ಕರ್ನಾಟಕ | ಮೊದಲ ಹಂತದ ಮತದಾನ ಮುಕ್ತಾಯ; ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ

ಬೆಂಗಳೂರು :ತೀವ್ರ ಕುತೂಹಲ ಮೂಡಿಸಿದ್ದ ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 26, ಶುಕ್ರವಾರ) ಸಂಜೆ ಮುಕ್ತಾಯವಾಗಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ ಒಟ್ಟಾರೆ ಶೇ. 65ರಷ್ಟು ಮತದಾನವಾಗಿದೆ.

ಮಂಗಳೂರು ನಗರದಲ್ಲಿ ಬಿಜೆಪಿ ಕಾರ್ಯಕರ್ತರು, ಪೊಲೀಸರು ಹಾಗೂ ಮಾಧ್ಯಮದವರ ಜೊತೆ ಅನುಚಿತವಾಗಿ ನಡೆದುಕೊಂಡಿದ್ದರೆ. ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಇವಿಎಂ ಧ್ವಂಸ ಮಾಡಿರುವ ವಿಷಯ ಬಿಟ್ಟರೆ, ಎಲ್ಲೆಡೆ ಶಾಂತ ರೀತಿಯಲ್ಲಿ ಮತದಾನ ನಡೆದಿದೆ.

ಮತದಾದಿಂದ ದೂರ ಉಳಿದ ಸಿಲಿಕನ್ ಸಿಟಿ ಮಂದಿ : ಸಿಲಿಕಾನ್ ಸಿಟಿ,ಐಟಿ ಬಿಟಿ ಕಂಪನಿಗಳ ನೆಲೆ, ವಿದ್ಯಾವಂತರೇ ತುಂಬಿರೋ ಮಯಾನಗರಿ ಬೆಂಗಳೂರಿನಲ್ಲಿ ಈ ಬಾರಿಯೂ ಮತದಾನ ಕಡಿಮೆಯಾಗಿದೆ. ಬೆಂಗಳೂರು ದಕ್ಷಿಣದಲ್ಲಿ 49.37% ರಷ್ಟು ಮತದಾನವಾಗಿದ್ದರೆ, ಬೆಂಗಳೂರು ಕೇಂದ್ರದಲ್ಲಿ 49.21% ಮತ್ತು ಬೆಂಗಳೂರು ಉತ್ತರದಲ್ಲಿ 50.91% ರಷ್ಟು ಮತದಾನವಾಗಿದೆ. ಬೆಂಗಳೂರು ಗ್ರಾಮಾಂತರ 61.78% ರಷ್ಟು ಮತದಾನವಾಗಿದೆ.

ಇಲ್ಲಿದೆ 14 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ

ಸಂಜೆ 7.30ರವರೆಗಿನ ಮತ ಲೆಕ್ಕಾಚಾರದಲ್ಲಿ ರಾಜ್ಯದ 14 ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಮತದಾನವಾಗಿದೆ

  1. ಉಡುಪಿ-ಚಿಕ್ಕಮಗಳೂರು – ಶೇ.72.13
  2. ಹಾಸನ- ಶೇ.72.13
  3. ದಕ್ಷಿಣ ಕನ್ನಡ- ಶೇ.71.83
  4. ಚಿತ್ರದುರ್ಗ- ಶೇ.67
  5. ತುಮಕೂರು – ಶೇ.72.10
  6. ಮಂಡ್ಯ- ಶೇ.74.87
  7. ಮೈಸೂರು- ಶೇ.65.85
  8. ಚಾಮರಾಜನಗರ- ಶೇ.69.60
  9. ಬೆಂಗಳೂರು ಗ್ರಾಮಾಂತರ – ಶೇ.61.78
  10. ಬೆಂಗಳೂರು ಉತ್ತರ- ಶೇ.50.84
  11. ಬೆಂಗಳೂರು ಕೇಂದ್ರ – ಶೇ.48.61
  12. ಬೆಂಗಳೂರು ದಕ್ಷಿಣ- ಶೇ.49.37
  13. ಚಿಕ್ಕಬಳ್ಳಾಪುರ – ಶೇ.70.97
  14. ಕೋಲಾರ- ಶೇ.71.26
Donate Janashakthi Media

Leave a Reply

Your email address will not be published. Required fields are marked *