ಬೆಂಗಳೂರು : ₹ 30.92 ಕೋಟಿ ಮೌಲ್ಯದ ನಕಲಿ ನೋಟು ವಶ, 5 ಮಂದಿ ಬಂಧನ

ಬೆಂಗಳೂರು : 40 ಲಕ್ಷ ರೂ ನೀಡಿದರೆ, 1 ಕೋಟಿರೂ ಹಣ ನೀಡುವುದಾಗಿ ನಂಬಿಸಿ ನಕಲಿ ನೋಟುಗಳನ್ನು ತೋರಿಸಿ, ಮಂಕುಬೂದಿ ಎರಚುತ್ತಿದ್ದ ಐವರು ಖದೀಮರನ್ನು ಸಿಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ. ಆರೋಪಿಗಳಿಂದ 30.92 ಕೋಟಿ ರೂ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು

ಬೆಂಗಳೂರಿನಲ್ಲಿ ಸುದ್ಧಿಗಾರರಿಗೆ ಈ ವಿಷಯ ತಿಳಿಸಿದ ನಗರ ಪೊಲೀಸ್ ಆಯುಕ್ತ ದಯಾನಂದ್ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಸಾರ್ವಜನಿಕರನ್ನು ವಂಚಿಸಿದ ಆರೋಪದ ಮೇಲೆ ಸುಧೀರ್, ಕಿಶೋರ್, ರಿಶಿ ಸೇರಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಈ ಸಂಬಂಧ ವಂಚನೆಗೊಳಗಾದ ದೂರುದಾರರ ವಿಶ್ವಾಸ ಗಳಿಸಿಕೊಂಡ ಖದೀಮರು ತಮಗೆ ಪರಿಚಯವಿರುವ ಕಂಪನಿಯರ ಬಳಿ ಕಾನೂನುಬದ್ಧ ಹಣವಿದ್ದು ಈ ಕಂಪನಿಯವರು ಅಧಿಕೃತವಾಗಿ ಟ್ರಸ್ಟ್ ಇಲ್ಲವೇ ಇನ್ನಿತರ ಸಂಸ್ಥೆಗಳಿಗೆ ಯಾವುದೇ ಲಾಭಾಂಶವಿಲ್ಲದೆ ವರ್ಗಾಯಿಸುತ್ತೇವೆ. ಇದಕ್ಕೆ ಪ್ರತಿಯಾಗಿ ಟ್ರಸ್ಟ್ ಅಥವಾ ಸಂಸ್ಥೆಗಳು ತಮ್ಮ ಕಂಪನಿಗಳಿಗೆ ಶೇ. 40 ರಷ್ಟು ಹಣ ನಗದು ರೂಪದಲ್ಲಿ ಸಲ್ಲಿಸಬೇಕು. ಇದಕ್ಕಾಗಿ ಎರಡು ಪಾರ್ಟಿಗಳನ್ನು ವ್ಯವಸ್ಥೆ ಮಾಡಲು ಶೇ. 10 ರಷ್ಟು ಕಮೀಷನ್ ನೀಡಬೇಕು ಎಂದು ನಂಬಿಸಿದ್ದರು.

ಇದನ್ನೂ ಓದಿ400 ಅಲ್ಲ 175 ! ಮಾಜಿ ಚುನಾವಣಾ ಆಯುಕ್ತ ಖುರೇಷಿ ಹೇಳಿದ್ದು ಯಾರ ಬಗ್ಗೆ

ಒಂದು ಪಾರ್ಟಿಯ ಬಳಿ ಲಭ್ಯವಿರುವ ಕಪ್ಪು ಹಣವನ್ನು ವಿಡೀಯೊ ಕಾಲ್ ಮುಖಾಂತರ ತೋರಿಸಲು 25 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಬೇಡಿಕೆಯಿಟ್ಟಿದ್ದರು. ಹಣ ನೀಡಿದರೆ ನಾವು ನಿಮಗೆ ವಿಡೀಯೊ ಕಾಲ್ ಮಾಡಿ ಹಣದ ಬಂಡಲ್‌ಗಳನ್ನು ತೋರಿಸುವುದಾಗಿ ನಂಬಿಸಿದ್ದರು. ಅಲ್ಲದೆ ಒಂದು ಸ್ಥಳಕ್ಕೆ ಬರಮಾಡಿಕೊಂಡು ವಿಡೀಯೊ ಕಾಲ್ ಮುಖಾಂತರ ತಮ್ಮ ಬಳಿಯಿರುವ ಕಂತೆ ಕಂತೆ ಹಣದ ಬಂಡಲ್‌ಗಳನ್ನು ತೋರಿಸಿದ್ದರು.

ಆದರೆ ಈ ದೂರುದಾರರಿಗೆ ಸಂಶಯ ವ್ಯಕ್ತವಾಗಿ ಆರೋಪಿ ವಂಚಿಸುವ ಉದ್ಧೇಶ ಹೊಂದಿದ್ದು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.ಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಸಿಬ್ಬಂದಿ ಕಾರ್ಯಾಚರಣೆಗಳು ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಬಯಲಿಗೆ ಬಂದಿದೆ. 30.92 ಕೋಟಿ ನಕಲಿ ನೋಟುಗಳು.
ಆರೋಪಿಯ ಮನೆ ಮತ್ತು ಕಚೇರಿಯ ಮೇಲೆ ಶೋಧ ನಡೆಸಿದಾಗ ವಶಪಡಿಸಿಕೊಳ್ಳಲಾಗಿದೆ ಎಂದು ದಯಾನಂದ ವಿವರಿಸಿದರು. ಬೆಂಗಳೂರು

 

Donate Janashakthi Media

Leave a Reply

Your email address will not be published. Required fields are marked *