ನನ್ನದು ಒರಿಜಿನಲ್ ಜೆಡಿಎಸ್, ನಮ್ಮ ಬೆಂಬಲ ಇಂಡಿಯಾ ಒಕ್ಕೂಟಕ್ಕೆ- ಸಿಎಂ ಇಬ್ರಾಹಿಂ
ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ, ನನ್ನದು ಒರಿಜಿನಲ್ ಜೆಡಿಎಸ್ ಎಂದು ಸಿಎಂ ಇಬ್ರಾಹಿಂ, ಎಚ್‌ಡಿ ದೇವೆಗೌಡ ಮತ್ತು ಎಚ್‌ಡಿ ಕುಮಾರಸ್ವಾಮಿಗೆ ಖಡಕ್ ಸಂದೇಶ ನೀಡಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ವಿರೋಧಿಸಿ ಬೆಂಬಲಿಗರ ಜೊತೆ ಚಿಂಥನ-ಮಂಥನ ಸಭೆಯನ್ನ ಸಿ.ಎಂ ಇಬ್ರಾಹಿಂ ಕರೆದಿದ್ದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ. ಇದು ನಮ್ಮ ಮೊದಲ ನಿರ್ಧಾರ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೆಚ್.ಡಿ.ದೇವೇಗೌಡರಿಗೆ ಹೇಳುತ್ತೇವೆ. ನನ್ನದು ಒರಿಜಿನಲ್ ಜೆಡಿಎಸ್. ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದರು.
ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ತತ್ವ ಸಿದ್ಧಾಂತ, ತತ್ವ ಬೇರೆ ಇದೆ, ಅದಕ್ಕೆ ನಾವು ವಿರೋಧ ಮಾಡುತ್ತೇವೆ ಎಂದ ಇಬ್ರಾಹಿಂ, ಮುಂದೆ ಎನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಯಾರನ್ನ ನೀವು ನಂಬಿದ್ದೀರಿ ಅವರೇ ನಿಮ್ಮ ಕೈ ಕೊಟ್ಟರು. ನಮ್ಮ ಮನೆಯಲ್ಲಿ ನಾವು ಇದ್ದೇವೆ. ಮುಂದೆ ಎನಾಗುತ್ತೆ ಪರದೆ ಮೇಲೆ ನೋಡಬೇಕು. ನಾನು ಹೆದರುವನು ಅಲ್ಲ, ಬೆದರಿಕೆ ಹಾಕಲ್ಲ ಎಂದರು.
ಇದನ್ನೂ ಓದಿ : ಕಮಲ “ದಳವನ್ನು” ನುಂಗುತ್ತಾ? ಜೆಡಿಎಸ್ ಶವಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯಲಿದೆಯೇ ಬಿಜೆಪಿ?
1995 ರಲ್ಲಿ ಜೆಡಿಎಸ್ ಅಧ್ಯಕ್ಷನಾಗಿ 16 ಲೋಕಸಭೆ ಸದಸ್ಯರನ್ನ ಗೆಲ್ಲಿಸಿ ದೇವೇಗೌಡರನ್ನ ಪ್ರಧಾನಿ ಮಾಡಿದ್ದ ಕೀರ್ತಿ ಇದೆ. ಇವತ್ತು ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು. ಅಂಬೇಡ್ಕರ್ ದೇಶದಕ್ಕೆ ಸಂವಿಧಾನ ಬರೆದ ವ್ಯಕ್ತಿ. ಇದೇ ಸಂದೇಶವನ್ನು 800 ವರ್ಷಗಳ ಹಿಂದೆ ಬಸವಣ್ಣ ಕೊಟ್ಟರು. ಇವತ್ತು ಏಕಾಏಕಿ ಅಮಿಶ್ ಶಾ ಭೇಟಿ ಮಾಡಿ ಪೋಟೋ ತೆಗೆಸಿಕೊಂಡು ಮೈತ್ರಿ ಅಂತ ಹೇಳಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಪಕ್ಷ ಕುಟುಂಬದ ಸ್ವತ್ತು ಅಲ್ಲ. ಸರ್ವರ ಅಭಿಪ್ರಾಯ ಬಹಳ ಮುಖ್ಯ. ಜಿಲ್ಲಾ ಅಧ್ಯಕ್ಷರು ಕರೆಯಲಿಲ್ಲ. ನನ್ನ ಸಂಪರ್ಕದಲ್ಲಿ ಶಾಸಕರು ಇದ್ದಾರೆ. ಕೋರ್ ಕಮಿಟಿ ಮಾಡಿ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಮೈತ್ರಿ ಮಾಡಿಕೊಂಡರೆ ನಾಲ್ಕು ಸೀಟು ಸಿಗುತ್ತದೆ. ನಾವು ಶಕ್ತಿ ಪ್ರದರ್ಶನ ಮಾಡಬಹುದಿತ್ತು. ನಾನು ಕೋರ್ ಕಮಿಟಿ ರಚನೆ ಮಾಡಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.
ಎನ್‌ಡಿಎ ಸೋಲಿಸಬೇಕು. ಹೀಗಾಗಿ ಐಎನ್‌ಡಿಐಎಗೆ ಬೆಂಬಲ ಕೊಡಬೇಕು ಅಂತ ನಿರ್ಣಯ ಆಗಿದೆ. ಮೈತ್ರಿ ಬಗ್ಗೆ ನಿಲುವು ತಿಳಿಸೋಕೆ ಕೋರ್ ಕಮಿಟಿ ಮಾಡ್ತೀನಿ. ಅದು ಮುಂದಿನ ತೀರ್ಮಾನ ಮಾಡುತ್ತೆ. ನಾನು ದೇವೇಗೌಡರನ್ನ ಭೇಟಿ ಆಗ್ತೀನಿ. ಯಾವಾಗ ಅಂತ ಹೇಳಿ ಹೋಗ್ತೀನಿ. ಸದ್ಯ ಒರಿಜಿನಲ್ ಜೆಡಿಎಸ್ ಇಂಡಿಯಾಗೆ ಬೆಂಬಲ ಕೊಡುತ್ತೆ ಎಂದು ತಮ್ಮ ನಿಲುವು ತಿಳಿಸಿದರು.
ಈ ವಿಡಿಯೋ ನೋಡಿ : ಸದನದಲ್ಲಿ ಸಚಿವ ಚಲುವರಾಯಸ್ವಾಮಿ, ಮಾಜಿ ಸಿಎಂ ಕುಮಾರಸ್ವಾಮಿ ನಡುವೆ ಏಕವಚನದಲ್ಲೇ ವಾಗ್ಯುದ್ಧ