ಹಿರಿಯ ಕಲಾವಿದರ ಕೇಂದ್ರ ಸಹಾಯಧನದಲ್ಲಿ ಇಳಿಕೆ: ಡಾ. ವಿ. ಸಿವದಾಸನ್ ಆತಂಕ

ನವದೆಹಲಿ: ಹಿರಿಯ ಕಲಾವಿದರಿಗೆ ನೀಡಲಾಗುತ್ತಿರುವ ಕೇಂದ್ರದ ಆರ್ಥಿಕ ಸಹಾಯಧನದಲ್ಲಿ ಕಡಿತಗೊಂಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ. ವಿ. ಸಿವದಾಸನ್ ತಿಳಿಸಿದ್ದಾರೆ.

ಸಂಸ್ಕೃತಿ ಸಚಿವಾಲಯ ಜಾರಿಗೊಳಿಸಿರುವ ಹಿರಿಯ ಕಲಾವಿದರ ಆರ್ಥಿಕ ಸಹಾಯ ಯೋಜನೆ ಕುರಿತು ಅವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿದ ಉತ್ತರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಇದನ್ನೂ ಓದಿ: ಭಾರತದ ಲೋಕಸಭೆಯಲ್ಲಿನ ಬಿಕ್ಕಟ್ಟು: ಕೇಂದ್ರೀಕೃತ ಅಧಿಕಾರ ಮತ್ತು ಮೌನಗೊಂಡ ವಿರೋಧ

ಸರ್ಕಾರದ ಉತ್ತರದ ಪ್ರಕಾರ, ಯೋಜನೆಯಡಿ ಲಾಭಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರೂ ಒಟ್ಟು ನೀಡಲಾಗುತ್ತಿರುವ ಹಣದ ಮೊತ್ತ ಕಡಿಮೆಯಾಗಿದೆ. 2023–24ನೇ ಸಾಲಿನಲ್ಲಿ ಹಿರಿಯ ಕಲಾವಿದರಿಗೆ ಒಟ್ಟು ₹28.96 ಕೋಟಿ ಸಹಾಯಧನ ನೀಡಲಾಗಿತ್ತು. ಆದರೆ 2024–25ರಲ್ಲಿ ಅದು ₹26.09 ಕೋಟಿಗೆ ಇಳಿಕೆಯಾಗಿದೆ.

ಇದೇ ಅವಧಿಯಲ್ಲಿ ಲಾಭಾರ್ಥಿಗಳ ಸಂಖ್ಯೆ 3811ರಿಂದ 4636ಕ್ಕೆ ಏರಿಕೆಯಾಗಿದೆ. ಇದರ ಪರಿಣಾಮವಾಗಿ ಹೆಚ್ಚು ಕಲಾವಿದರಿಗೆ ಕಡಿಮೆ ಹಣವನ್ನು ಹಂಚಲಾಗುತ್ತಿದ್ದು, ಪ್ರತಿ ಕಲಾವಿದನಿಗೆ ದೊರೆಯುವ ಸಹಾಯಧನದ ಪ್ರಮಾಣವು ವಾಸ್ತವವಾಗಿ ಕಡಿಮೆಯಾಗುತ್ತಿದೆ.

ಸ್ಥಿರ ಆದಾಯವಿಲ್ಲದೆ ಬದುಕುತ್ತಿರುವ ಅನೇಕ ಹಿರಿಯ ಕಲಾವಿದರ ಪರಿಸ್ಥಿತಿಯಲ್ಲಿ ಇಂತಹ ಕಡಿತವು ಅವರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಇದನ್ನೂ ನೋಡಿ: LIVE: 56 ಸಾವಿರ ಹುದ್ದೆಗಳಿಗೆ ಒಳಮೀಸಲಾತಿ ಅನ್ವಯಿಸಲು ಒತ್ತಾಯಿಸಿ ಬೃಹತ್‌ ಪ್ರತಿಭಟನೆ

Donate Janashakthi Media

Leave a Reply

Your email address will not be published. Required fields are marked *