್ರ ಉಳಿಸಿ’ ಎಂದು ಯಾತ್ರೆ ನಡೆಸುತ್ತೀರಿ; ಆದರೆ ನಿಮ್ಮದೇ ಆಳ್ವಿಕೆ ಇರುವ ರಾಜ್ಯದಲ್ಲಿ ಬಡವರ ಮಕ್ಕಳು ಓದುವ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಯಾವ ಪ್ರಜಾತಂತ್ರವನ್ನು ಉಳಿಸಲು ಹೊರಟಿದ್ದೀರಿ?” ಎಂದು ಆಡಳಿತ ಪಕ್ಷವನ್ನು ನೇರವಾಗಿ ಪ್ರಶ್ನಿಸಿದರು.
ಶಿಕ್ಷಕರ ಮೇಲಿನ ಆರೋಪಕ್ಕೆ ಆಕ್ಷೇಪ
ಗುಣಮಟ್ಟದ ಕುಸಿತದಲ್ಲಿ ಸರ್ಕಾರದ ನೀತಿಗಳ ಪಾತ್ರವನ್ನು ಕಡೆಗಣಿಸಿ, ಮುಖ್ಯಮಂತ್ರಿಗಳು ಹಾಗೂ ಸರ್ಕಾರದ ಪ್ರತಿನಿಧಿಗಳು ಸರ್ಕಾರಿ ಶಾಲಾ ಶಿಕ್ಷಕರ ಕುರಿತು ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕಾದ ಸರ್ಕಾರ, ಶಿಕ್ಷಣದ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆ
ಇದನ್ನೂ ಓದಿ: ʼಮತಗಳ್ಳತನಕ್ಕೆ ಕುಮಕ್ಕು, ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆʼ: ಸಿಎಂ ಡಿಕೆ ಶಿವಕುಮಾರ್
ಕೆಪಿಎಸ್ ವಿಲೀನದ ಹೆಸರಲ್ಲಿ ಶಾಲೆಗಳ ಬಂದ್
‘ಒಂದೇ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲ’ ಎಂದು ಪ್ರತಿಪಾದಿಸುತ್ತಾ ಬಂದಿರುವ ಸರ್ಕಾರ, ಈಗಾಗಲೇ ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರದ ಹೆಗ್ಗನೂರು ಕೆಪಿಎಸ್ಗೆ 14 ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಮುಚ್ಚಿದೆ. ಇದು ನಾಡಿನ ಜನತೆಗೆ ಮಾಡಿರುವ ದ್ರೋಹ ಎಂದು ಆಪಾದಿಸಿದರು.
ಎಡಿಬಿ ಒಪ್ಪಂದಕ್ಕೆ ವಿರೋಧ ವ್ಯಕ್ತ
ಎಡಿಬಿಯೊಂದಿಗೆ ಕರಾಳ ಒಪ್ಪಂದ ಮಾಡಿಕೊಂಡಿರುವ ಮೂಲಕ ಸರ್ಕಾರವು ನಾಡಿನ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗೆ ಮರಣ ಶಾಸನ ಬರೆದಿದೆ ಎಂದು ಆರೋಪಿಸಿದ ಸಂಘಟನೆ, ಕೂಡಲೇ ಈ ಶಿಕ್ಷಣ ವಿರೋಧಿ ನೀತಿಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿತು.
ಈ ಪ್ರತಿಭಟನೆಯಲ್ಲಿ AIDSO ಜಿಲ್ಲಾಧ್ಯಕ್ಷೆ ಚೈತ್ರ, ಜಿಲ್ಲಾ ಕಾರ್ಯದರ್ಶಿ ಸುಷ್ಮಾ ಹಾಗೂ ಕಾರ್ಯಕರ್ತರಾದ ಪುರುಷೋತ್ತಮ್, ಪ್ರಾರ್ಥನಾ, ಧನಲಕ್ಷ್ಮಿ, ಶೃತಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸರ್ಕಾರಿ ಶಾಲೆ
ಇದನ್ನೂ ನೋಡಿ: ಎಸ್ಐಆರ್ ಹೆಸರಿನಲ್ಲಿ ಜೀವಂತ ಮತದಾರರ ಹೆಸರು ಡಿಲೀಟ್: ಮೋದಿ, ಜ್ಞಾನೇಶ್ ಕುಮಾರ್ ವಿರುದ್ಧ ಪ್ರಕಾಶ್ ರಾಜ್ ಆರೋಪ
