ಚುನಾವಣಾ ಬಾಂಡ್‌ ಮಾದರಿ ಹಗರಣ ಜಪಾನ್‌ನಲ್ಲಿ ಆಗಿದ್ದಿದ್ದರೆ ಏನಾಗುತ್ತಿತ್ತು?

ನಾಗೇಶ ಹೆಗಡೆ 

ತಾನು ವಿಶ್ವಗುರು ಎಂದು ಜಪಾನ್‌ ದೇಶ ಹೇಳಿಕೊಂಡಿಲ್ಲ. ಆ ನಿಟ್ಟಿನಲ್ಲಿ ದೇಶವನ್ನು ಮುನ್ನಡೆಸುತ್ತೇನೆಂದು ಅಲ್ಲಿನ ಪ್ರಧಾನಿ ಫುಮಿಯೊ ಕಿಷಿಡಾ ಅವರು ಹೇಳಿಕೊಂಡಿಲ್ಲ. ಚುನಾವಣಾ ಬಾಂಡ್‌ 

ಈಗಿನ ನಮ್ಮ ಇಲೆಕ್ಟೋರಲ್‌ ಹಗರಣದ ಮಾದರಿಯಲ್ಲೇ ಚಿಕ್ಕದೊಂದು ಹಗರಣ ಜಪಾನಿನಲ್ಲಿ ಸುದ್ದಿಯಾಗಿತ್ತು. ಈಚಿನ ಜನವರಿ ತಿಂಗಳಲ್ಲಿ ಜಪಾನೀ ಪ್ರಧಾನಿ ಕಿಷಿಡಾ ಅವರನ್ನು ʻಸಂಸದೀಯ ನೈತಿಕತೆಯ ಸಮಿತಿʼ ವಿಚಾರಣೆಗೆ ಕರೆದಿತ್ತು. ಅಲ್ಲಿ ಅವರು ಕ್ಷಮಾಪಣೆ ಕೋರಿದರು.

ಏಕೆಂದರೆ ಅವರ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದವರು ಚುನಾವಣೆಗೆ ಮುನ್ನ ಪಾರ್ಟಿ ಟಿಕೆಟ್‌ ವಿತರಣೆಯ ಹಣಕಾಸು ಲೆಕ್ಕವನ್ನು ಸರಿಯಾಗಿ ದಾಖಲಿಸಿರಲಿಲ್ಲ. ಸುಮಾರು 52 ಕೋಟಿ ರೂಪಾಯಿಗಳಷ್ಟು ಮೊತ್ತದ ಅಪರಾತಪರಾ ಆಗಿದ್ದು ಬೆಳಕಿಗೆ ಬಂದಿತ್ತು. ಅಷ್ಟೂ ಹಣ ಅದ್ಯಾವುದೊ ಗುಪ್ತ ಖಾತೆಗೆ ಹೋಗಿ ಚುನಾವಣೆಯಲ್ಲಿ ಬಳಕೆಯಾಗಿತ್ತು. ಇದು ಬೆಳಕಿಗೆ ಬರುತ್ತಲೆ ಕಿಷಿಡಾ ಸಂಪುಟದ ಮೂವರು ಸಂಪುಟ ದರ್ಜೆಯ ಸಚಿವರು ಮತ್ತು ಐವರು ಅಧಿಕಾರಿಗಳು ರಾಜೀನಾಮೆ ನೀಡಬೇಕಾಯಿತು. ನಂತರ ತನಿಖೆ ನಡೆದು ಕ್ಷಿಪ್ರವಾಗಿ ಆ ಮೂವರು ಸಚಿವರ ಮತ್ತು ಇನ್ನೂ ಕೆಲವು ಅಧಿಕಾರಿಗಳ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತು ಕೂಡ ಆಯಿತು.

ಇದನ್ನೂ ಓದಿ400 ಅಲ್ಲ 175 ! ಮಾಜಿ ಚುನಾವಣಾ ಆಯುಕ್ತ ಖುರೇಷಿ ಹೇಳಿದ್ದು ಯಾರ ಬಗ್ಗೆ

ನಮ್ಮ ಪ್ರಧಾನಿ ಈಗಲೂ ಮೌನವಾಗಿದ್ದಾರೆ. ಕೇವಲ ಬಾಂಡ್‌ ವಿಚಾರಗಳಿಗಷ್ಟೇ ಅಲ್ಲ, ಮಣಿಪುರದ ಘಟನೆ, ಬ್ರಿಜ್‌ಭೂಷಣ ಸಿಂಗ್‌ ಮೇಲಿನ ಆರೋಪಗಳ ವಿಷಯದಲ್ಲೂ ಮೌನಿಯಾಗಿದ್ದಾರೆ.

ಬಾಂಡ್‌ ಮೂಲಕ ಹಣದ ದೊಡ್ಡ ಮೊತ್ತವನ್ನು ಬಾಚಿಕೊಳ್ಳುವ ಸಂದರ್ಭದಲ್ಲಿ ಇಡಿ (ಜಾರಿ ನಿರ್ದೇಶನಾಲಯದ) ಪ್ರಮುಖರು ಯಾರಾಗಿದ್ದರು ಗೊತ್ತೆ? ಸಂಜಯ್‌ ಮಿಶ್ರಾ. ಇವರ ಸೇವಾ ವಿಸ್ತರಣೆ, ಮತ್ತಷ್ಟು ವಿಸ್ತರಣೆ, ಇನ್ನಷ್ಟು ವಿಸ್ತರಣೆ ಆಗುತ್ತಿದ್ದಾಗ, ಸರ್ವೋಚ್ಚ ನ್ಯಾಯಾಲಯದ ಕೊನೆಗೂ ʻಇವರನ್ನು ಮನೆಗೆ ಕಳಿಸಿʼ ಎಂಬರ್ಥದಲ್ಲಿ ಆದೇಶ ನೀಡಬೇಕಾಯಿತು. ಆಗಲೂ ʻಕಳಿಸ್ತೇವೆ, ಇನ್ನೊಂದೇ ಒಂದು ತಿಂಗಳ ವಿಸ್ತರಣೆಗೆ ಅವಕಾಶ ಕೊಡಿʼ ಎಂದು ಸರಕಾರ ನ್ಯಾಯಾಲಯವನ್ನು ಕೋರಿತ್ತು.

ನಮ್ಮಲ್ಲಿ ಚುನಾವಣಾ ಬಾಂಡ್‌ ಹಗರಣದಲ್ಲಿ ಉದ್ಯಮಿಗಳು, ರಾಜಕೀಯ ಪಕ್ಷಗಳಷ್ಟೇ ಅಲ್ಲ, ಇಡಿ ಕೂಡ ಭಾಗಿಯಾಗಿದೆ. ಹಾಗಿದ್ದರೆ ಜಪಾನೀ ಪ್ರಧಾನಿಯ ಮಾದರಿಯಲ್ಲಿ ನಮ್ಮ ಪ್ರಧಾನಿಯವರೂ ಇಡಿ ಅಧಿಕಾರಿಗಳ ವಿಷಯದಲ್ಲಿ ಯಾವ ಕ್ರಮವನ್ನೂ ಕೈಗೊಂಡಿಲ್ಲ ಏಕೆ? ಇಷ್ಟೊಂದು ಆರೋಪಗಳ ನಂತರವೂ ಇಡಿಯ ಸಮರ್ಥನೆ ಮಾಡಿಕೊಳ್ಳುತ್ತಲೇ ಬರುತ್ತಿರುವುದು ಏಕೆ? ತಮ್ಮ ಸಂಪುಟದ ಸಚಿವರು ಮತ್ತು ಅಧಿಕಾರಿಗಳನ್ನು ಮನೆಗೆ ಕಳಿಸುವ ಸಂದರ್ಭದಲ್ಲಿ ಕಿಷಿಡಾ ಹೇಳಿದ್ದರು: ʻಇಂಥ ಘಟನೆಯಿಂದಾಗಿ ರಾಜನೀತಿಗೇ ಕೆಟ್ಟ ಹೆಸರು ಬರುತ್ತಿರುವುದು ವಿಷಾದಕರʼ ಎಂದು ವ್ಯಥಿಸಿದರು, ಕ್ಷಮೆ ಕೇಳಿದರು.

ನಮ್ಮ ಪ್ರಧಾನಿಯವರು ಕ್ಷಮೆ ಹೋಗಲಿ, ಯಾವ ವಿಷಯಕ್ಕಾದರೂ ವಿಷಾದವನ್ನಾದರೂ ವ್ಯಕ್ತಪಡಿಸಿದ್ದಾರೆಯೆ? ʻಬಾಂಡ್‌ ಪಾರದರ್ಶಕವಾಗಿರುತ್ತದೆ, ಬಿಳಿ ಹಣದ ರೂಪದಲ್ಲೇ ವ್ಯವಹಾರ ನಡೆದಿದೆʼ ಎಂದೆಲ್ಲ ಆಳುವ ಪಕ್ಷದವರು ಹೇಳುತ್ತಾರೆ. ಹಾಗಿದ್ದರೆ ತಮಗೆ ಬಾಂಡ್‌ ಮೂಲಕ ಹಣ ಕೊಟ್ಟವರು ಯಾರು ಎಂಬುದನ್ನು ಯಾಕೆ ಬಹಿರಂಗವಾಗಿ ಹೇಳುತ್ತಿಲ್ಲ?

Donate Janashakthi Media

Leave a Reply

Your email address will not be published. Required fields are marked *