ಕಚೇರಿ ಕೆಲಸದ ಒತ್ತಡ : ಮನನೊಂದು ವ್ಯವಸ್ಥಾಪಕಿ ಆತ್ಮಹತ್ಯೆ

ಇಂದೋರ್‌ : ಮಾನವ ಸಂಪನ್ಮೂಲ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ಇಂದೋರ್‌ನಲ್ಲಿ ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ.

ಸತ್ನಾ ಜಿಲ್ಲೆಯ ಶೀಲು ನಿಗಮ್ ಎಂದು ಗುರುತಿಸಲಾದ ಮಹಿಳೆ ತನ್ನ ತಂಗಿಯೊಂದಿಗೆ ಲಸುಡಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ನಾರಿಮನ್ ಪಾಯಿಂಟ್‌ನಲ್ಲಿರುವ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದಳು. ಕೈಯಿಂದ ಬರೆದ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆ ಪತ್ರದ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶೀಲು ಇಂದೋರ್ ಮೂಲದ ಹೆಸರಾಂತ ಫಾರ್ಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಶೀಲು ನಿಗಮ್‌ಗೆ  ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಆಕೆಗೆ ವ್ಯಾಪಕವಾಗಿ ಮಾನಸಿಕ ಹಿಂಸೆ ಕೊಡುತ್ತಿದ್ದರು. ಕೆಲಸದ ಒತ್ತಡವನ್ನು ಹಾಕುತ್ತಿದ್ದರು ಹಾಗಾಗಿ ಇದರಿಂದ ಅಸಮಾಧಾನಗೊಂಡಿದ್ದಳು ಹಾಗಾಗಿ ಆಕೆ ರಾಜೀನಾಮೆಯನ್ನು ನೀಡಿದ್ದಳು ಎಂದು ಮೃತನ ಕುಟುಂಬ ಸದಸ್ಯರು ಹೇಳಿಕೊಂಡಿದ್ದಾರೆ

ಮೂರು ದಿನಗಳ ಹಿಂದೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಆಕೆಯ ರಾಜೀನಾಮೆಯನ್ನು ಅಂಗೀಕರಿಸಲಾಗಿದೆಯೇ ಎಂಬ ವಿಚಾರ ಲಭ್ಯವಾಗಿಲ್ಲ.  “ನಾನು ಅವಳೊಂದಿಗೆ ಎರಡು ದಿನಗಳ ಹಿಂದೆ ಮಾತನಾಡಿದ್ದೆ. ಕಚೇರಿಯ ಕೆಲಸಗಳಿಂದಾಗಿ ಅಸಮಾಧಾನಗೊಂಡಿದ್ದೇನು ಎಂದು ಅವಳು ನನಗೆ ಹೇಳಿದಳು. ಆಕೆಯ ಕಚೇರಿಯಲ್ಲಿ ಆಕೆ ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದಳು, ”ಎಂದು ಮಹಿಳೆಯ ಚಿಕ್ಕಪ್ಪ ರಾಕೇಶ್ ನಿಗಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಹಿಳೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ಇನ್ನೂ ದಾಖಲಿಸಿಲ್ಲ ಎಂದು ತನಿಖಾಧಿಕಾರಿ ಅಶ್ರಫ್ ಅನ್ಸಾರಿ ಹೇಳಿದ್ದಾರೆ. “ನಾವು ಸ್ಥಳದಿಂದ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದೇವೆ. ಆಕೆಯ ಕುಟುಂಬದ ಸದಸ್ಯರ ಹೇಳಿಕೆಗಳನ್ನು ಇನ್ನೂ ದಾಖಲಿಸಿಲ್ಲ, “ಎಂದು ಅವರು ಹೇಳಿದರು.

ಈ ಘಟನೆಗೆ ಸಂಬಂಧಿಸಿದಂತೆ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ  ಎಂ.ಎಸ್. ಮೀನಾಕ್ಷಿಸುಂದರಂ ಪ್ರತಿಕ್ರಿಯೆ ನೀಡಿದ್ದು ʼಕೆಲಸದ ಸ್ಥಳಗಳಲ್ಲಿನ ಒತ್ತಡದಿಂದ ಮಾನವಸಂಪನ್ಮೂಲ ವ್ಯವಸ್ಥಾಪಕರಾಗಿದ್ದ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಈ ಸುದ್ದಿ ಕಡೆಗಣಿಸುವಂತದಲ್ಲ. ಸಮಾನ್ಯ ಕಾರ್ಮಿಕರ ಮೇಲೆ ಹಾಗು ಮ್ಯಾನೇಜರ್ಗಳ ಮೇಲೆ ಅಮಾನವೀಯ ಮಾನಸೀಕ ಒತ್ತಡಗಳು ಹೆಚ್ಚಾಗುತ್ತಿವೆ. ಆರ್ಥಿಕ ಕುಸಿತ ನೆಪದಲ್ಲಿ ಎಲ್ಲಾ ಉತ್ಪಾದನಾ, ಸೇವಾ ವಲಯಗಳಲ್ಲಿ ಅಳವಡಿಸಲಾಗುತ್ತಿರುವ ‘ನಿಯೋ ನಾರ್ಮಲ್’ (Neo Normal) ನಿಯಮಗಳ ಪರಿಣಾಮ ಇದಾಗಿದೆ.

ಅಮಾನವೀಯವಾಗಿ ಹೇರಲಾಗುತ್ತಿರುವ ಕೆಲಸದ ಒತ್ತಡಗಳು ಹಾಗು ಉತ್ಪಾದನಾ/ದಕ್ಷತೆಯ ಗುರಿಗಳು ವೇತನಕ್ಕಾಗಿ ದುಡಿಯುವ ಎಲ್ಲರ ಮೇಲು ಮಾರಕ ಮಾನಸೀಕ ಪರಿಣಾಮ ಬೀರುತ್ತಿದೆ. ಈ ವಿಚಾರಗಳ ಬಗ್ಗೆ ಸರ್ಕಾರವು ತೀವ್ರ ಗಮನ ಹರಿಸುವ ಅಗತ್ಯವಿದೆ. ಕೆಲಸದ ಸ್ಥಳಗಳಲ್ಲಿನ ಸುರಕ್ಷತೆಯು ಮಾನಸೀಕ ಒತ್ತಡಗಳ ಕುರಿತು ಗಮನ ಹರಿಸ ಬೇಕು. ಬಂಡವಾಳಗಾರರಿಗೆ ಲಾಭವನ್ನು ಹೊರತು ಪಡಿಸಿ ಇನ್ನೇನು ಬೇಕಿಲ್ಲ. ಆದರೆ ದುಡಿಯುವ ವರ್ಗಕ್ಕೆ ಆರೋಗ್ಯಕರ ಸಮಾಜದ ಅನಿವಾರ್ಯವಿದೆ ಮೀನಾಕ್ಷಿ ತಿಳಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *