Andhra Civic Polls Result; ಎಲ್ಲ13 ಕಾರ್ಪೊರೇಷನ್‌ಗಳಲ್ಲಿ NDAಗೆ ಮುನ್ನಡೆ; ಮುರಾಸು ಚಂಡಮಾರುತದಿಂದ ಮತ ಎಣಿಕೆಗೆ ಅಡ್ಡಿ

  • ಆಂಧ್ರಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ.
  • 13 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲೂ ಎನ್‌ಡಿಎಗೆ ಮುನ್ನಡೆ.
  • ಜಿವಿಎಂಸಿ  ವಾರ್ಡ್ 43ರಲ್ಲಿ ಗೆಲುವು ಸಾಧಿಸಿದ ಜನಸೇನಾ ಅಭ್ಯರ್ಥಿ ನಳಿನಿ.
  • ಹಲವು ವಾರ್ಡ್‌ಗಳಲ್ಲಿ ಸಿಪಿಐ(ಎಂ) ಗೆಲುವು
ಅಮರಾವತಿ: ಆಂಧ್ರಪ್ರದೇಶ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಎಲ್ಲಾ 13 ಮುನ್ಸಿಪಲ್ ಕಾರ್ಪೊರೇಷನ್‌ಗಳಲ್ಲೂ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ, ಪ್ರಕಾಶಂ ಮತ್ತು ಬಾಪಟ್ಲಾ ಜಿಲ್ಲೆಗಳಲ್ಲಿ ಮುರಾಸು ಚಂಡಮಾರುತದ ಪ್ರಭಾವದಿಂದಾಗಿ ಮತ ಎಣಿಕೆ ಪ್ರಕ್ರಿಯೆಗೆ ತುಸು ನಿಧಾನವಾಗಿದೆ.  ಕಾರ್ಪೊರೇಷನ್‌

 ಎನ್‌ಡಿಗೆ ಸ್ಪಷ್ಟ ಬಹುಮತ

ಸದ್ಯದ ಲಭ್ಯ ಮಾಹಿತಿ ಪ್ರಕಾರ ಒಟ್ಟು 3,942 ವಾರ್ಡ್‌ಗಳ ಪೈಕಿ 2,200 ಕ್ಕೂ ಹೆಚ್ಚು ವಾರ್ಡ್‌ಗಳ ಫಲಿತಾಂಶ ಪ್ರಕಟವಾಗಿದ್ದು, ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತದತ್ತ ಸಾಗಿದೆ.  ಆದರೆ, ಒಟ್ಟಾರೆ ಫಲಿತಾಂಶ ಬಗ್ಗೆ ಹಂತ ಹಂತವಾಗಿ ಮಾಹಿತಿ ಸಿಗಲಿದೆ.

ಯಾವ ಪಕ್ಷ ಎಷ್ಟು ಕ್ಷೇತ್ರದಲ್ಲಿ ಕಣದಲ್ಲಿದೆ?

ಆಂಧ್ರಪ್ರದೇಶದ 92 ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್‌ಬಿ) ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಮಂಗಳವಾರ (ನವೆಂಬರ್ 3, 2026) ಆರಂಭವಾಗಿದ್ದು, ಹಂತ ಹಂತವಾಗಿ ಫಲಿತಾಂಶ ಪ್ರಕಟವಾಗುತ್ತಿದೆ. 13 ಪುರಸಭೆ ಮತ್ತು 79 ಪುರಸಭೆಗಳು ಮತ್ತು ನಗರ ಪಂಚಾಯತ್‌ಗಳನ್ನು ಒಳಗೊಂಡ 92 ನಗರ ಸ್ಥಳೀಯ ಸಂಸ್ಥೆಗಳಿಗೆ ನವೆಂಬರ್ 1 ರಂದು ಚುನಾವಣೆ ನಡೆದಿದ್ದು, ಅಂತಿಮ ಮತದಾನ ಶೇ.62.16ರಷ್ಟು ದಾಖಲಾಗಿತ್ತು.

3,186 ವಾರ್ಡ್‌ಗಳಲ್ಲಿ 138 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ಗಳ ಪ್ರಕಾರ,  ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (NDA) ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ತೆಲುಗು ದೇಶಂ ಪಕ್ಷ (ಟಿಡಿಪಿ), ಜನ ಸೇನಾ ಪಕ್ಷ (ಜೆಎಸ್‌ಪಿ) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಎಲ್ಲಾ 13 ಪುರಸಭೆಗಳಲ್ಲಿ ಮುನ್ನಡೆ ಸಾಧಿಸಿವೆ.

ಚಿತ್ತೂರು ಪ್ರದೇಶದಲ್ಲಿ ಟಿಡಿಪಿ ಹಲವಾರು ಸ್ಥಾನಗಳನ್ನು ಸರ್ವಾನುಮತದಿಂದ ಗೆದ್ದಿದೆ ಎಂದು ವರದಿಯಾಗಿದೆ. ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಟಿಡಿಪಿ, ಜೆಎಸ್‌ಪಿ ಮತ್ತು ಬಿಜೆಪಿ ಈ ಪೌರಾಡಳಿತ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ ವಿರುದ್ಧ ಸ್ಪರ್ಧಿಸುತ್ತಿವೆ. ಒಟ್ಟು 13 ಮೇಯರ್‌ ಹುದ್ದೆಗಳಿಗಾಗಿ ತೆಲುಗು ದೇಶಂ ಪಕ್ಷ 10 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರಲ್ಲಿ, ಜನಸೇನಾ 2, ಬಿಜೆಪಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿತು.  ಇನ್ನೂYSRP ಎಲ್ಲಾ 13 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. 70 ಪುರಸಭೆ ಮತ್ತು ನಗರ ಪಂಚಾಯತ್ ಅಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸಲಾಗುತ್ತಿದ್ದು, ಟಿಡಿಪಿ 49 ಸ್ಥಾನಗಳಲ್ಲಿ, ಜನಸೇನಾ 17 ಸ್ಥಾನಗಳಲ್ಲಿ ಮತ್ತು ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ವೈಎಸ್‌ಆರ್‌ಸಿಪಿ ಎಲ್ಲಾ 70 ಸ್ಥಾನಗಳಲ್ಲಿಯೂ ಕಣದಲ್ಲಿದೆ.

ಆಂಧ್ರದಲ್ಲಿ ಮುರಾಸು ಚಂಡಮಾರುತದ ಅಬ್ಬರದಿಂದ ಸುರಿದ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಮತ ಎಣಿಕೆ ಕಾರ್ಯದಲ್ಲಿ ಬದಲಾವಣೆ ಮಾಡಲಾಗಿತ್ತು.ಪುಲಿವೆಂದುಲದಲ್ಲಿ ಮತ ಎಣಿಕೆ ತಡೆ ಮತ್ತು ಮರು ಮತದಾನಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಆಂಧ್ರಪ್ರದೇಶ ಹೈಕೋರ್ಟ್ ವಜಾಗೊಳಿಸಿದ್ದು, ಎಣಿಕೆ ಪ್ರಕ್ರಿಯೆ ಮುಂದುವರಿಯಲು ದಾರಿ ಸುಗಮವಾಗಿ ಮತ್ತೆ ಆರಂಭವಾಯಿತು.

ಇದನ್ನೂ ಓದಿ: ಮತ ಉಳಿಸಿ, ದೇಶ ಉಳಿಸಿ: ದೆಹಲಿಯಲ್ಲಿ ಇಂಡಿಯಾ ಕೂಟದ ಬೃಹತ್ ಪ್ರತಿಭಟನೆ; ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ

ಯಾರಿಗೆಲ್ಲ ಜಯ

ಜಿವಿಎಂಸಿ  ವಾರ್ಡ್ 43ರಲ್ಲಿ ಗೆಲುವು ಸಾಧಿಸಿದ ಜನಸೇನಾ ಅಭ್ಯರ್ಥಿ ನಳಿನಿ, ಮಂಗಳವಾರ ವಿಶಾಖಪಟ್ಟಣಂನ ಮತ ಎಣಿಕೆ ಕೇಂದ್ರದ ಹೊರಗೆ ಕುಟುಂಬದೊಂದಿಗೆ ಸಂಭ್ರಮಿಸಿದರು.

2 ಸುತ್ತುಗಳ ನಂತರ ಟಿಡಿಪಿಗೆ ಭರ್ಜರಿ ಮುನ್ನಡೆ

ತಿರುಪತಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎರಡು ಸುತ್ತಿನ ಮತ ಎಣಿಕೆ ನಂತರ ಟಿಡಿಪಿ ಮೇಯರ್ ಅಭ್ಯರ್ಥಿ ಮನ್ನೆ ಶ್ರೀನಿವಾಸ ಪ್ರಸಾದ್ ಅಲಿಯಾಸ್ ಜೆಬಿ ಶ್ರೀನಿವಾಸ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.ಜೆಬಿ ಶ್ರೀನಿವಾಸ್ 23,435 ಮತಗಳನ್ನು ಪಡೆದು ಮುನ್ನಡೆಯಲ್ಲಿದ್ದರೆ, ವೈಎಸ್‌ಆರ್‌ಸಿಪಿ ಅಭ್ಯರ್ಥಿ ವೈ. ವಾಸುದೇವ 9,490 ಮತಗಳನ್ನು ಪಡೆದಿದ್ದಾರೆ.

ಆಂಧ್ರಪ್ರದೇಶ ಸ್ಥಳೀಯ ಚುನಾವಣೆ: ವಿವಿಧ ವಾರ್ಡ್‌ಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳ ಗೆಲುವು

ಆಂಧ್ರಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಿಪಿಐ(ಎಂ) ಅಭ್ಯರ್ಥಿಗಳು ವಿವಿಧ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. ವಿಶಾಖಪಟ್ಟಣಂ, ನೆಲ್ಲೂರು, ನಂದ್ಯಾಲ, ಕೃಷ್ಣಾ ಮತ್ತು ಕರ್ನೂಲು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿರುವ ಮಾಹಿತಿ ಲಭ್ಯವಾಗಿದೆ.

ವಿಶಾಖಪಟ್ಟಣಂ ಜಿಲ್ಲೆಯ ಸ್ಟೀಲ್ ಪ್ಲಾಂಟ್ ಪ್ರದೇಶದ ಗ್ರೇಟರ್ ವಿಶಾಖಪಟ್ಟಣಂ ಮಹಾನಗರ ಪಾಲಿಕೆಯ 105ನೇ ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಎಂ. ಕೃಷ್ಣಯ್ಯ ಗೆಲುವು ಸಾಧಿಸಿದ್ದಾರೆ. ಅವರು 1,068 ಮತಗಳನ್ನು ಪಡೆದರೆ, ಟಿಡಿಪಿ ಅಭ್ಯರ್ಥಿ ಕೆ. ವಿಜಯ್ ಕುಮಾರ್ 964 ಮತಗಳನ್ನು ಪಡೆದಿದ್ದಾರೆ. 104 ಮತಗಳ ಅಂತರದಿಂದ ಕೃಷ್ಣಯ್ಯ ಜಯಗಳಿಸಿದ್ದಾರೆ.

ನೆಲ್ಲೂರು ಜಿಲ್ಲೆಯ ಆತ್ಮಕೂರು ಪುರಸಭೆಯ 21ನೇ ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಸತ್ಯವತಿ ಗೆಲುವು ಸಾಧಿಸಿದ್ದಾರೆ. ನಂದ್ಯಾಲ ಜಿಲ್ಲೆಯ ಆತ್ಮಕೂರು ಪುರಸಭೆಯ 23ನೇ ವಾರ್ಡ್‌ನಲ್ಲಿ ಸಿಪಿಐ(ಎಂ) ಪಕ್ಷದ ಅಭ್ಯರ್ಥಿ ಆಕುತೋಟ ರಣಧೀರ್ ಜಯಗಳಿಸಿದ್ದಾರೆ.

ಕೃಷ್ಣಾ ಜಿಲ್ಲೆಯ ತಿರುವುರು ಪುರಸಭೆಯ 13ನೇ ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ನಾಗಮಣಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಾರೆ. ಕರ್ನೂಲು ಜಿಲ್ಲೆಯ ಆದೋನಿ ಪುರಸಭೆಯ 19ನೇ ವಾರ್ಡ್‌ನಲ್ಲಿ ಸಿಪಿಐ(ಎಂ) ಅಭ್ಯರ್ಥಿ ಡಿ. ಲಕ್ಷ್ಮಣ್ಣ ಜಯಗಳಿಸಿದ್ದಾರೆ.

ಇದನ್ನು ನೋಡಿ: ಫ್ರಾನ್ಸ್‌ನಲ್ಲಿ ವಿದ್ಯಾರ್ಥಿ ಕ್ರಾಂತಿ! ಸರ್ಕಾರಕ್ಕೆ ಸವಾಲಾದ ಐತಿಹಾಸಿಕ ಹೋರಾಟ | ಗುರುರಾಜ ದೇಸಾಯಿ

Donate Janashakthi Media