“ಬ್ರಿಜ್ ಭೂಷಣ್ ಕುಡಿದು ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು”: ಅಂತರರಾಷ್ಟ್ರೀಯ ರೆಫರಿ ಜಗ್ಬೀರ್

ನವದೆಹಲಿ:  ಸಂಸದ ಹಾಗೂ ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರು 2013ರಿಂದ ಹಲವಾರು ಸಂದರ್ಭಗಳಲ್ಲಿ ಮಹಿಳಾ ಕುಸ್ತಿಪಟುಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನೋಡಿದ್ದೇನೆ ಎಂದು ಅಂತಾರಾಷ್ಟ್ರೀಯ ರೆಫರಿ ಜಗ್‌ಬೀರ್‌ ಸಿಂಗ್‌ ಅವರು ಹೇಳಿದ್ದಾರೆ.

ಬಜರಂಗ್ ಪೂನಿಯಾ, ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಸೇರಿದಂತೆ ಭಾರತ ಹಲವು ಅಗ್ರ ಕುಸ್ತಿಪಟುಗಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬ್ರಿಜ್ ಭೂಷಣ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿತ್ತಿದ್ದಾರೆ.

2007ರಿಂದಲೂ ಅಂತಾರಾಷ್ಟ್ರೀಯ ಕುಸ್ತಿ ರೆಫರಿಯಾಗಿರುವ ಜಗಬೀರ್‌ ಸಿಂಗ್‌, ಸಂತ್ರಸ್ತ ಕುಸ್ತಿಪಟು ಮಾಡಿರುವ ಆರೋಪವನ್ನು ದೃಢಪಡಿಸಿದ್ದಾರೆ. ಅಂದು ಈ ರೆಫರಿಯು ದೂರದಾರ ಕುಸ್ತಿಪಟು ಮತ್ತು ಬ್ರಿಜ್ ಭೂಷಣ್‌ ಅವರಿಂದ ಕೆಲವೇ ಅಡಿಗಳ ಅಂತರದಲ್ಲಿ ನಿಂತಿದ್ದರು. ದೆಹಲಿ ಪೊಲೀಸರಿಗೆ ಕುಸ್ತಿಪಟು ಫೋಟೋ ಸಾಕ್ಷಿಯನ್ನು ಒದಗಿಸಿದ್ದಾರೆ.

ಇದನ್ನೂ ಓದಿ : ಬ್ರಿಜ್ ಭೂಷಣ್ ವಿರುದ್ಧ ದಾಖಲಿಸಿರುವ 2 ಎಫ್‌ಐಆರ್‌ಗಳಲ್ಲಿ ಏನಿದೆ?

“ಬ್ರಿಜ್‌ ಭೂಷಣ್‌ ಹುಡುಗಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದನ್ನು ನಾನು ನನ್ನ ಸ್ವಂತ ಕಣ್ಣುಗಳಿಂದ ನೋಡಿದ್ದೇನೆ. ಆದರೆ ಹುಡುಗಿಯರು ಆತನ ವಿರುದ್ಧ ದೂರುಗಳನ್ನು ದಾಖಲಿಸುವವರೆಗೆ ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಆ ದೃಶ್ಯಗಳನ್ನು ನೋಡಿ ನನಗೆ ಬೇಸರವಾಯಿತು” ಎಂದು ಅವರು ಹೇಳಿದ್ದಾರೆ.

125+ ಸಾಕ್ಷಿ​ಗಳು ಲಭ್ಯ : ಬ್ರಿಜ್‌ ವಿರುದ್ಧ ತನಿಖೆ ನಡೆ​ಸು​ತ್ತಿ​ರುವ ದೆಹಲಿ ಪೊಲೀ​ಸರು ಈವ​ರೆಗೆ 4 ರಾಜ್ಯ​ಗಳ ಸುಮಾರು 125ಕ್ಕೂ ಹೆಚ್ಚು ಸಾಕ್ಷಿ​ಗ​ಳನ್ನು ಸಂಗ್ರ​ಹಿ​ಸಿ​ದ್ದಾರೆ ಎಂದು ತಿಳಿ​ದು​ಬಂದಿದೆ. ಇದ​ರಲ್ಲಿ ಜಗ್ಬೀರ್‌, ಅನಿತಾ ಕೂಡಾ ಒಳ​ಗೊಂಡಿ​ದ್ದಾರೆ. ಕುಸ್ತಿ​ಪ​ಟು​ಗಳು, ಕೋಚ್‌​ಗಳು, ಸಿಬ್ಬಂದಿ ಜೊತೆ ಕೆಲ ಕಡೆ​ಗ​ಳಲ್ಲಿ ಸಿಸಿ ಟಿವಿ ದೃಶ್ಯ​ಗ​ಳನ್ನೂ ಸಂಗ್ರ​ಹಿ​ಸಿ​ದ್ದಾರೆ. ಶೀಘ್ರ​ದಲ್ಲೇ ಚಾರ್ಜ್‌​ಶೀಟ್‌ ಸಲ್ಲಿ​ಕೆ​ಯಾ​ಗುವ ನಿರೀ​ಕ್ಷೆ​ಯಿದೆ.

ಚುನಾ​ವ​ಣೆ​ಗೆ ಸಿದ್ಧತೆ ಆರಂಭ : ಜೂ.30ರೊಳಗೆ ಡಬ್ಲ್ಯು​ಎ​ಫ್‌ಐಗೆ ಚುನಾ​ವಣೆ ನಡೆ​ಸು​ವು​ದಾಗಿ ಕೇಂದ್ರ ಸರ್ಕಾರ ತಿಳಿ​ಸಿದ ಬೆನ್ನಲ್ಲೇ ಡಬ್ಲ್ಯು​ಎ​ಫ್‌ಗೆ ನೇಮಿ​ಸ​ಲಾದ ತಾತ್ಕಾ​ಲಿಕ ಸಮಿ​ತಿಯು ಚುನಾ​ವ​ಣೆಗೆ ಸಿದ್ಧತೆ ಕೈಗೊಂಡಿದೆ. ಈಗಾ​ಗಲೇ ಮತ​ದಾ​ರರ ಪಟ್ಟಿ​ಯನ್ನು ಸಮಿತಿ ಸಿದ್ಧಪಡಿ​ಸಿ​ದ್ದು, ಒಂದೆ​ರಡು ದಿನ​ಗ​ಳಲ್ಲಿ ಚುನಾ​ವ​ಣೆಗೆ ಮಾರ್ಗ​ಸೂಚಿ ಪ್ರಕ​ಟಿ​ಸುವ ಸಾಧ್ಯತೆ ಇದೆ. ಡಬ್ಲ್ಯು​ಎ​ಫ್‌​ಐಗೆ 2 ಕೇಂದ್ರಾ​ಡ​ಳಿತ ಪ್ರದೇ​ಶಗಳು ಸೇರಿ​ದಂತೆ 25 ರಾಜ್ಯ ಸಂಸ್ಥೆಗಳಿದ್ದು, ಪ್ರತಿ ಸಂಸ್ಥೆಯಿಂದ ತಲಾ ಇಬ್ಬರು ಮತ ಚಲಾ​ಯಿ​ಸ​ಲಿ​ದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *