ಪ್ರಧಾನಿ ಮೋದಿ ಬಾನ್ಸ್ ವಾರಾ ಭಾಷಣ – factcheck

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ ರಾಜಸ್ತಾನದಲ್ಲಿ ಚುನಾವಣಾ ಪ್ರಚಾರ ಭಾಷಣ‌ ಮಾಡುವಾಗ ಸಾರ್ವಜನಿಕ ಸಮಾವೇಶ ವೊಂದರಲ್ಲಿ ಹಲವು‌ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ನಾಗರಾಜ ನಂಜುಂಡಯ್ಯ

ಇವುಗಳಲ್ಲಿ ಎರಡು ಹೇಳಿಕೆಗಳ fact check ಮಾಡಬೇಕಾಗಿದೆ.

೧. ಮುಸ್ಲಿಮರ ಜನಸಂಖ್ಯೆ ಅಪಾಯಕಾರಿಯಾಗಿ ಏರುತ್ತಿದೆ

೨. ಕಾಂಗ್ರೆಸ್ ದೇಶದ ಸಂಪತ್ತನ್ನು ಇತರರಿಂದ ಕಿತ್ತುಕೊಂಡು ಮುಸ್ಲಿಮರಿಗೆ ಹಂಚಲಿದೆ

ಮುಸ್ಲಿಮರನ್ನು ಕುರಿತಾಗಿ “ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ಹೊಂದಿರುವವರು ” ಎಂದು ಮೋದಿ ಕರೆದಿದ್ದಾರೆ. ಈ ಮೊದಲ ವಾದ ಆರೆಸ್ಸೆಸ್ ಹಲವು ದಶಕಗಳಿಂದ ನಡೆಸುತ್ತಾ ಬಂದಿರುವ ಹಳೆಯ ವಾದ. ಅವರನ್ನು ನುಸುಳುಕೋರರು ಎಂದೂ ಕರೆದಿದ್ದಾರೆ.

ಎರಡನೆಯದು ‘ಕಾಂಗ್ರೆಸ್ ಮುಸ್ಲಿಮರ ತುಷ್ಟೀಕರಣ ಮಾಡುತ್ತಿದೆ’ ಎಂಬ ಹಳೆಯ ವಾದದ ಹೊಸ ಅವತಾರ.

ಎರಡನೆಯ ವಾದಕ್ಕೆ ‘ಪುರಾವೆ’ಯಾಗಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರು (2006 ರಲ್ಲಿ) ನೀಡಿದ ಹೇಳಿಕೆ‌ಯನ್ನು ತಿರುಚಿ “ಮುಸ್ಲಿಮರು ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಹೊಂದಿದ್ದಾರೆ” ಎಂದು ಹೇಳಿದ್ದರು ಎಂದಿದ್ದಾರೆ. ಪ್ರಸ್ತುತ 2024ರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮುಸ್ಲಿಮರಿಗೆ ಹಂಚುವ ಪ್ರಸ್ತಾಪವಿದೆ’ ಎಂದೂ ಪ್ರದಾನಿ‌ ಮೋದಿ ಆರೋಪಿಸಿದ್ದಾರೆ.

ಸಂಪತ್ತಿನಲ್ಲಿ ಅಸಮಾನತೆಯನ್ನು ತಿಳಿಸುವ ಕಾಂಗ್ರೇಸ್ ಪ್ರಣಾಳಿಕೆಯಲ್ಲಿನ ಹಲವು ವಿಭಾಗಗಳನ್ನು ಮತ್ತು 2006 ರಲ್ಲಿ ಮಾಜಿ ಪ್ರಧಾನಿಯವರ ಭಾಷಣಕ್ಕೆ ಆ ಅಂಶಗಳನ್ನು ತಪ್ಪು‌‌ ತಪ್ಪಾಗಿ ಜೋಡಿಸುವ ಮೂಲಕ ಮೋದಿ ಯವರು ಈ ‘ಪುರಾವೆ’ ಒದಗಿಸಿದ್ದಾರೆ.

ಈ ಎರಡು ಅಂಶಗಳ‌ ಬಗ್ಗೆ ಸರ್ಕಾರದ ಡೇಟಾ ವನ್ನೇ ಬಳಸಿಕೊಂಡು fact check ಇಲ್ಲಿದೆ:

‘ಮುಸ್ಲಿಮರು ಹೆಚ್ಚು ಮಕ್ಕಳು ಹೊಂದುತ್ತಾರೆ’ ನಿಜವಲ್ಲ

                                                   ಕೋಷ್ಟಕ 1 ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಮಹಿಳೆಯರ ಫಲವತ್ತತೆಯ ದರ

ಕೋಷ್ಟಕ 1, ಎಲ್ಲಾ ಧಾರ್ಮಿಕ ಗುಂಪುಗಳಲ್ಲಿ ಮಹಿಳೆಯರ ಫಲವತ್ತತೆಯ ದರಗಳನ್ನು ತೋರಿಸುತ್ತದೆ. ಫಲವತ್ತತೆ ದರವು ಮಹಿಳೆಯು ತನ್ನ ಜೀವಿತ ಅವಧಿಯಲ್ಲಿ ಹೆರುವ ಸರಾಸರಿ ಮಕ್ಕಳ ಸಂಖ್ಯೆ. ಈ ದರ 2.1 ಇದ್ದರೆ ಮರಣದಿಂದ ಕಡಿಮೆಯಾಗುವ ಜನಸಂಖ್ಯೆಯನ್ನು ತುಂಬಿಕೊಡುವ ಮಟ್ಟ ಅಂದರೆ ಜನಸಂಖ್ಯೆ ಸ್ಥಿರವಾಗಿದೆ ಎಂದರ್ಥ.

ಎಲ್ಲಾ ಇತರ ಧಾರ್ಮಿಕ ಗುಂಪುಗಳ ಫಲವತ್ತತೆಯ ದರಗಳೊಂದಿಗೆ ಮುಸ್ಲಿಮರ ಫಲವತ್ತತೆಯ ದರವು ಕೂಡ ಹಲವು ವರ್ಷಗಳಲ್ಲಿ ತೀವ್ರವಾಗಿ ಕುಸಿಯುತ್ತಿರುವುದನ್ನು ಕೋಷ್ಟಕವು ಎತ್ತಿ ತೋರಿಸುತ್ತದೆ.

 

                            ಕೋಷ್ಟಕ 2  ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ  ಮಹಿಳೆಯರ ಫಲವತ್ತತೆಯ ದರ

2019 -21 ರ ಮಾಹಿತಿಯ ಪ್ರಕಾರ, ಮುಸ್ಲಿಮರ ಫಲವತ್ತತೆ ದರವು 2.36 ಆಗಿತ್ತು, ಇದು ಸ್ಥಿರ ಜನಸಂಖ್ಯೆಯ ಮಟ್ಟಕ್ಕೆ ಹೆಚ್ಚು ಹತ್ತಿರದಲ್ಲಿದೆ. ಅಲ್ಲದೆ, ಎರಡು ದಶಕಗಳಲ್ಲಿ ಹಿಂದೂ ಮತ್ತು ಮುಸ್ಲಿಂ ಮಹಿಳೆಯರ ಫಲವತ್ತತೆಯ ಮಟ್ಟಗಳ ನಡುವಿನ ಅಂತರವು (ಕೋಷ್ಟಕದಲ್ಲಿ ಬಿ-ಎ) 0.81 ರಿಂದ 0.42 ಕ್ಕೆ ತೀವ್ರವಾಗಿ ಕಡಿಮೆಯಾಗಿದೆ. ಈ ಪ್ರವೃತ್ತಿಯು ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ    ( ಕೋಷ್ಟಕ 2) ಸಹ ವಾಸ್ತವವಾಗಿ ಸ್ಪಷ್ಟಗೊಂಡಿದೆ.

ಇದನ್ನು ಓದಿ : ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನಕ್ಕೆ ವಿಕಲಚೇತನರು, ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯ

ದಲಿತ, ಬುಡಕಟ್ಟು ಮತ್ತು ಮುಸ್ಲಿಮರ ಸಬಲೀಕರಣ ಅಗತ್ಯ.

ಡಿಸೆಂಬರ್ 6, 2006 ರ ಸರ್ಕಾರಿ ಪತ್ರಿಕಾ ಪ್ರಕಟಣೆಯಲ್ಲಿ, ಡಾ. ಮನಮೋಹನ್ ಸಿಂಗ್ ಹೇಳಿದ್ದ, ಕೆಲವು ಆಯ್ದ ಭಾಗಗಳು ಈ ಕೆಳಗಿನಂತೆ ಉಲ್ಲೇಖಿತವಾಗಿವೆ:

“ಕೃಷಿ, ನೀರಾವರಿ ಮತ್ತು ಜಲಸಂಪನ್ಮೂಲ, ಆರೋಗ್ಯ, ಶಿಕ್ಷಣ, ಇತ್ಯಾದಿ ….ಮತ್ತು… ಎಸ್‌ಸಿ/ಎಸ್‌ಟಿಗಳು, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಮತ್ತು ಮಕ್ಕಳ ಉನ್ನತೀಕರಣಕ್ಕಾಗಿ ನಮ್ಮ ಸಾಮೂಹಿಕ ಆದ್ಯತೆಯು ಸ್ಪಷ್ಟವಾಗಿದೆ ಎಂಬುದು ನನ್ನ ನಂಬಿಕೆಯಾಗಿದೆ… . ದುರ್ಬಲ ವರ್ಗಗಳು, ವಿಶೇಷವಾಗಿ ಮುಸ್ಲಿಮರು ಅಭಿವೃದ್ಧಿಯ ಫಲವನ್ನು ಸಮಾನವಾಗಿ ಪಡೆಯವಂತೆ, ಸಂಪನ್ಮೂಲಗಳ ಹಂಚಿಕೆಗಳ ಮೇಲೆ ಮೊದಲ ಹಕ್ಕು ಹೊಂದಿರಬೇಕು”.

ಡಾ. ಸಿಂಗ್ ಅವರ ಹೇಳಿಕೆಯು ಮುಸ್ಲಿಮರು ಸೇರಿದಂತೆ ಸಮಾಜದ ಎಲ್ಲಾ ದುರ್ಬಲ ವರ್ಗಗಳನ್ನು ಗುರಿಯಾಗಿಸಿಕೊಂಡಿತ್ತು ಎಂಬುದು ಇದರಿಂದ ಸ್ಪಷಗೊಂಡಿದೆ. ಆದರೆ, ಪ್ರದಾನಿ‌ ಮೋದಿಯವರು, ಮುಸ್ಲಿಂ ರಿಗೆ‌ ಮಾತ್ರ ಎಂದು ತಿರುಚಿ ಹೇಳಿದ್ದಾರೆ.

ಡಾ.‌ಮನಮೋಹನ್ ರವರು ಎಲ್ಲಾ ದುರ್ಬಲ ವರ್ಗಗಳ ಬಗ್ಗೆ, ವಿಶೇಷವಾಗಿ ಮುಸ್ಲಿಮರು ಎಂಬ ಹೇಳಿಕೆಯು, ಮುಸ್ಲಿಮರು ಇತರ ಧಾರ್ಮಿಕ ಗುಂಪುಗಳಿಗಿಂತ ಹಲವಾರು ಸೂಚ್ಯಾಂಕ ಗಳಲ್ಲಿ ಹಿಂದುಳಿದಿದ್ದಾರೆ ಎಂದು ತೋರಿಸುವ ಡೇಟಾದಿಂದ ಬೆಂಬಲಿತವಾಗಿದೆ.

                                                                ಕೋಷ್ಟಕ 3 ಎಲ್ಲಾ ಧಾರ್ಮಿಕ ಗುಂಪುಗಳಲ್ಲಿಶಾಲಾ ಶಿಕ್ಷಣದ ಮಟ್ಟ

ಕೋಷ್ಟಕ 3 ಲಿಂಗಗಳ ಕುರಿತಾಗಿದೆ. ಗಮನಿಸಿ, 2005-06ರಲ್ಲಿ ಇತರ ಧಾರ್ಮಿಕ ಗುಂಪುಗಳಿಗಿಂತ ಶಾಲೆಗೆ ಹೋಗದವರಲ್ಲಿ, ಮುಸ್ಲಿಂ ರ ಪಾಲು ಹೆಚ್ಚಾಗಿದೆ. 2019-21ರಲ್ಲಿ ಶಾಲೆಗೆ ಹೋಗದಿರುವ ಮುಸ್ಲಿಂ ರ ಪಾಲಿನಲ್ಲಿ ಹೆಚ್ಚಳವಾದರೂ ಇತರ ಧಾರ್ಮಿಕ ಗುಂಪುಗಳಿಗಿಂತ (ಅಂತರ ಕಡಿಮೆಯಾದರೂ) ಕಡಿಮೆಯಿತ್ತು.‌‌ ಅದೇ ರೀತಿ, 2005-06ರಲ್ಲಿ 12 ವರ್ಷಗಳ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಮುಸ್ಲಿಮರ ಪಾಲು ಎಲ್ಲಾ ಧಾರ್ಮಿಕ ಗುಂಪುಗಳಿಗಿಂತ ಅತ್ಯಂತ ಕಡಿಮೆಯಾಗಿತ್ತು ಮತ್ತು 2019-21ರಲ್ಲಿ ಅದು ಹಾಗೆಯೇ ಮುಂದುವರೆಯಿತು.

 

ಕೋಷ್ಟಕ 4    ಹಿಂದೂಗಳು ಮತ್ತು ಮುಸ್ಲಿಮರಲ್ಲಿ ನನವಜಾತ ಶಿಶುಗಳ ಮರಣ ಪ್ರಮಾಣ (NMR) ಮತ್ತು ಐದು ವರ್ಷದೊಳಗಿನ ಮರಣ ಪ್ರಮಾಣ (U5MR)

ಕೋಷ್ಟಕ 4 ರಲ್ಲಿ, ಹಿಂದೂಗಳು ಮತ್ತು ಮುಸ್ಲಿಮರಲ್ಲಿ ನನವಜಾತ ಶಿಶುಗಳ ಮರಣ ಪ್ರಮಾಣ (NMR) ಮತ್ತು ಐದು ವರ್ಷದೊಳಗಿನ ಮರಣ ಪ್ರಮಾಣ (U5MR) ವಜಾತ ಶಿಶುಗಳ ಮರಣ ಪ್ರಮಾಣ (NMR) ಮತ್ತು ಐದು ವರ್ಷದೊಳಗಿನ ಮರಣ ಪ್ರಮಾಣ (U5MR) ಅನ್ನು ತೋರಿಸಿದೆ. NMR ಪ್ರತಿ 1,000 ಜೀವಂತ ಜನನಗಳ ಮೊದಲ ತಿಂಗಳಲ್ಲಿನ ಸಾವಿನ ಸಂಖ್ಯೆಯನ್ನು ಸೂಚಿಸುತ್ತದೆ. ಸಂಖ್ಯೆ ಕಡಿಮೆ ಇದೆ ಎಂದರೆ, ಉತ್ತಮ ಎಂದರ್ಥ. ಹಿಂದೂಗಳಲ್ಲಿ NMR ನಲ್ಲಿನ ಇಳಿಕೆ (ಅಂದರೆ ಉತ್ತಮಗೊಂಡ ಪ್ರಮಾಣ) ಮುಸ್ಲಿಮರಿಗಿಂತ ಹೆಚ್ಚಾಗಿದೆ. 1998-99 ರಲ್ಲಿ, ನಗರ ಹಿಂದೂಗಳಲ್ಲಿ NMR 36.6 ಆಗಿತ್ತು, ಇದು ನಗರ ಮುಸ್ಲಿಮರಲ್ಲಿ 25.9 ಕ್ಕಿಂತ ಹೆಚ್ಚು. ಈ ಅಂತರವು 2005-06ರಲ್ಲಿ ನಗರ ಹಿಂದೂಗಳಲ್ಲಿ 30.9 ಮತ್ತು ನಗರ ಮುಸ್ಲಿಮರಲ್ಲಿ 21.6 ಕ್ಕೆ ಕಡಿಮೆಯಾಯಿತು. 2019-21 ರಲ್ಲಿ, ನಗರ ಹಿಂದೂಗಳ NMR 18.4 ಕ್ಕೆ ಇಳಿದಿದೆ, ಇದು ನಗರ ಮುಸ್ಲಿಮರಲ್ಲಿ ದಾಖಲಾದ 18.7 ಕ್ಕಿಂತ ಕಡಿಮೆಯಾಗಿದೆ. ಮುಸ್ಲಿಂ ಜನಸಂಖ್ಯೆಗೆ ಹೋಲಿಸಿದರೆ ಹಿಂದೂ ಜನಸಂಖ್ಯೆಯಲ್ಲಿ NMR ನಲ್ಲಿ ಹೆಚ್ಚಿನ ಕುಸಿತವು ಗ್ರಾಮೀಣ ಪ್ರದೇಶಗಳಲ್ಲಿಯೂ ಕಂಡುಬಂದಿದೆ. U5MR ನ ವಿಶ್ಲೇಷಣೆಯು ಇದೇ ಪ್ರವೃತ್ತಿಯನ್ನು ತೋರಿಸುತ್ತದೆ.

ಇನ್ನೂ ಹಲವು ಇತರ ಸೂಚಕಗಳ – ನಿರುದ್ಯೋಗ, ಬಡತನ ಗಳ -ಪ್ರಮಾಣ ತೆಗೆದುಕೊಂಡರೆ ಮುಸ್ಲಿಮರು ಅಭಿವೃದ್ಧಿಯಿಂದ ವಂಚಿತರು ಎಂಬುದು ಸ್ಪಷ್ಟ. ಹಿಂದೂಗಳ ಒಳಗೆ ಎಸ್.ಸಿ, ಎಸ್.ಟಿ ಜನ ಸಹ ಇದೇ ರೀತಿ ಅಭಿವೃದ್ಧಿಯ ಫಲಗಳಿಂದ ವಂಚಿತರು. ಸಂಪನ್ಮೂಲಗಳ ಹಂಚಿಕೆಯಲ್ಲಿ ದಲಿತರು, ಬುಡಕಟ್ಟು ಜನರಂತೆ ಮುಸ್ಲಿಮರಿಗೂ ಪ್ರಥಮ ಆದ್ಯತೆ ಕೊಡಬೇಕು ಎಂಬುದು ಸ್ಪಷ್ಟ..

ಮೊದಲಿಗೆ ಮುಸ್ಲಿಮರಿಗೆ, ಆ ಮೇಲೆ ಎಲ್ಲ ಅಭಿವೃದ್ಧಿ ವಂಚಿತ – ದಲಿತರು, ಬುಡಕಟ್ಟು – ಜನರಿಗೆ ಸಂಪನ್ಮೂಲ ಹಂಚಿಕೆಯಲ್ಲಿ ಆದ್ಯತೆಯನ್ನು ವಿರೋಧಿಸುವ ಹುನ್ನಾರ ಇಂತಹ ವಾದಗಳ ಹಿಂದಿದೆ ಎಂಬುದೂ ಸ್ಪಷ್ಟ.

((ಆಧಾರ: ದಿ ಹಿಂದೂ, data point ಎಪ್ರಿಲ್ 23-2024)

ಇದನ್ನು ನೋಡಿ : ಗ್ಲೆನ್‌ಮಾರ್ಕ್ ನಿಂದ ಚುನಾವಣಾ ಬಾಂಡ್ ಖರೀದಿ : ಕೇಂದ್ರ ಸರ್ಕಾರದ ಕೊಲೆಗಡುಕತನ ಬಯಲು – ಬಾನು ಮುಷ್ತಾಕ್

Donate Janashakthi Media

Leave a Reply

Your email address will not be published. Required fields are marked *