ಬೆಂಗಳೂರು: ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುತ್ತಿದ್ದವನ ಬಾಳಿಗೆ ಮಡಿವಾಳ ಸಂಚಾರಿ ಇನ್ಸ್ಪೆಕ್ಟರ್ ಶಿವಕುಮಾರ್ ಕ್ಯಾದಗೇರಾ ಬೆಳಕಾಗಿದ್ದಾರೆ. ಪತ್ನಿಯ ಅಗಲಿಕೆಯ ನೋವಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆ ಬಿಟ್ಟು ಭಿಕ್ಷುಕನಂತೆ ಅಲೆದಾಡುತ್ತಿದ್ದ ವ್ಯಕ್ತಿಯನ್ನು ಮಡಿವಾಳ ಸಂಚಾರಿ ಇನ್ಸ್ಪೆಕ್ಟರ್ ಶಿವಕುಮಾರ್ ಕ್ಯಾದಗೇರಾ ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ.
ಕೆಲ ದಿನಗಳ ಹಿಂದೆ ಮಡಿವಾಳ ಸಂಚಾರಿ ಠಾಣಾ ಮುಂದೆ ಭಿಕ್ಷುಕನಂತೆ ಕಾಣುವ ವ್ಯಕ್ತಿಯೊಬ್ಬ ಮುಷ್ಟಿಯಲ್ಲಿ ಅನ್ನ ಹಿಡಿದು ಜನರ ಬಳಿ ನೀರು ಕೇಳುತ್ತಿದ್ದ ಇದನ್ನು ಗಮನಿಸಿದ ಇನ್ಸ್ಪೆಕ್ಟರ್ ಶಿವಕುಮಾರ್, ಆತನನ್ನು ಠಾಣೆಗೆ ಕರೆದು ನೀರು ಕೊಟ್ಟು ದಣಿವಾರಿಸಿದ್ದಾರೆ. ಬಳಿಕ ಅವರ ಈ ಅವಸ್ಥೆಗೆ ಕಾರಣ ಕೇಳಿದ್ದಾರೆ. ಈ ವೇಳೆ ಅವನ ಮನಕಲಕುವ ಕಥೆ ಕೇಳಿ ಅವರ ಬಾಳನ್ನು ಬದಲಾಯಿಸಲು ಮುಂದಾಗಿದ್ರು. ಕಟಿಂಗ್ ಮಾಡಿಸಿ, ಸ್ನಾನ ಮಾಡಿಸಿ ಚಿಕಿತ್ಸೆ ಕೊಡಿಸಿ ಸಾಮಾನ್ಯನಂತೆ ಮಾಡಿ ಕೆಲಸಕ್ಕೂ ಸೇರಿಸಿದ್ದಾರೆ.
ಇನ್ನೂ ಶಂಕರ್ ಹೀಗಾಗಲು ಕಾರಣ ಏನು ಅಂದ್ರೆ, ಪಾವಗಡ ಮೂಲದ 42 ವರ್ಷದ ಶಂಕರ್, ವೃತ್ತಿಯಲ್ಲಿ ಟೈಲರ್ ಆಗಿದ್ದರು. ಊರಲ್ಲಿ ತನ್ನ ಹೆಂಡತಿ-ಮಕ್ಕಳೊಂದಿಗೆ ಸಂತೋಷವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಎರಡೂವರೆ ವರ್ಷದ ಹಿಂದೆ ಕಡಿಮೆ ರಕ್ತದೊತ್ತಡದಿಂದ ಹೆಂಡತಿ ಮೃತಪಟ್ಟಿದ್ದರು. ಇದರಿಂದ ನೊಂದಿದ್ದ ಶಂಕರ್ ಊರು ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದರು. ಪತ್ನಿಯ ನೆನಪಲ್ಲೇ ಅಲೆಮಾರಿ ಹಾಗೆ ಅಲೆದಾಡುತ್ತ ಭಿಕ್ಷೆ ಬೇಡತ್ತ ಜೀವನ ನಡೆಸಿದ್ದರು. ಸದ್ಯ ಇನ್ಸ್ಪೆಕ್ಟರ್ ಶಿವಕುಮಾರ್, ಶಂಕರ್ ನನ್ನು ಮತ್ತೆ ತನ್ನ ಹೊಸ ಜೀವನ ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ. ಅಧಿಕಾರಿಗಳ ಜೊತೆ ಮಾತನಾಡಿ ಪೊಲೀಸರು ಭಿಕ್ಷೆ ಬೇಡುತ್ತಿದ್ದವನು ಈಗ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಟೈಲರ್ ಕೆಲಸಕ್ಕೆ ಸೇರಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇನ್ನೂ , ಇನ್ಸ್ಪೆಕ್ಟರ್ ಶಿವಕುಮಾರ್ ಸದಾ ಮಾನವೀಯತೆಗೆ ಸ್ಪಂದಿಸುವ ಪೊಲೀಸ್ ಅಧಿಕಾರಿಯಾಗಿದ್ದಾರೆ. ಅವರು ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೆ ಜನಪರ ಹೋರಾಟಗಳ ಮೂಲಕ ಬಡಜನರ, ದಲಿತರ ಆಶಾಕಿರಣವಾಗಿ ಕೆಲಸಮಾಡಿದವರು, ಹೆಲ್ಮೆಟ್ ಹಾಕದಿದ್ದರೆ ದಂಡ ಹಾಕುವ ಪೊಲೀಸರನ್ನು ನೀವು ನೋಡಿದ್ದೀರಾ, ಆದರೆ ಇವರ ದಂಡ ಹಾಕುವ ಬದಲು ಹೆಲ್ಮೆಟ್ ನೀಡಿ, ಅದರ ಮಹತ್ವ ಹಾಗೂ ಜೀವನ ರಕ್ಷಣೆಯ ಕುರಿತು ಮಹತ್ವದ ಮಾಹಿತಿಗಳನ್ನು ನೀಡಿ ಅವರನ್ನು ಜಾಗೃತಗೊಳಿಸುತ್ತಾರೆ. ರಣಹದ್ದಿಗೆ ಚಿಕಿತ್ಸೆ ನೀಡಿ ಪ್ರಾಣಿಗಳ ರಕ್ಷಕರೂ ಆಗಿದ್ದಾರೆ. ಇದನ್ನೆಲ್ಲ ನಾನು ಪ್ರಚಾರಕ್ಕಾಗಿ ಮಾಡುತ್ತಿಲ್ಲ, ಅಥವಾ ನನ್ನ ಬಳಿ ಹಣ ಇದೆ ಎನ್ನುವ ಕಾರಣಕ್ಕಾಗಿ ಮಾಡುತ್ತಿಲ್ಲ, ಒಳ್ಳೆಯ ಮನಸ್ಸು ಇರುವ ಕಾರಣದಿಂದ ನಾನು ಇಂತಹ ಕೆಲಸಗಳನ್ನು ಮಾಡುತ್ತಿದ್ದೇನೆ. ಮಾನವೀಯತೆಗೆ ಸ್ಪಂದಿಸುವುದು ನನ್ನ ಕರ್ತವ್ಯ ಎಂದೆನ್ನುತ್ತಾರೆ ಇನ್ಸ್‌ಪೆಕ್ಟರ್ ಶಿವಕುಮಾರ್.
ಇನ್ಸಪೆಕ್ಟರ್ ಶಿವಕುಮಾರ್ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
God blesyou sir