ರೈಲು ದುರಂತ ಬೆನ್ನಲ್ಲೇ ಬಿಹಾರದಲ್ಲಿ ಸೇತುವೆ ಕುಸಿತ; 1,700 ಕೋಟಿ ರೂ. ಗಂಗಾ ನದಿ ಪಾಲು

ಬಿಹಾರದ ಭಾಗಲ್ಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದಿರುವ ಘಟನೆ ನಡೆದಿದೆ. ಗಂಗಾನದಿಗೆ ಅಡ್ಡಲಾಗಿ ಆಗುವನಿ-ಸುಲ್ತಂಗಂಜ್ ನಡುವೆ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿದಿದೆ.

ನಿರ್ಮಾಣವಾಗುತ್ತಿದ್ದ ಸೂಪರ್ ಸ್ಟ್ರಕ್ಚರ್​ ಸೇತುವೆ 2ನೇ ಸಲ ಕುಸಿದಿದೆ. ಸೇತುವೆಯ 500 ಮೀಟರ್ ಭಾಗವು ಇದ್ದಕ್ಕಿದ್ದಂತೆ ನದಿಗೆ ಬಿದ್ದಿದೆ. ಅದೃಷ್ಟವಶಾತ್‌ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಇತ್ತೀಚೆಗೆ ಚಂಡಮಾರುತದಿಂದಾಗಿ ಏಪ್ರಿಲ್​ನಲ್ಲಿ ಸೇತುವೆಗೆ ಸ್ವಲ್ಪ ಹಾನಿಯಾಗಿತ್ತು. ಎರಡು ವರ್ಷಗಳ ಹಿಂದೆಯೂ ಸೇತುವೆಯ ಒಂದು ಭಾಗ ಕುಸಿದಿತ್ತು ಎನ್ನಲಾಗಿದೆ.

ಸಿಎಂ ನಿತೀಶ್ ಕುಮಾರ್ ಅವರು 23 ಫೆಬ್ರವರಿ 2014 ರಂದು ಸೇತುವೆಯ ಶಂಕುಸ್ಥಾಪನೆ ಮಾಡಿದ್ದರು. ಬಿಹಾರ ಸರ್ಕಾರದ ಈ ಯೋಜನೆಯನ್ನು ಅತ್ಯಂತ ಮಹತ್ವಾಕಾಂಕ್ಷೆ ಯೋಜನೆ ಎಂದು ಪರಿಗಣಿಸಲಾಗಿತ್ತು. ಈ ಯೋಜನೆಯ ವೆಚ್ಚದ ಆರಂಭಿಕ ಮೌಲ್ಯಮಾಪನ 1710.77 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಸೇತುವೆಯ ನಿರ್ಮಾಣದಿಂದ ಉತ್ತರ ಮತ್ತು ದಕ್ಷಿಣ ಬಿಹಾರ ನಡುವಿನ ಅಂತರ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.

ಈ ಸೇತುವೆ ಉದ್ದ ಸುಮಾರು 3.160 ಕಿ.ಮೀ. ರಸ್ತೆಯ ಒಟ್ಟು ಉದ್ದ ಸುಮಾರು 25 ಕಿ.ಮೀ ಆಗಿದ್ದು, ಮಾರ್ಚ್ 2020 ರೊಳಗೆ ಸಂಚಾರ ಆರಂಭಿಸುವುದಾಗಿ ಇಲಾಖೆ ಸೂಚನೆ ನೀಡಿತ್ತು. ಈ ಸೇತುವೆ NH 31 ಮತ್ತು NH 80 ಸಂಪರ್ಕಗೊಳ್ಳಲಿದೆ. ರಾಷ್ಟ್ರೀಯ ಹೆದ್ದಾರಿ 31, ಪಸ್ರಾಹಾ ಮತ್ತು ಮುಂಗೇರ್ ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ 80 ರಲ್ಲಿರುವ ಸುಲ್ತಂಗಂಜ್ ಬಳಿ ನಾಲ್ಕು-ಪಥದ ರಸ್ತೆಗೆ ಈ ಸೇತುವೆಯನ್ನು ಸಂಪರ್ಕಿಸಲಾಗುತ್ತಿದೆ.

 

 

Donate Janashakthi Media

Leave a Reply

Your email address will not be published. Required fields are marked *