ಆನ್‌ಲೈನ್‌ ದೈನಂದಿನ ವಹಿವಾಟು ರೂ.36 ಕೋಟಿಗೆ ಏರಿಕೆ: ಆರ್‌ಬಿಐ ಗವರ್ನರ್‌

ಮುಂಬೈ: ದೇಶದಲ್ಲಿ ಫೆಬ್ರವರಿ 2022ರಲ್ಲಿ ಏಕೀಕೃತ ಪಾವತಿ ಇಂಟರ್ಫೇಸ್(ಯುಪಿಐ) ದೈನಂದಿನ ವಹಿವಾಟು ರೂ. 24 ಕೋಟಿ ಇದ್ದದ್ದು, 2023ರ ಮಾರ್ಚ್‌ ತಿಂಗಳ ಅವಧಿಯಲ್ಲಿ ದೈನಂದಿನ ವಹಿವಾಟು ರೂ. 36 ಕೋಟಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ದೇಶದಲ್ಲಿ ಯುಪಿಐ ಪಾವತಿಯೂ ಕಳೆದ ಒಂದು ವರ್ಷದಿಂದ ತೀವ್ರವಾಗಿ ಹೆಚ್ಚುತ್ತಿದೆ. ಎಂದು ತಿಳಿಸಿರುವ ಅವರು ಹಿಂದಿನ  ವರ್ಷದ  ವಹಿವಾಟುಗಳಿಗೆ ಹೋಲಿಸಿದರೆ ಶೇ. 50 ರಷ್ಟು ಏರಿಕೆಯಾಗಿದೆ ಎಂದಿದ್ದಾರೆ.

ಇದನ್ನು ಓದಿ: ಪೆಟ್ರೋಲ್‌, ಡೀಸೆಲ್‌ ಮೇಲಿನ ಸುಂಕ ಇಳಿಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಆರ್‌ಬಿಐ ಸೂಚನೆ

ಆರ್‌ಬಿಐ ಪ್ರಧಾನ ಕಛೇರಿಯಲ್ಲಿ ಹಮ್ಮಿಕೊಳ್ಳಲಾದ ಡಿಜಿಟಲ್ ಪಾವತಿ ಜಾಗೃತಿ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಾವರು ಶಕ್ತಿಕಾಂತ್ ದಾಸ್, ಈ ವರ್ಷದ ಫೆಬ್ರವರಿಯಲ್ಲಿ ಯುಪಿಐ ಮೂಲಕ 6.27 ಲಕ್ಷ ಕೋಟಿ ರೂಪಾಯಿ  ವಹಿವಾಟು ನಡೆದಿದೆ. ಇದು ಹಿಂದಿನ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.17 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದ್ದಾರೆ.

ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟಾರೆ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ತಿಂಗಳು 1,000 ಕೋಟಿ ರೂಪಾಯಿಗೆ ದಾಟಿದೆ ಎಂದು ಹೇಳಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *