ಪಾಟ್ನಾ: ಚಲಿಸುತ್ತಿದ್ದ ಬಸ್ನಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಹೃದಯ ವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ. ಬಸ್ ನ ಚಾಲಕ, ಕ್ಲೀನರ್ ಮತ್ತು ಇನ್ನೊಬ್ಬ ವ್ಯಕ್ತಿ ಸೇರಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಚಾರ ಮಾಡಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಪಾಟ್ನಾಗೆ ಹೋಗಾಬೇಕು ಎಂದು ಬಸ್ ಚಾಲಕನ ಬಳಿ ತಿಳಿಸಿದ್ದಾಳೆ. ಒಬ್ಬಳೆ ಇರುವುದನ್ನು ಕಂಡ ಚಾಲಕ ಆಕೆಗೆ ಮದ್ದು ಮಿಶ್ರಿತ ನೀರನ್ನು ನೀಡಿ ಬೈ ಪಾಸ್ ಕಡೆಗೆ ವಾಹನ ತಿರುಗಿಸಿ ಆಕೆಯ ಮೇಲೆ ಅತ್ಯಚಾರ ನಡೆಸಿದ್ದಾರೆ. ನಂತರ ಬಸ್ ಬಾಗಿಲು ಮುಚ್ಚಿ ಮೂರು ಜನರು ಪರಾರಿಯಾಗಿದ್ದಾರೆ. ಆಪ್ರಾಪ್ತ ಬಾಲಕಿಗೆ ಪ್ರಜ್ಞೆ ಬಂದ ನಂತರ ಬಸ್ ಬಾಗಿಲನ್ನು ಬಡೆದಿದ್ದಾಳೆ ಅಲ್ಲಿ ನೆರೆದಿದ್ದ ಜನ ಬಾಗಿಲು ತೆಗೆದಿದ್ದಾರೆ. ನಂತರ ಘಟನೆಯ ಕುರಿತು ಸಂತ್ರಸ್ಥೆಯೊಂದಿಗೆ ಪೋಲಿಸರಿಗೆ ದೂರು ನೀಡಿದ್ದಾರೆ.
ಬಾಲಕಿಯನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಮತ್ತು ಆಕೆಯ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತಿದೆ. ಬೆಟ್ಟಿಯಾ ಬಸ್ ನಿಲ್ದಾಣದಲ್ಲಿ ಪಾಟ್ನಾಗೆ ಹೋಗುವ ಬಸ್ನಿಂದ ಅಪ್ರಾಪ್ತೆಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ನಗರ ಠಾಣೆ ಮತ್ತು ಮಹಿಳಾ ಠಾಣೆಯ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದೇ ವೇಳೆ ತಲೆಮರೆಸಿಕೊಂಡಿರುವ ಮೂರನೇ ಆರೋಪಿಯ ಕುರಿತು ಸಂತ್ರಸ್ತೆಯ ವೈದ್ಯಕೀಯ ವರದಿ ನಂತರ ತಿಳಿಸಲಾಗುವುದು ಎಂದು ಪೋಲಿಸರು ತಿಳಿಸಿದ್ದಾರೆ.