ಕ್ಯಾಂಟರ್ ಪಲ್ಟಿ: ಕಾರ್ಮಿಕರು ಮೃತ

ಚಿಕ್ಕಬಳ್ಳಾಪುರ: ಕಲ್ಲು ಕಂಬ ಸಾಗಿಸುತ್ತಿದ್ದ ಕ್ಯಾಂಟ‌ರ್ ಪಲ್ಟಿಯಾಗಿ ಕಂಬಗಳಡಿ ಸಿಲುಕಿಕೊಂಡ ಪರಿಣಾಮ ಮೂರು ಜನ  ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ-ಗೌರಿಬಿದನೂರು ಮಾರ್ಗದ ಕಣಿವೆ ಬಳಿ ನಡೆದಿದೆ.

ಕೋಲಾರದ ಮಾಲೂರಿನ ಚಿಕ್ಕತಿರುಪತಿಯಿಂದ ಮಂಚೇನಹಳ್ಳಿಗೆ ಬರುತ್ತಿದ್ದ ಕ್ಯಾಂಟರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕ್ಯಾಂಟರ್‌ನ ಹಿಂಬದಿಯಲ್ಲಿ ಸಾಗಿಸಲಾಗುತ್ತಿದ್ದ ಕಲ್ಲಿನ ಕಂಬಗಳ ಮೇಲೆ ಕುಳಿತಿದ್ದ ಕೂಲಿ ಕಾರ್ಮಿಕರು ಈ ಕಲ್ಲುಗಳಡಿ ಸಿಲುಕೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್‌ಗಳ ಕಿರುಕುಳ; ಮಹಿಳೆ ಆತ್ಮಹತ್ಯೆ

ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ನೋಡಿ: ದ್ವೇಷದ ಜಾಹೀರಾತಿನ ಮೂಲಕ ನೀತಿ ಸಂಹಿತೆ ಉಲ್ಲಂಘಿಸುತ್ತಿರುವ ಬಿಜೆಪಿಯವರ ಮೇಲೆ ಕ್ರಮಕ್ಕೆ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *