ಗನ್ ತೋರಿಸಿ ಮನೆ ಮಾಲೀಕನಿಂದ ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಬೆಂಗಳೂರು:ಬಿಹಾರ‌ ಮೂಲದ ಶಾಂತಿನಗರ ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್(46)  ತನ್ನ ಮನೆಯ ಮೇಲೆ ಬಾಡಿಗೆಗೆ ವಾಸವಾಗಿದ್ದ ಪಶ್ಚಿಮ ಬಂಗಾಳದ ಯುವತಿಯ ಮೇಲೆ ಅತ್ಯಚಾರ ನಡೆಸಿ ಆಕೆಯ ತಲೆಗೆ ಗುಂಡಿಟ್ಟು ಬೆದರಿಕೆ ಸಹಕರಿಸುವಂತೆ ಬೆದರಿಕೆ ಹಾಕಿದ್ದಾನೆ.

ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ   ಅಶೋಕ ನಗರದ ಪೊಲೀಸರು‌ ಮೂರು ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.

ಘಟನೆಯ ಹಿನ್ನಲೆ:ಟೈಲ್ಸ್ ಬಿಸ್ನೆಸ್ ಮಾಡಿಕೊಂಡು ಬೆಂಗಳೂರಿನಲ್ಲಿ  ಹೆಚ್ಚು ಪ್ರಭಾವಿತನಾಗಿದ್ದ ರವಿಶಂಕರ್‌ ಪ್ರಸಾದ್‌ ಈತನ ಮನೆಯ ಮೇಲೆ ಪಶ್ಚಿಮ ಬಂಗಾಳದ ಯುವತಿ  ಬಾಡಿಗೆ ಕೊಟ್ಟು ವಾಸವಾಗಿದ್ದಳು. ಖಾಸಗಿ ಕಾಲೇಜಿನಲ್ಲಿ ಬಿಎ ಪದವಿ ಪಡೆದುಕೊಳ್ಳುತ್ತಿದ್ದಳು.

ಯುವತಿಯ ಮನೆಗೆ ಆಗಾಗ  ಮನೆಗೆ ಆಗಾಗ ಆಕೆಯ ಸ್ನೇಹಿತ ಬರುತ್ತಿರುವ ಬಗ್ಗೆ ಮನೆ ಮಾಲೀಕ ಗಮನಿಸಿ ಹುಡುಗನ ಬೈಕ್‌ ಲಾಕ್‌ ಮಾಡಿದ್ದನು. ಮಾರನೆ ದಿನ ಬೆಳಗ್ಗೆ ಬೈಕ್‌ ಬಗ್ಗೆ ವಿಚಾರಿಸಿದರೆ ಪೋಲಿಸ್‌ ಲಾಕ್‌ ಮಾಡಿದ್ದಾರೆ  ಎಂದು ಸುಳ್ಳು ಹೇಳಿದ್ದನು.ಪೊಲೀಸರು ಬಂದರೆ ನಿಮ್ಮ ‌ಮೇಲೆ ಕೇಸ್ ದಾಖಲಿಸುತ್ತಿದ್ದರು.  ಪೊಲೀಸರೊಂದಿಗೆ ಖುದ್ದಾಗಿ ಮಾತಾಡಿ  ಕೇಸ್ ದಾಖಲಿಸದಂತೆ ಹೇಳಿದ್ದೇನೆ ಎಂದು ‌ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದ. ಆ ನಂತರ ಮಹಿಳೆಯೊಂದಿಗೆ ಜಗಳವಾಡಿದ್ದಾನೆ ಬಾಡಿಗೆ ಕೊಟ್ಟರೆ ಬೇಡದೆ ಇರುವುದನ್ನೆಲ್ಲ ಮಾಡುತ್ತೀರ ಎಂದು ಹೀಯಾಳಿಸಿ ವಾಗ್ವಾದ ಮಾಡಿದ್ದಾನೆ.

ಏಪ್ರಿಲ್‌ 11ರಂದು ಆಕೆಯ ಮನೆಗೆ ಹೋದ‌ ಮಾಲೀಕ ಮಾತನಾಡುವ ನೆಪದಲ್ಲಿ ತನ್ನ ಬಳಿಯಿದ್ದ ಲೈಸೆನ್ಸ್ ರಿವಾಲ್ವರ್ ತಲೆಗಿಟ್ಟು ಬೆದರಿಸಿ ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿ ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ಬಗ್ಗೆ ‌ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಾಳೆ.‌ ಆಕೆಯ‌ನ್ನು ಸಮಾಧಾನಪಡಿಸಿದ ನಂತರ ಪೋಲಿಸ್‌ ಠಾಣೆಯಲ್ಲಿ ದೂರು ನೀಡಿದ್ದರಿ ಅದೇ ದೂರಿನ ಆಧಾರದ ಮೇರೆ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದಾದ ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಿ ಆರೋಪಿ ಬಳಿಯಿದ್ದ ಲೈಸನ್ಸ್ ರಿವಲ್ವಾರ್ ಅನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *