ಸಾಲ ಮರು ಪಾವತಿಗೆ ಅಂತರ್ಜಾಲ ಆ್ಯಪ್ ಬೆದರಿಕೆ; ಕಿರುಕುಳ ತಾಳಲಾರದೆ ದಂಪತಿ ಆತ್ಮಹತ್ಯೆ

ಹೈದರಾಬಾದ್: ಅಂತರ್ಜಾಲ ಆ್ಯಪ್  ಮೂಲಕ ಸಾಲ ಪಡೆದುಕೊಂಡ ದಂಪತಿಗಳು, ಸಾಲ ಮರು ಪಾವತಿ ಮಾಡುವಂತೆ ಬೆದರಿಕೆ ಕಿರುಕುಳ ನೀಡಲಾರಂಭಿಸಿದ್ದರಿಂದ ಮನನೊಂದು ಆತ್ಮಹತ್ಯೆ ಶರಣಾಗಿರುವ ಘಟನೆ ನಡೆದಿದೆ. ಮೃತರನ್ನು ಕೊಲ್ಲಿ ದುರ್ಗಾರಾವ್ ಹಾಗೂ ರಮ್ಯಾ ಲಕ್ಷ್ಮಿ ಎಂದು ಗುರುತಿಸಲಾಗಿದ್ದು, ತಮ್ಮ ಪುತ್ರಿಯ ಹುಟ್ಟುಹಬ್ಬದ ದಿನದಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಣ್ಣ ಬಳೆಯುವ ಕೆಲಸದಲ್ಲಿ ತೊಡಗಿಕೊಂಡಿದ್ದ ದುರ್ಗಾರಾವ್ ಹಾಗೂ ಹೊಲಿಗೆ ಕೆಲಸ ಮಾಡುತ್ತಿದ್ದ ರಮ್ಯಾ ಲಕ್ಷ್ಮಿ ಕುಟುಂಬದಲ್ಲಿನ ಹಣಕಾಸಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಎರಡು ಅಂತರ್ಜಾಲ ತಾಣದ ಸಾಲ ನೀಡುವ ಅಪ್ಲಿಕೇಶನ್‍ ಗಳಿಗೆ ಅರ್ಜಿ ಸಲ್ಲಿಸಿದರು. ದಂಪತಿಗಳು ಸಕಾಲದಲ್ಲಿ ಸಾಲ ಮರುಪಾವತಿ ಮಾಡದ ಕಾರಣ ಸಾಲ ನೀಡಿದವರು ಕಿರುಕುಳ ನೀಡಲು ಆರಂಭಿಸಿದರು. ದಂಪತಿ ಸಾಲದ ಮೊತ್ತದ ಸ್ವಲ್ಪ ಭಾಗವನ್ನು ಮಾತ್ರ ಮರುಪಾವತಿಸಿದರು. ಆದರೆ ಅವರು ಸಾಲ ಪಡೆದ ಪೂರ್ಣ ಮೊತ್ತವನ್ನು ಪಾವತಿಸಲು ಸಾಧ್ಯವಾಗಲಿಲ್ಲ.

ಸಾಲ ನೀಡಿದ ಆ್ಯಪ್ ಕಂಪನಿಯು ದಂಪತಿಗೆ ಹೆಚ್ಚಿನ ಹಣ ನೀಡುವಂತೆ ಬೇಡಿಕೆಯಿಡಲಾರಂಭಿಸಿದರು. ಮತ್ತು ರಮ್ಯಾ ಲಕ್ಷ್ಮಿ ಅವರ ಅಸಭ್ಯವಾಗಿ ನಕಲಿಕರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಾಗಿ ಕಿರುಕುಳ ನೀಡಲಾರಂಭಿಸಿದರು.

ಅಂತರ್ಜಾಲ ಸಾಲದಾರರ ಆ್ಯಪ್ ಕಂಪನಿಯು ರಮ್ಯಾ ಲಕ್ಷ್ಮಿ ಅವರ ವಿವಿಧ ಭಾವಚಿತ್ರಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವ ಮೂಲಕ ಬೆದರಿಕೆಯೊಡ್ಡಿದೆ. ಎರಡು ದಿನಗಳಲ್ಲಿ ಪೂರ್ಣ ಸಾಲವನ್ನು ಮರುಪಾವತಿಸದೇ ಇದ್ದರೆ ಶೀಘ್ರದಲ್ಲೇ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ದಂಪತಿಗೆ ಎಚ್ಚರಿಕೆ ನೀಡಿದೆ.

ಮಾಡುತ್ತಿರುವ ಕೆಲಸದಲ್ಲಿ ಬರುವ ಆದಾಯ ಸಾಕಾಗುತ್ತಿಲ್ಲವೆಂದು ಹೆಚ್ಚು ಹಣವನ್ನು ಸಂಪಾದಿಸಲೇಬೇಕು ಎಂಬ ಕಾರಣಕ್ಕೆ ದುರ್ಗಾ ರಾವ್ ಅವರು 10 ದಿನಗಳ ಹಿಂದೆ ಮತ್ತೊಂದು ಹೆಚ್ಚುವರಿ ಕೆಲಸವನ್ನು ಮಾಡುತ್ತಿದ್ದರು ಮತ್ತು ತಮ್ಮ ಕೈಲಾದಷ್ಟು ಹಣವನ್ನು ಸಂಪಾದಿಸಿದರು.

ಕೊಲ್ಲಿ ದುರ್ಗಾರಾವ್ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಲಬ್ಬರ್ತಿ ಮೂಲದವರಾಗಿದ್ದು, 10 ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ರಾಜಮಹೇಂದ್ರವರಂಗೆ ಬಂದಿದ್ದರು. ಆರು ವರ್ಷಗಳ ಹಿಂದೆಯಷ್ಟೇ ರಮ್ಯಾ ಲಕ್ಷ್ಮಿ ಅವರೊಂದಿಗೆ ವಿವಾಹ ವಾಗಿದ್ದರು. ದಂಪತಿಗೆ 4 ವರ್ಷದ ನಾಗ ಸಾಯಿ ಹಾಗೂ 2 ವರ್ಷದ ಲಿಕಿತಾ ಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಸೆಪ್ಟೆಂಬರ್ 5 ರಂದು ದಂಪತಿಗಳು ಪಶ್ಚಿಮ ಗೋದಾವರಿ ಜಿಲ್ಲೆಯ ಮೊಗಲ್ಟೂರಿಗೆ ಹೋಗಿದ್ದರು. ಅಲ್ಲಿ ಹೋಟೆಲ್‌ ವೊಂದರಲ್ಲಿ ತಂಗಿದ್ದರು. ಈ ವೇಳೆ ಮಧ್ಯರಾತ್ರಿ ರಮ್ಯಾ ತನ್ನ ಸೋದರ ಸಂಬಂಧಿಗೆ ಕರೆ ಮಾಡಿ ತಾನು ಮತ್ತು ತನ್ನ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದು, ತಮ್ಮ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವಂತರ ಮನವಿ ಮಾಡಿದ್ದಾರೆ. ಕೂಡಲೇ ರಮ್ಯಾ ಸೋದರ ಸಂಬಂಧಿ ಇತರ ಸಂಬಂಧಿಕರಿಗೆ ಮಾಹಿತಿ ನೀಡಿ ಹೋಟೆಲ್‍ಗೆ ತಲುಪಿದಾಗ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು.

ಆತ್ಮಹತ್ಯೆಗೆ ಶರಣಾದ ದಂಪತಿಗಳನ್ನು ಕೂಡಲೇ ಸಮೀಪದ ಆಸ್ಪತ್ರಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದಂಪತಿ ಸಾವನ್ನಪ್ಪಿದ್ದು, ಇಬ್ಬರೂ ವಿಷ ಸೇವಿಸಿದ್ದಾರೆ ಎಂಬುದು ವರದಿಯಾಗಿದೆ. ಇದೀಗ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *