ತಿರುವನಂತಪುರದ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

 

ತಿರುವನಂತಪುರ ಕಾರ್ಪೊರೇಶನ್ ಚುನಾವಣೆಯಲ್ಲಿ 101 ವಾರ್ಡುಗಳಲ್ಲಿ 50 ವಾರ್ಡುಗಳಲ್ಲಿ ಬಹುಮತದಿಂದ ಬಿಜೆಪಿ ಗೆದ್ದಿದ್ದನ್ನು ಇಟ್ಟುಕೊಂಡು, ಬಿಜೆಪಿಯಲ್ಲಿ ಮತ್ತು (‘ಗೋದಿ’ ಮಾತ್ರವಲ್ಲ ಇತರ ಬಹುಪಾಲು) ಮಾಧ್ಯಮಗಳಲ್ಲಿ ಸಂಭ್ರಮಾಚರಣೆ ನಡೆದಿದೆ ಮತ್ತು ಕೇರಳದಲಿ ಎಲ್.ಡಿ.ಎಫ್ ಅವಸಾನದ ಭವಿಷ್ಯ ಬರೆಯಲಾಗುತ್ತಿದೆ. ಆದರೆ ಬಿಜೆಪಿ ನಿಜವಾಗಿಯೂ ಗೆದ್ದಿದೆಯೆ? ಅಥವಾ  ಗೆದ್ದಿದ್ದು ಹೇಗೆ? ಕೆಳಗಿನ ಕೆಲವು ಅಂಕಿಅಂಶಗಳನ್ನು ನೋಡೋಣ:

 

ಕಾರ್ಪೊರೆಷನ್ 2025

ಲೋಕಸಭೆ 2024  
ಮೈತ್ರಿಕೂಟ ಮತಗಳಿಕೆ

ಸೀಟುಗಳು

ಶೇಕಡಾ ಮತ ಮತಗಳಿಕೆ ಮತಗಳಿಕೆಯಲ್ಲಿ

+ಏರಿಕೆ/-ಇಳಿಕೆ

ಎಲ್.ಡಿ.ಎಫ್ 1,75,562 29 37.53 1,29,048 +46,514 (+36.0%)
ಎನ್.ಡಿ.ಎ 1,65,891 50 35.40 2,13.214 -47,323

(-22.2%)

ಯು.ಡಿ.ಎಫ್ 1,25,984 19 26.95 1,84,727 -58,743

(-31.8%)

ಇತರರು 54,262 3

ಸೀಟುಗಳು ಕಡಿಮೆ ಬಂದಿದ್ದರೂ ಎಲ್.ಡಿ.ಎಫ್ ಅತ್ಯಂತ ಹೆಚ್ಚು ಮತ ಪಡೆದಿದೆ. ಮಾತ್ರವಲ್ಲ, ಕಳೆದ ಲೋಕಸಭಾ ಚುನಾವಣೆಗಿಂತ 46 ಸಾವಿರಕ್ಕೂ ಹೆಚ್ಚುವರಿ ಮತ ಪಡೆದಿದೆ. ಬಹಮತ ಪಡೆದಿರುವ ಎನ್.ಡಿ.ಎ ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ 47 ಸಾವಿರಕ್ಕೂ ಹೆಚ್ಚು ಮತ ಕಳೆದುಕೊಂಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ  ಗೆದ್ದ ಯು.ಡಿ.ಎಫ್ ಸಹ .58 ಸಾವಿರಕ್ಕೂ ಹೆಚ್ಚು ಮತ ಕಳೆದುಕೊಂಡಿದೆ. ಅಂಕಿ ಅಂಶಗಳು ಹೀಗಿರುವಾಗ ಎಲ್.ಡಿ.ಎಫ್ ಅವಸಾನದತ್ತ ಸಾಗಿದೆ ಮತ್ತು ಬಿಜೆಪಿ (ಬರಿತ ತಿರುವನಂತಪುರದಲ್ಲಿ ಸಹ) ಭಾರಿ ಜನಬೆಂಬಲ ಗಳಿಸಿದೆ ಎಂದು ಹೇಳುವುದು ಯಾವ ತರ್ಕ? ತಿರುವಂತಪುರ ಜಿಲ್ಲಾ ಪಂಚಾಯತ್ ನಲ್ಲಿ ಎಲ್.ಡಿ.ಎಫ್ ಬಹುಮತ ಪಡೆದಿದೆ.

ಇದನ್ನೂ ಓದಿ : ಬೆಳಗಾವಿ | ನನಗೂ ಶಾಸಕಿ ಆಗುವ ಅಸೆ ವ್ಯಕ್ತಪಡಿಸಿದ ಬೆಳವಡಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ

ಅದು ಮಾತ್ರವಲ್ಲ, ಫಲಿತಾಂಶದ ಈ ಕೆಳಗಿನ ಅಂಶಗಳನ್ನು ನೋಡೋಣ:

* ಬಿಜೆಪಿ 8 ಸೀಟುಗಳನ್ನು 50 ಮತಗಳಿಗಿಂತಲೂ ಕಡಿಮೆ ಮತಗಳಿಂದ ಗೆದ್ದಿದೆ.

* ಬಿಜೆಪಿ ಗೆದ್ದ 41 ವಾರ್ಡುಗಳಲ್ಲಿ ಯು.ಡಿ.ಎಫ್ ಮೂರನೇ ಸ್ಥಾನದಲ್ಲಿದೆ. ಇವುಗಳಲ್ಲಿ 25 ವಾರ್ಡುಗಳಲ್ಲಿ ಯು.ಡಿ.ಎಫ್ 1000ಕ್ಕಿಂತಲೂ ಕಡಿಮೆ ಮತ ಪಡೆದಿದೆ.

ಅತಿ ಹೆಚ್ಚು ಮತ ಪಡೆಯುವ ಎಲ್.ಡಿ.ಎಫ್ ನ್ನು ತ್ರಿಕೋನ ಸ್ಪರ್ಧೆಯಲ್ಲಿ ಸೋಲಿಸುವುದು ಸಾಧ್ಯವೇ ಇಲ್ಲವೆಂಬುದು ಯು.ಡಿ.ಎಫ್ ಮತ್ತು ಎನ್.ಡಿ.ಎ. ಗೆ ಸ್ಪಷ್ಟವಿತ್ತು. ಹೇಗಾದರೂ ಎಲ್.ಡಿ.ಎಫ್ ಸೋಲಿಸಬೇಕು. ಅಗತ್ಯವಿದ್ದರೆ ಎನ್.ಡಿ.ಎ. ಯನ್ನು ಗೆಲ್ಲಿಸಿಯಾದರೂ ಎಂದು ಯು.ಡಿ.ಎಫ್ ನಿರ್ಧರಿಸಿದ ಹಾಗೆ ಕಂಡಿದೆ. ಹಾಗಾಗಿ ಯು.ಡಿ.ಎಫ್ ತನ್ನ ಮತಗಳನ್ನು ಎನ್.ಡಿ.ಎ. ಗೆ ಬಹುಮತಕ್ಕೆ ಹತ್ತಿರ ಬರಬಹುದಾದ ವಾರ್ಡುಗಳಲ್ಲಿ ಬಹುಮತ ಬರುವಷ್ಟು ಮತಗಳನ್ನು ವರ್ಗಾಯಿಸಿದೆ ಎಂಬುದು ಹಿಂದಿನ ಚುನಾವಣೆಗಳಲ್ಲಿ ಮೈತ್ರಿಕೂಟದ ಮತಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ,

ಯಾರಿಗಾದರೂ ಈ ಬಗ್ಗೆ ಅನುಮಾನವಿದ್ದರೆ ಕಾಂಗ್ರೆಸ್ ನ ಶಶಿ ತರೂರ್ ಅವರ ಎಕ್ಸ್ ಪೋಸ್ಟ್ ನೋಡಬಹುದು. ಹಲವು ವಿಶ್ಲೇಷಕರು ಮತ್ತು ಕಾರ್ಟೂನಿಸ್ಟರು ಸಹ ಬಿಜೆಪಿಯ ತಿರುವನಂತಪುರ ಗೆಲುವು ಶಶಿ ತರೂರ್ ಮತ್ತು ಕಾಂಗ್ರೆಸ್ ನ ಕೊಡುಗೆ ಎಂದು ಗಮನಿಸಿದ್ದಾರೆ.

ಇದನ್ನೂ ನೋಡಿKarnataka Legislative Assembly Day 08 Live | 16ನೇ ವಿಧಾನಸಭೆಯ 8ನೇ ಅಧಿವೇಶನದ ನೇರಪ್ರಸಾರ

 

 

Donate Janashakthi Media

Leave a Reply

Your email address will not be published. Required fields are marked *