ಎಂಡ್-ಟು-ಎಂಡ್‌ ಎನ್‌ಕ್ರಿಪ್ಶನ್ ನಿಯಮವನ್ನು ಮುರಿದುಹಾಕಬೇಕೆಂದರೆ, ವಾಟ್ಸಪ್‌ ಅನ್ನು ಶಾಶ್ವತವಾಗಿ ಸ್ಥಗಿತಗೊಳಿಸಬೇಕಾಗುತ್ತದೆ

ನವದೆಹಲಿ: ಮೆಟಾ ಒಡೆತನದ ವಾಟ್ಸಾಪ್, ಅದರಲ್ಲಿರುವ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನಿಯಮವನ್ನು ಮುರಿದುಹಾಕಬೇಕೆಂದು ಒತ್ತಾಯಿಸಿದಲ್ಲಿ ವಾಟ್ಸಪ್‌ ಶಾಶ್ವತವಾಗಿ ಸ್ಥಗಿತಗೊಂಡು ಭಾರತ ದೇಶವನ್ನೇ ತೊರೆಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟಿಗೆ ಹೇಳಿದೆ. ವಾಟ್ಸಪ್‌

ವರದಿಯ ಪ್ರಕಾರ, ಕಂಪನಿ ಪರ ವಕೀಲ ತೇಜಸ್ ಕರಿಯಾ ಇದನ್ನು ಹೈಕೋರ್ಟಿಗೆ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗಾಗಿ 2021 ರ ಮಾಹಿತಿ ತಂತ್ರಜ್ಞಾನ (ಐಟಿ) ನಿಯಮಗಳ ನಿಬಂಧನೆಯನ್ನು ಪ್ರಶ್ನಿಸಿದ ವಾಟ್ಸಾಪ್‌ನ 2021 ರ ಅರ್ಜಿಗಳನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದ್ದು, ಇದು ಮಾಹಿತಿಯ ಮೊದಲ ಮೂಲದ ಗುರುತನ್ನು ಬಹಿರಂಗಪಡಿಸುವ ವಿಷಯವಾಗಿದೆ. ವಾಟ್ಸಪ್‌

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ವಾಟ್ಸಾಪ್ ಪರ ವಕೀಲರು, ಅದು ಎನ್‌ಕ್ರಿಪ್ಟ್ ಮಾಡಲ್ಪಟ್ಟಿದೆ ಗೌಪ್ಯತೆಯನ್ನು ಕಾಪಾಡುತ್ತದೆ ಎಂಬ ನಂಬಿಕೆಯ ಮೇಲೆ ಜನರು ವಾಟ್ಸಪ್‌ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದರಲ್ಲಿ ಕಳುಹಿಸಲಾದ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುವುದು ಬಳಕೆದಾರರಿಗೆ ತಿಳಿದಿದೆ. ಹೀಗಿದ್ದಾಗ ಯಾರೂ ಅವರ ಸಂದೇಶವನ್ನು ಓದಲು ಸಾ‍ಧ್ಯವಿಲ್ಲ. ಆದರೆ ಎನ್ಕ್ರಿಪ್ಶನ್ ಅನ್ನು ಮುರಿದರೆ ಅ ಗೌಪ್ಯತೆ ಕಳೆದುಹೋಗುತ್ತದೆ.

ವಾಟ್ಸಪ್ ಪ್ರಕಾರ, ಸರ್ಕಾರದ ಈ ನಿಬಂಧನೆಯನ್ನು ಕಾರ್ಯರೂಪಕ್ಕೆ ತರಬೇಕೆಂದರೆ ಸಂದೇಶಗಳ ಸಂಪೂರ್ಣ ಸರಣಿಯನ್ನೇ ಸಿದ್ಧಪಡಿಸಬೇಕಾಗುತ್ತದೆ. ಏಕೆಂದರೆ ಯಾವ ಸಂದೇಶಗಳನ್ನು ಯಾವಾಗ ಡೀಕ್ರಿಪ್ಟ್ ಮಾಡಬೇಕೆಂದು ಗೊತ್ತಾಗುವುದಿಲ್ಲ. ಇದಕ್ಕಾಗಿ ಕೋಟ್ಯಂತರ ಸಂದೇಶಗಳನ್ನು ವರ್ಷಗಟ್ಟಲೆ ಸಂಗ್ರಹಿಸಬೇಕಾಗುತ್ತದೆ.

ಈ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ಈ ನಿಯಮಗಳು ಎನ್‌ಕ್ರಿಪ್ಶನ್ ಜೊತೆಗೆ ಬಳಕೆದಾರರ ಗೌಪ್ಯತೆಯನ್ನು ದುರ್ಬಲಗೊಳಿಸುತ್ತದೆ ಎಂದು ವಾದಿಸಿದೆ. ಇದು ಭಾರತದ ಸಂವಿಧಾನದ 14, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಿದ ಬಳಕೆದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ. , ‘ಇಂತಹ ನಿಯಮ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ ಎಂದು ವಾಟ್ಸ್‌ಆ್ಯಪ್‌ನ ವಕೀಲ ಕರಿಯಾ ಹೇಳಿದ್ದಾರೆ.

ಇದನ್ನು ಓದಿ : ಮೋದಿ ಸರ್ಕಾರ ದೇಶದ ಶೇಕಡಾ 20ರಿಂದ 25 ಜನರಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ರಾಷ್ಟ್ರದ ಸಂಪತ್ತನ್ನು  ಹಂಚುತ್ತಿದೆ; ರಾಹುಲ್ ಗಾಂಧಿ

ಮುಂದೆ ವಕೀಲರು, ‘ಇದರಲ್ಲಿ ಎರಡು ಹಕ್ಕುಗಳಿವೆ. ಒಂದು ಖಾಸಗಿತನ ಮತ್ತು ಇನ್ನೊಂದು ತಿಳಿದುಕೊಳ್ಳುವ ಸರ್ಕಾರದ ಹಕ್ಕು. ಉದಾಹರಣೆಗೆ, ಒಬ್ಬ ಭಯೋತ್ಪಾದಕ ಸಂದೇಶಗಳನ್ನು ಕಳುಹಿಸುತ್ತಿದ್ದರೆ, ಅವನನ್ನು ಹಿಡಿಯಬೇಕು. ಆದರೆ ನಾವು ಮಧ್ಯದಲ್ಲಿ ಸಿಲುಕಿಕೊಂಡಿದ್ದೇವೆ. ಒಬ್ಬ ವ್ಯಕ್ತಿಗಾಗಿ ನಾವು ನಮ್ಮ ವೇದಿಕೆಯ ನಿಯಮಗಳನ್ನು ಮುರಿಯಬೇಕೇ ಅಥವಾ ಅವುಗಳನ್ನು ಶತಕೋಟಿ ಜನರಿಗೆ ಉಳಿಸಬೇಕೇ? ಅದು ನಿಜವೆ? ಇದನ್ನು ಪರಿಗಣಿಸಬೇಕಾಗಿದೆ.

ಈ ನಿಯಮದ ಸಾಂವಿಧಾನಿಕ ಸಿಂಧುತ್ವವನ್ನು ನ್ಯಾಯಾಲಯವು ಪರಿಶೀಲಿಸಬೇಕಾಗುತ್ತದೆ. ಐಟಿ ಕಾಯಿದೆಯಲ್ಲಿ ಸರ್ಕಾರಕ್ಕೆ ಈ ನಿಯಮ ಮಾಡಲು ಅವಕಾಶ ಇಲ್ಲ.

ಇತರ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ಸಹ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಕಡೆಗೆ ತಮ್ಮ ಬದ್ಧತೆಯನ್ನು ಈ ಹಿಂದೆ ಹೇಳಿರುವುದು ಗಮನಾರ್ಹವಾಗಿದೆ.
ಸಿಗ್ನಲ್ ಸಿಇಒ ಮೆರೆಡಿತ್ ವಿಟೇಕರ್ ಕಳೆದ ವರ್ಷ ಜೂನ್‌ನಲ್ಲಿ, ‘ನಮ್ಮ ಗೌಪ್ಯತೆ ಭರವಸೆಗಳನ್ನು ನಾವು ಸಂಕೀರ್ಣಗೊಳಿಸುವ ಅಥವಾ ದುರ್ಬಲಗೊಳಿಸುವ ಮೊದಲು, ಎನ್‌ಕ್ರಿಪ್ಶನ್ ತಾಂತ್ರಿಕ ಖಾತರಿಯಾಗಿರುವುದರಿಂದ ನಾವು ಅದನ್ನು ಮುಚ್ಚುತ್ತೇವೆ. ನಾವು ಸಂವಹನಕ್ಕಾಗಿ ನಿಜವಾದ ಖಾಸಗಿ ಕಾರ್ಯವಿಧಾನವನ್ನು ಒದಗಿಸಲು ಸಾಧ್ಯವಾಗದಿದ್ದರೆ, ನಮಗೆ ಅಸ್ತಿತ್ವದಲ್ಲಿರಲು ಯಾವುದೇ ಕಾರಣವಿಲ್ಲ. ಈ ವಿಷಯದಲ್ಲಿ ನಾವು ದೃಢವಾಗಿದ್ದೇವೆ.

ವಾಟ್ಸಪ್ನ ಮೆಟಾ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಪ್ರಪಂಚದಾದ್ಯಂತ ದಾಳಿಗೆ ಒಳಗಾಗುತ್ತಿದೆ ಎಂದು ಹೇಳಿದ್ದಾರೆ. ವಾಟ್ಸಪ್‌ ಅನ್ನು ತಳಮಟ್ಟದಿಂದ ಖಾಸಗಿಯಾಗಿ ವಿನ್ಯಾಸಗೊಳಿಸಲಾಗಿದೆ.ಅಲ್ಲದೇ ಮಾನವ ಹಕ್ಕುಗಳ ಪ್ರವರ್ತಕರಾಗಿ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ಗೆ ಬದ್ಧವಾಗಿದೆ. ಗೌಪ್ಯತೆ, ಭದ್ರತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಅದನ್ನು ರಕ್ಷಿಸುವುದು ಮುಖ್ಯವಾಗಿದೆ.

ಇದನ್ನು ನೋಡಿ : ಕೇಳಿರಣ್ಣ, ಕೇಳಿರಕ್ಕ ಕಥೆಯ ಹೇಳುವೆ, ಸುಳ್ಳಿನ ಸರಮಾಲೆಯ ವ್ಯಥೆಯ ಹೇಳುವೆ – ಹಾಡಿದವರು : ಲವಿತ್ರ ಮತ್ತು ಮೇಘ

Donate Janashakthi Media

Leave a Reply

Your email address will not be published. Required fields are marked *