ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ವಿವಿಧ ಸಂಘಟನೆಗಳು ಮಂಗಳವಾರ ಬೆಂಗಳೂರು ಬಂದ್ಗೆ ಕರೆ ನೀಡಿವೆ. ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಂಚಾರ, ವ್ಯಾಪಾರ ವಹಿವಾಟು ಎಂದಿನಂತೆ ನಡೆದಿಲ್ಲ. ಈ ನಡುವೆ, ”ಕಾವೇರಿ ಹೋರಾಟಕ್ಕೆ ಕ್ರಿಕೆಟಿಗ ಕೆ ಎಲ್ ರಾಹುಲ್ ಬೆಂಬಲ ನೀಡಿದ್ದಾರೆ” ಎಂದು ಫೇಕ್ ಅಕೌಂಟ್ ಹೇಳಿಕೆಯ ಆಧಾರದಲ್ಲಿ ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಸುಳ್ಳು ವರದಿಯೊಂದನ್ನು ಪ್ರಕಟಿಸಿ ಡಿಲೀಟ್ ಮಾಡಿದ್ದಾರೆ.
ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಚಿತ್ರ ಮತ್ತು ಅವರ ಹೆಸರಿನಲ್ಲಿರುವ ನಕಲಿ ಖಾತೆಯಾದ @_klrahul__ ಎಂಬ ಟ್ವಿಟರ್(ಎಕ್ಸ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದ ಟ್ವೀಟ್ ಆಧಾರದಲ್ಲಿ ಪಬ್ಲಿಕ್ ಟಿವಿ ಈ ವರದಿಯನ್ನು ಪ್ರಕಟಿಸಿದೆ. ಆದರೆ @_klrahul__ ಎಂಬ ಖಾತೆಯ ಪ್ರೋಫೈಲ್ನಲ್ಲೆ ತಮ್ಮದು ”ಫ್ಯಾನ್ ಪೇಜ್” ಎಂದು ಖಾತೆಯು ಬರೆದಿದೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್ | ಆರೆಸ್ಸೆಸ್ ಅನ್ನು ನಿಷೇಧಿಸಿತೆ ಕೆನಡಾ ಸರ್ಕಾರ?
ಆದರೆ ಪಬ್ಲಿಕ್ ಟಿವಿ ಅದನ್ನು ಗಮನಿಸದೆ, “ಕಾವೇರಿ ಕನ್ನಡಿಗರ ಆಸ್ತಿ – ಹೋರಾಟಕ್ಕೆ ಕನ್ನಡಿಗ ಕೆ.ಎಲ್. ರಾಹುಲ್ ಬೆಂಬಲ” ಎಂಬ ತಲೆಬರಹದೊಂದಿಗೆ ತನ್ನ ವರದಿಯನ್ನು ಪ್ರಕಟಿಸಿದೆ. ಜೊತೆಗೆ ಆ ವರದಿಯ ಲಿಂಕ್ಅನ್ನು ಟ್ವಿಟರ್ನಲ್ಲಿ ಕೂಡಾ ಪೋಸ್ಟ್ ಮಾಡಿ, ಡಿಲೀಟ್ ಮಾಡಿದೆ.
ಕಾವೇರಿ ಹೋರಾಟದ ಹಿನ್ನಲೆಯಲ್ಲಿ ನಕಲಿ ಖಾತೆಯು, “ಕಾವೇರಿ ಎಂದೂ ನಮ್ಮದು. ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು. ಇದು ನಮ್ಮ ದುರಂತ. ಕಾವೇರಿ ಇಡೀ ಕರ್ನಾಟಕದ ಆಸ್ತಿ” ಎಂಬ ಹೇಳಿಕೆಯೊಂದಿಗೆ, #ಕಾವೇರೀನಮ್ಮದು #KicchaSudeep #MaxTheMovie ಎಂಬ ಹ್ಯಾಶ್ ಟ್ಯಾಗ್ ಅನ್ನು ಟ್ವೀಟ್ ಮಾಡಿತ್ತು. ಇದರ ಆಧಾರದಲ್ಲಿ ಪಬ್ಲಿಕ್ ಟಿವಿ ವರದಿ ಮಾಡಿದೆ. ಕೆ ಎಲ್ ರಾಹುಲ್
ಕಾವೇರಿ ಎಂದೂ ನಮ್ಮದು
ಕಾವೇರಿ ಹುಟ್ಟುವುದು, ಅತಿ ಹೆಚ್ಚು ನೀರು ಸಂಗ್ರಹವಾಗುವುದು ಕರ್ನಾಟಕದಲ್ಲಿ. ಆದರೆ, ಆ ನೀರನ್ನು ಬಳಸಿಕೊಳ್ಳಲು ಪ್ರತಿ ವರ್ಷ ಕಾನೂನು ಹೋರಾಟದ ಜತೆಗೆ ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯ ಕನ್ನಡಿಗರದು
ಇದು ನಮ್ಮ ದುರಂತ…
ಕಾವೇರಿ ಇಡೀ ಕರ್ನಾಟಕದ ಆಸ್ತಿ..#ಕಾವೇರೀನಮ್ಮದು #KicchaSudeep #MaxTheMovie pic.twitter.com/IjnCVwOmWq— KL Rahul 💙 (@_klrahul__) September 25, 2023
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಜಿ20 ಕಾರ್ಯಕ್ರಮದ ವೇಳೆ ‘ರಘುಪತಿ ರಾಘವ ರಾಜಾ ರಾಮ್’ ಭಜನೆಯಿಂದ ‘ಅಲ್ಲಾಹ್’ ಪದ ಮೋದಿ ತೆಗೆದುಹಾಕಿದರೆ?
ವಾಸ್ತವದಲ್ಲಿ ಕ್ರಿಕೆಟಿಗ ಕೆ ಎಲ್ ರಾಹುಲ್ ಅವರ ಟ್ವಿಟರ್ ಖಾತೆ ಹೆಸರು @klrahul ಎಂದು ಇದ್ದು, ಖಾತೆಯು ಬ್ಲೂಟಿಕ್ನೊಂದಿಗೆ ಅಧೀಕೃತಗೊಂಡಿದೆ. ಅವರು ಸೆಪ್ಟೆಂಬರ್ 24ರ ಭಾನುವಾರ ಕೊನೆಯ ಬಾರಿಗೆ ಇಂಡಿಯಾ ಕ್ರಿಕೆಟ್ ತಂಡದ ಚಿತ್ರವೊಂದನ್ನು ಟ್ವೀಟ್ ಮಾಡಿದ್ದಾರೆ. ಅದರ ನಂತರ ಅವರು ಟ್ವಿಟರ್ನಲ್ಲಿ ಯಾವುದೆ ವಿಚಾರವನ್ನು ಪೋಸ್ಟ್ ಮಾಡಿಲ್ಲ.
✌️🆙🇮🇳 pic.twitter.com/3IyoN1G0gk
— K L Rahul (@klrahul) September 24, 2023
ಕಾವೇರಿ ವಿಚಾರವಾಗಿ ಹಲವಾರು ಸಂಘಟನೆಗಳು ನೀಡಿದ್ದ ಕರೆಗೆ ಬೆಂಗಳೂರು ನಗರವು ಭಾಗಶಃ ಸ್ಪಂದಿಸಿದೆ. ವಾಹನಗಳ ದಟ್ಟಣೆಯಿಂದ ತುಂಬಿರುತ್ತಿದ್ದ ರಸ್ತೆಗಳು ಬಣಗುಡುತ್ತಿವೆ, ಸದಾ ಗಿಜಿಗುಡುತ್ತಿದ್ದ ನಗರದ ಹಲವು ಪ್ರದೇಶಗಳು ಖಾಲಿ ಹೊಡೆಯುತ್ತಿವೆ. ಹಲವು ಹೋಟೆಲ್ ಮುಚ್ಚಿದ್ದು, ಕೆಲವು ಹೊಟೆಲ್ಗಳು ತೆರೆದಿವೆ. ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಹಾಗೂ ಮೆಟ್ರೋ ಸಂಚಾರವಿದ್ದರೂ ಪ್ರಯಾಣಿಕರು ವಿರಳವಾಗಿದ್ದಾರೆ.
ಪೊಲೀಸ್ ಅಲರ್ಟ್ :
ಬೆಂಗಳೂರು ಬಂದ್ಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ನಗರದ ಎಲ್ಲಾ ಪ್ರದೇಶಗಳಲ್ಲೂ ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ಧಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗು ಬಂದೋಬಸ್ತ್ ಇದ್ದು, 60 KSRP, 40 CRPF ಪಡೆ ನಿಯೋಜನೆ ಮಾಡಲಾಗಿದೆ. ಮಧ್ಯರಾತ್ರಿ 12 ಗಂಟೆಯಿಂದ್ಲೇ 144 ಸೆಕ್ಷನ್ ಜಾರಿಯಾಗಿದ್ದು, ಬೃಹತ್ ಮೆರವಣಿಗೆ ನಡೆಸದಂತೆ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ವಿಡಿಯೊ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್ Janashakthi Media