ಮಮತಾ ಬ್ಯಾನರ್ಜಿ ನಿವಾಸಕ್ಕೆ ಬಂದೂಕು ಹಿಡಿದು ನುಗ್ಗಲು ಯತ್ನಿಸಿದ : ವ್ಯಕ್ತಿ ಬಂಧನ

ಕೋಲ್ಕತ್ತಾ: ಕೋಲ್ಕತ್ತಾದ ಹರೀಶ್ ಚಟರ್ಜಿ ಸ್ಟ್ರೀಟ್‌ನಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಬಂದೂಕು ಹಿಡಿದು ನುಗ್ಗಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಶುಕ್ರವಾರ ಬಂಧಿಸಲಾಗಿದೆ.

ಇದನ್ನೂ ಓದಿ:ದ್ವೇಷ ರಾಜಕಾರಣದ ಮೂಲಕ ರಾಷ್ಟ್ರ ವಿಭಜಿಸಲು ಯತ್ನ : ಬಿಜೆಪಿ ವಿರುದ್ಧ ಮಮತಾ ಕಿಡಿ

ಇಂದು ಬೆಳಿಗ್ಗೆ 11:30 ರ ಸುಮಾರಿಗೆ ಮಮತಾ ಬ್ಯಾನರ್ಜಿಯವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಅವರ ಮನೆಯನ್ನು  ಪ್ರವೇಶಿಸಲು ಪ್ರಯತ್ನಿಸಿದ್ದ. ಈ ವ್ಯಕ್ತಿಯು ಬಂದೂಕು ಮತ್ತು ಚಾಕು ಹಿಡಿದುಕೊಂಡು ಮನೆಗೆ ನುಗ್ಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ತಡೆದು, ಬಂಧನಕ್ಕೊಳಪಡಿಸಿದ್ದಾರೆ.

ಬಂಧನಕ್ಕೊಳಪಡಿಸಲಾದ ವ್ಯಕ್ತಿ ಪೊಲೀಸರಂತೆ ನಟಿಸಿ ಕಪ್ಪು ಕಾರಿನಲ್ಲಿ ಬಂದಿದ್ದಾನೆ,ನಂತರ ಮಮತಾ ನಿವಾಸದ ಬಳಿಯ ಲೇನ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದು, ಈತ ವಿವಿಧ ಭದ್ರತಾ ಏಜೆನ್ಸಿಗಳಿಗೆ ಸೇರಿದ ಹಲವಾರು ನಕಲಿ ಗುರುತಿನ ಚೀಟಿಗಳನ್ನು ಕೂಡ ಹೊಂದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಯು ಕಾರಿನಿಂದ ಇಳಿದಾಗ ಪೊಲೀಸರು ತಡೆದರು. ಆದರೆ, ಆತ ತನ್ನನ್ನು ತಾನು ಪೋಲೀಸ್ ಅಧಿಕಾರಿ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾನೆ ನಾನು ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಲು ಬಂದಿದ್ದೇನೆ ಎಂದು ಹೇಳಿದ್ದಾನೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *