ಬೆಳಗಾವಿ| ಚಿನ್ನದ ಅಂಗಡಿ ಮಾಲೀಕನಿಗೆ ಗನ್​ ತೋರಿಸಿ ಆಭರಣ ದೋಚಲು ಯತ್ನ

Please follow and like us:
ಬೆಳಗಾವಿ: ಚಿನ್ನದ ಅಂಗಡಿ ಮಾಲೀಕನಿಗೆ ಗನ್​ ತೋರಿಸಿ ಆಭರಣ ದೋಚಲು ಯತ್ನಿಸಿರುವ ಘಟನೆ ಬೆಳಗಾವಿಯ ಶಾಹು ನಗರದಲ್ಲಿ ನಡೆದಿದೆ. ಆರೋಪಿಗಳು ಗನ್​ ತೋರಿಸುತ್ತಿದ್ದಂತೆ ಅಂಗಡಿ ಮಾಲೀಕ ಕಿರುಚಾಡಿದ್ದಾನೆ. ಈ ವೇಳೆ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಆರೋಪಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗನ್​​ನಿಂದ ಹೊಡೆದು ಚಿನ್ನದಂಗಡಿ ದರೋಡೆ ಮಾಡಲು ಯತ್ನಿಸಿದ್ದಾರೆ. ಪ್ರಶಾಂತ್ ಹೊಂಡ್ರಾ ಎಂಬುವರು ಸೋಮವಾರ ಅ.16 ಬೆಳಿಗ್ಗೆ ತಮ್ಮ ಸಂತೋಷಿ ಜ್ಯುವೆಲರ್ಸ್​​ ಅಂಗಡಿ ಬಾಗಿಲು ತೆಗೆಯುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಆರೋಪಿಗಳು ಪ್ರಶಾಂತ್ ಅವರಿಗೆ ಗನ್ ತೋರಿಸಿ ನಂತರ ಗನ್​ನ ಹಿಂಬದಿಯಿಂದ ತಲೆಗೆ ಹೊಡೆದು ಹಲ್ಲೆ‌ ಮಾಡಿದ್ದಾರೆ.

ಇದನ್ನೂ ಓದಿ:ಲಾಂಗ್‌ ಹಿಡಿದುಕೊಂಡು ಬಂದು ಉಪನ್ಯಾಸಕರಿಗೆ ಬೆದರಿಕೆ ಹಾಕಿದ ವಿದ್ಯಾರ್ಥಿ!

ಈ ವೇಳೆ ಗನ್​​ ಮ್ಯಾಗ್ಜಿನ್​​ನಿಂದ ಒಂದು ಗುಂಡು ಹೊರ ಬಿದ್ದಿದೆ. ಅಂಗಡಿ ಮಾಲೀಕ ಕಿರುಚಾಡುತ್ತಿದ್ದಂತೆ ಇಬ್ಬರು ದುಷ್ಕರ್ಮಿಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಆರೋಪಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಪ್ರಶಾಂತ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಸಿಪಿ, ಇಬ್ಬರು ಎಸಿಪಿ ಸೇರಿದಂತೆ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

ಓರ್ವ ಆರೋಪಿ ಹೆಲ್ಮೆಟ್ ಹಾಕಿಕೊಂಡು ಮತ್ತೋರ್ವ ಆರೋಪಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಅಂಗಡಿ ಪ್ರವೇಶಿಸಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಡಿಯೋ ನೋಡಿ:ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ

Please follow and like us:
Donate Janashakthi Media

Leave a Reply

Your email address will not be published. Required fields are marked *