ಮಾರ್ಚ್ 5, 1871 ರೋಸಾ ಲಕ್ಸಂಬರ್ಗ್ ಹುಟ್ಟಿದ ದಿನ

ಮಾರ್ಚ್ 5, 1871 ರೋಸಾ ಲಕ್ಸಂಬರ್ಗ್  ಹುಟ್ಟಿದ ದಿನ

ಇಂದು ಅವರ 150ನೇ ಜನ್ಮದಿನ

ರೋಸಾ ಲಕ್ಸಂಬರ್ಗ್ 20 ನೇ ಶತಮಾನ ಕಂಡ ಮಹಾನ್ ರಾಜಕೀಯ ನಾಯಕಿ. ರೋಸಾ ಪೋಲಿಷ್ ಯೆಹೂದಿ ಕುಟುಂಬದಲ್ಲಿ ಹುಟ್ಟಿದ ಜರ್ಮನಿಯ (ಆ ಮೇಲೆ ಯುರೋಪಿನ ಮತ್ತು ಜಾಗತಿಕ) ಸೋಶಲಿಸ್ಟ್ ಮತ್ತು ಕಮ್ಯುನಿಸ್ಟ್ ಚಳುವಳಿ ಕಟ್ಟಿ ಬೆಳೆಸುವುದರಲ್ಲಿ ಪ್ರಧಾನ ಪಾತ್ರ ವಹಿಸಿದರು. ತಾನು ಹಲವು ವಿಧಗಳಲ್ಲಿ ‘ಅಲ್ಪ ಸಂಖ್ಯಾತೆ’ಳು, ಜರ್ಮನಿಯಲ್ಲಿ ಪೋಲಿಷ್ ಮೂಲದವಳಾಗಿ, ಯೆಹೂದಿಯಾಗಿ, ಮಹಿಳೆಯಾಗಿ, ಎಂದು ಹೇಳಿಕೊಂಡ ರೋಸಾ ಈ ಎಲ್ಲಾ ತೊಡಕುಗಳನ್ನು ಧೈರ್ಯದಿಂದ ಎದುರಿಸಿ, ಅವನ್ನೆಲ್ಲಾ ಮೀರಿ ನಿಂತವರು. ಆಕೆ ಆರಂಭದ ದಿನಗಳಲ್ಲಿ ಮಹಿಳಾ ದಿನದ ಪ್ರಮುಖ ರೂವಾರಿ ಕ್ಲಾರಾ ಜೆಟ್ಕಿನ್ ನಿಕಟ ಸಹವರ್ತಿಯಾಗಿದ್ದರು.

ಮೊದಲನೆಯ ಮಹಾಯುದ್ಧಕ್ಕೆ ಜರ್ಮನ್ ಸೋಶಲ್ ಡೆಮಾಕ್ರೆಟಿಕ್ ಪಕ್ಷ ಬೆಂಬಲಿಸಿದ್ದನ್ನು ಪ್ರತಿಭಟಿಸಿ ಹೊರ ಬಂದ ರೋಸಾ, ಜರ್ಮನ್ ಕಮ್ಯುನಿಸ್ಟ್ ಪಕ್ಷದ ಸ್ಥಾ¥ನೆಯ ಸೈದ್ಧಾಂತಿಕ ಸಂಘಟನಾ ಅಡಿಪಾಯ ಹಾಕುವುದರಲ್ಲಿ ಮುಖ್ಯ ಪಾತ್ರ ವಹಿಸಿದರು. ಬೊಲ್ಶೆವಿಕ್ ಕ್ರಾಂತಿಯ ಬೆನ್ನಲ್ಲೇ ಜರ್ಮನಿಯಲ್ಲೂ ಕಾರ್ಮಿಕ ವರ್ಗದ ಕ್ರಾಂತಿಯನ್ನು ಸಂಘಟಿಸಲು ಶತಪ್ರಯತ್ನ ಮಾಡುತ್ತಿದ್ದಾಗ ಬೀದಿಯಲ್ಲಿ ಕೊಲೆಯಾಗಿ, ರೋಸಾ ಹುತಾತ್ಮಳಾದರು. ಸೈದ್ದಾಂತಿಕ ಪ್ರಖರತೆಗೆ ಹೆಸರಾಗಿದ್ದ

ರೋಸಾಳ ಬರಹಗಳು, ಪುಸ್ತಕಗಳು ಮಾರ್ಕ್ಸ್ ವಾದಿ ಸೈದ್ಧಾಂತಿಕ ಚರ್ಚೆಯಲ್ಲಿ ಪ್ರಮುಖ ಕೊಡುಗೆ ಕೊಟ್ಟಿವೆ. ಅವರ ‘ಸುಧಾರಣೆ ಅಥವಾ ಕ್ರಾಂತಿ’ ಮತ್ತು ‘ಸಮಾಜವಾದ ಅಥವಾ ಬರ್ಬರತೆ’ ಕೃತಿಗಳಲ್ಲಿ ಮತ್ತು ರಾಷ್ಟ್ರೀಯತೆಯ ಕುರಿತು ಮಾರ್ಕ್ಸ್ ವಾದಿ ನಿಲುವು ಅವರು ಎಬ್ಬಿಸಿದ ಚರ್ಚೆಗಳು ಇಂದಿಗೂ ಪ್ರಸ್ತುತವಾಗಿವೆ.

‘ಸಂಕುಚಿತ ಸ್ತ್ರೀವಾದೀ’ ನೆಲೆಯಿಂದಾಚೆ ಮಹಿಳಾ ವಿಮೋಚನೆಯ ಸ್ಪಷ್ಟ ಕಣ್ಣೋಟವನ್ನು ಹೊಂದಿರುವ ಮಾರ್ಕ್ಸವಾದೀ ದೃಷ್ಟಿಕೋನದಲ್ಲಿ, ವರ್ಗ ಸಂಘರ್ಷದ ನೆಲೆಯಲ್ಲಿಯೇ ಮಹಿಳಾ ಪ್ರಶ್ನೆಯನ್ನೂ ನೋಡುವ, ಮಹಿಳೆಯರ ಸಮಸ್ಯೆ ಒಟ್ಟು ಸಮಾಜದ ಸಮಸ್ಯೆ, ಮತ್ತು ಅದರ ಭಾಗವಾಗಿಯೇ ಮಹಿಳೆಯರ ಸಮಸ್ಯೆಗಳಿಗೂ ಪರಿಹಾರ ಕಾಣಲು ಸಾಧ್ಯವೆಂಬುದನ್ನು ಪ್ರತಿಪಾದಿಸಿದ ರೋಸಾ ಲಕ್ಸಂಬರ್ಗ್  ಜೀವನ-ಬರಹಗಳ ಅಧ್ಯಯನ ದುಡಿಯವ ಜನರ ಮತ್ತು ಮಹಿಳಾ ವಿಮೋಚನಾ ಚಳುವಳಿಗೆ ಅತ್ಯಂತ ಪ್ರಸ್ತುತ ಮತ್ತು ಸ್ಫೂರ್ತಿದಾಯಕ.

ಅವರ ಜೀವನಚರಿತ್ರೆಯ ಪುಸ್ತಕವನ್ನು ಚಿಂತನ ಪುಸ್ತಕ ಪ್ರಕಟಿಸಿದೆ.

 

 

Donate Janashakthi Media

Leave a Reply

Your email address will not be published. Required fields are marked *