ಶಿವಧೂತ ಗುಳಿಗ ನಾಟಕದ ಬಗ್ಗೆ ಸಚಿವ ಆರಗ ಜ್ಞಾನೇಂದ್ರ ನಿಂದನೆ

ಮಂಗಳೂರು: ಗೃಹ ಸಚಿವ ಆರಗ ಜ್ಷಾನೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಶಿವಧೂತ ಗುಳಿಗ ನಾಟಕದ ಬಗ್ಗೆ ಅವಹೇಳನ ಮಾಡಿದ್ದಾರೆಂದು ಕರಾವಳಿ ಭಾಗದ ಜನ ಆಕ್ರೋಶ ಹೊರಹಾಕಿದ್ದಾರೆ.

ಮಾರ್ಚ್ 15 ರಂದು ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ವಿಜಯ ಕುಮಾರ್ ಕೊಡಿಯಾಲಬೈಲ್ ರಚಿಸಿ ನಿರ್ದೇಶಿಸಿದ ‘ಶಿವದೂತೆ ಗುಳಿಗ’ ನಾಟಕ ಪ್ರದರ್ಶನ ಕಂಡಿದೆ. ಅಲ್ಲದೇ ಪ್ರಚಾರಕ್ಕೆ ಬ್ಯಾನರ್ ಗಳು ಮತ್ತು ಪೋಸ್ಟರ್ ಗಳನ್ನು ಅಂಟಿಸಲಾಗಿತ್ತು. ಮರುದಿನ ಬಿಜೆಪಿಯಿಂದ ನಡೆದ ರೈತ ಸಮಾವೇಶದಲ್ಲಿ ಭಾಗವಹಿಸಿದ ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್ ಸಂಘಟಿಸಿದ ನಾಟಕಕ್ಕೆ ಹತ್ತು ಸಾವಿರಕ್ಕೂ ಹೆಚ್ಚು ಜನರು ಸೇರಿರುವುದು ತಿಳಿಯುತ್ತಲೇ ಸ್ವಲ್ಪ ವಿಚಲಿತರಾಗಿದ್ದಾರೆ. ಮಾತ್ರವಲ್ಲ ಅಸಹನೆಯಿಂದ ಸಭೆಯಲ್ಲಿ ತುಳುನಾಡಿನ ಜನರ ಆರಾಧ್ಯ ದೈವ ಗುಳಿಗನ ಬಗ್ಗೆ ಅಪಹಾಸ್ಯ ಮಾಡಿ ಮಾತನಾಡಿದ್ದು ದೈವಾರಾಧಕರು ಮತ್ತು ನಾಟಕ ಪ್ರಿಯರು ಆಕ್ರೋಶಗೊಳ್ಳುವಂತೆ ಮಾಡಿದೆ.

ಆರಗ ಹೇಳಿದ್ದೇನು..?:
ಯಾವುದೋ ಗುಳಿಗೆ ಕೊಡ್ತಾರಂತೆ, ಜಪಾಲ್ ಗುಳಿಗೆ ಕೊಟ್ರು ಕೊಡಬಹುದು. ಹೊಸ ಹೊಸ ನಾಟಕ ಶುರು ಮಾಡಿದ್ದಾರೆ ಎಂದು ನಿಂದಿಸಿರುವುದು ತೀರ್ಥಹಳ್ಳಿಯಲ್ಲಿ ನೆಲೆಸಿರುವ ದ.ಕ ಮೂಲದ ಜನರನ್ನು ಕೆರಳಿಸಿದೆ. ಗುಳಿಗ ದ.ಕ ಜಿಲ್ಲೆಯ ಜನರ ಆರಾಧ್ಯ ದೈವ. ಜನ ಶ್ರದ್ಧಾ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಆ ದೈವದ ಬಗ್ಗೆ ವ್ಯಂಗ್ಯವಾಗಿ, ಅಸಹನೆಯಿಂದ, ಅಪಹಾಸ್ಯ ಮಾಡಿ ಗೃಹ ಸಚಿವರು ಮಾತನಾಡಿರುವುದು ಸರಿಯಲ್ಲ ಜನ ಆಕ್ರೋಶಗೊಂಡಿದ್ದಾರೆ.

ಕಾಂಗ್ರೆಸ್ ಅನ್ನು ಟೀಕಿಸಿ ದ್ದೇನೆ, ತುಳು ಸಂಸ್ಕೃತಿ, ದೈವಗಳನ್ನಲ್ಲ:
ನಾನು ‘ಕಾಂಗ್ರೆಸ್ ಅನ್ನು ಟೀಕಿಸಿ ದ್ದೇನೆ, ತುಳು ಸಂಸ್ಕೃತಿ, ದೈವಗಳನ್ನಲ್ಲ. ನೆರೆಯ ತುಳು ನಾಡಿನಲ್ಲಿ, ಶ್ರದ್ಧಾ ಭಕ್ತಿಯಿಂದ ಆರಾಧಿಸುವ, ಗುಳಿಗ ದೈವವನ್ನು ಆಧರಿಸಿ, ರಚಿಸಿರುವ ಪೌರಾಣಿಕ ನಾಟಕದ ಬಗ್ಗೆ ಮೆಚ್ಚುಗೆ ಇದೆ. ಹಾಗೂ ದೈವದ ಬಗ್ಗೆ ಅಪಾರ ಭಕ್ತಿ ಗೌರವವನ್ನು ಹೊಂದಿದ್ದೇನೆ. ಎಂದು ಆರಗ ಹೇಳಿದ್ದಾರೆ.
ಮುಂದುವರಿದು,
ತೀರ್ಥಹಳ್ಳಿಯ ಸ್ಥಳೀಯ ಕಾಂಗ್ರೆಸ್ ನಾಯಕರು, ಕೇವಲ ರಾಜಕೀಯ ದುರುದ್ದೇಶದಿಂದ ‘ಶಿವದೂತೆ ಗುಳಿಗೆ’ ನಾಟಕದ ಪ್ರದರ್ಶನದ ಮೂಲಕ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ್ದೇನೆ. ಅದರ ಹೊರತು, ನಾಟಕದ ಬಗ್ಗೆ ಅಥವಾ ದೈವದ ವಿರುದ್ಧ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *