ಮುಸ್ಲಿಂ ಯುವಕರಿಂದ ಹಿಂದೂ ಮಹಿಳೆಯ ಅಂತ್ಯಕ್ರಿಯೆ

ವಿಜಯನಗರ: ರಾಜ್ಯ ಕೋಮು ಘರ್ಷಣೆ ಮತ್ತು ವಿಭಜಕ ರಾಜಕಾರಣದ ಬಿಸಿ ಬಿಸಿ ಚರ್ಚೆಗೆ ಸಾಕ್ಷಿಯಾಗುತ್ತಿರುವ ಸಮಯದಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸೌಹಾರ್ದತೆಗೆ ಸಾಕ್ಷಿಯಾಗಿರುವ ಘಟನೆ ಜರುಗಿದೆ.

ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವೃದ್ಧ ಮಹಿಳೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಬುಧವಾರ ನಗರದಲ್ಲಿ ನೆರವೇರಿಸಿದ್ದಾರೆ.

ಯಮುನಮ್ಮ (75) ಎಂಬುವರು ನಗರದ ದೊಡ್ಡ ಮಸೀದಿ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ‘ಹಂಬಲ್ ಯುನೈಟೆಡ್ ಬ್ರದರ್ಸ್‌’ ಸಂಘಟನೆಯ ಯುವಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ಆದರೆ, ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು.

ವಿಷಯ ತಿಳಿದ ಯುವಕರು, ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸಂಘಟನೆಯ ಎಂ.ಎ.ರಿಯಾಜ್ ಪಟೇಲ್, ಡಿ.ಮೈನುದ್ದೀನ್, ಖಾದರ್ ಬಾಷಾ, ಆಸಿಫ್ ಬೇಗ್, ಮೆಹಬೂಬ್ ಬಾಷಾ ಅಂತ್ಯಕ್ರಿಯೆ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *