ದಾಖಲೆ ಮೇಲೆ ದಾಖಲೆ ಬರೆಯುತ್ತಿರುವ ಕೆಜಿಎಫ್‌ 2

  • ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ
  • ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿರುವ’ಕೆಜಿಎಫ್ 2′
  • ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 29 ಹೊಸ ದಾಖಲೆ ಬರೆದ ಸಿನಿಮಾ

‘ರಾಕಿಂಗ್ ಸ್ಟಾರ್’ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಪ್ರತಿ ದಿನವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತ ಸಾಗುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವು ಈವರೆಗೂ ಮಾಡಿರುವ ದಾಖಲೆಗಳು ಒಂದೆರಡಲ್ಲ. ಬಾಲಿವುಡ್‌ನ ಘಟಾನುಘಟಿ ತಾರೆಯರು ಸೃಷ್ಟಿಸಿದ್ದ ದಾಖಲೆಗಳನ್ನು ಹೇಳಹೆಸರಿಲ್ಲದಂತೆ ಹೊಡೆದು ಹಾಕಿದೆ ಕನ್ನಡದ ಈ ಸಿನಿಮಾ. ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಸ್ಮ್‌ಗೆ ಭರ್ಜರಿ ಕಮಾಯಿ ಆಗುತ್ತಿದೆ.

ಈ ಸಿನಿಮಾವು ತೆರೆಕಂಡ  7 ದಿನಗಳಲ್ಲೇ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳ ಕಲೆಕ್ಷನ್ ಒಟ್ಟು 719.30 ಕೋಟಿ ರೂ. ಕೆಜಿಎಫ್‌ 2 ಮೊದಲ ದಿನವೇ ಭಾರತದಲ್ಲಿ 135 ಕೋಟಿ ಕಲೆಕ್ಷನ್ ಮಾಡಿದ್ರೆ , ಭಾರತ ಬಿಟ್ಟು ಸಾಗರದಾಚೆ 164.20 ಕೋಟಿ ರೂ ಸಂಪಾದನೆ ಮಾಡಿತ್ತು.. ಒಟ್ಟು 7 ದಿನಗಳಲ್ಲಿ ಸಿನಿಮಾ 719.30 ಕೋಟಿ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್‌ ಏರಿಕೆ ಕಾಣುತ್ತಿದೆ. ತಮಿಳುನಾಡಿನಲ್ಲಿ ಶೋಗಳು ಹೆಚ್ಚಾಗುತ್ತಿವೆ, ಕಲೆಕ್ಷನ್‌ ಕೂಡ ಜಾಸ್ತಿ ಆಗುತ್ತಿದೆ.

7 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ಸ್

ಕರ್ನಾಟಕ – 115.30 ಕೋಟಿ

ತೆಲುಗು ರಾಜ್ಯಗಳು – 102.60 ಕೋಟಿ

ತಮಿಳುನಾಡು – 45.60 ಕೋಟಿ

ಕೇರಳ – 41.15 ಕೋಟಿ

ಹಿಂದಿ + ROI – 300.60 ಕೋಟಿ

ಸಾಗರೋತ್ತರ – 114.05 ಕೋಟಿ

ಬಾಲಿವುಡ್‌ನ ಯಾವ ಬಿಗ್ ಸ್ಟಾರ್‌ಗಳು ಮಾಡಿರದಂತಹ ಸಾಧನೆಯನ್ನು ‘ಕೆಜಿಎಫ್ 2’ ಸಿನಿಮಾ ಮಾಡಿದೆ. ಬರೀ ಬಾಲಿವುಡ್‌ನಲ್ಲಿ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದು ಒಂದಲ್ಲ, ಎರಡಲ್ಲ, ಬರೋಬ್ಬರಿ 29!

ಆ 29 ದಾಖಲೆಗಳ ಸಂಪೂರ್ಣ ವಿವರ ಇಲ್ಲಿದೆ!

  1. ಹಿಂದಿ ಏರಿಯಾಗಳಲ್ಲಿ ದಾಖಲೆಯ ಓಪನಿಂಗ್‌
  2. ಹಿಂದಿ ಏರಿಯಾಗಳಲ್ಲಿ ವಾರಾಂತ್ಯಕ್ಕೆ ದಾಖಲೆಯ ಗಳಿಕೆ
  3. ಬಾಲಿವುಡ್‌ನಲ್ಲಿ ಒಂದೇ ದಿನ ಅತಿಹೆಚ್ಚು ಗಳಿಸಿದ ಸಿನಿಮಾ
  4. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ 2ನೇ ದಿನ ಅತಿ ಹೆಚ್ಚು ಗಳಿಸಿದ ಸಿನಿಮಾ
  5. ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ಭಾನುವಾರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ
  6. ಹಿಂದಿ ಬಾಕ್ಸ್ ಆಫೀಸ್ನಲ್ಲಿ ಮೊದಲ ನಾಲ್ಕು ದಿನವೂ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  7. ಕರ್ನಾಟಕದಲ್ಲಿ ದಾಖಲೆಯ ಆರಂಭ
  8. ಕರ್ನಾಟಕದಲ್ಲಿ ವಾರಾಂತ್ಯದಲ್ಲಿ ದಾಖಲೆಯ ಗಳಿಕೆ
  9. ಕರ್ನಾಟಕದಲ್ಲಿ 2ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  10. ಕರ್ನಾಟಕದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  11. ಕರ್ನಾಟಕದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  12. ಕರ್ನಾಟಕದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
  13. ಕರ್ನಾಟಕದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ‘ಕೆಜಿಎಫ್ 2’
  14. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾ
  15. ತೆಲುಗು ಚಿತ್ರರಂಗದಲ್ಲಿ ಅದ್ದೂರಿ ಓಪನಿಂಗ್ ಪಡೆದ ತೆಲುಗೇತರ ಸಿನಿಮಾ
  16. ವಾರಾಂತ್ಯದಲ್ಲಿ ಟಾಲಿವುಡ್ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ತೆಲುಗೇತರ ಸಿನಿಮಾ
  17. ತೆಲುಗು ಚಿತ್ರರಂಗದಲ್ಲಿ 2ನೇ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗೇತರ ಸಿನಿಮಾ
  18. ತೆಲುಗು ಚಿತ್ರರಂಗದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ತೆಲುಗೇತರ ಸಿನಿಮಾ
  19. ತೆಲುಗು ಚಿತ್ರರಂಗದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಮೊದಲ ತೆಲುಗೇತರ ಸಿನಿಮಾ
  20. ಟಾಲಿವುಡ್ನಲ್ಲಿ ಒಂದೇ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ತೆಲುಗೇತರ ಸಿನಿಮಾ
  21. ತೆಲುಗು ಚಿತ್ರರಂಗದಲ್ಲಿ ಭಾನುವಾರದ ಕಲೆಕ್ಷನ್ನಲ್ಲಿ ತೆಲುಗೇತರ ಸಿನಿಮಾಗಳ ಪೈಕಿ ‘ಕೆಜಿಎಫ್ 2’ ಚಿತ್ರಕ್ಕೆ ಪ್ರಥಮ ಸ್ಥಾನ
  22. ಕೇರಳದಲ್ಲೂ ದಾಖಲೆಯ ಓಪನಿಂಗ್ ಪಡೆದುಕೊಂಡ ಸಿನಿಮಾ ಇದು
  23. ಕೇರಳದಲ್ಲಿ ವಾರಾಂತ್ಯದಲ್ಲಿ ದಾಖಲೆಯ ಗಳಿಕೆ
  24. ಕೇರಳದಲ್ಲಿ 2ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  25. ಕೇರಳದಲ್ಲಿ 3ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  26. ಕೇರಳದಲ್ಲಿ 4ನೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  27. ಕೇರಳದಲ್ಲಿ ಒಂದೇ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ
  28. ಕೇರಳದಲ್ಲಿ ಭಾನುವಾರ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
  29. ಭಾರತದ ಐಮ್ಯಾಕ್ಸ್ ಸ್ಕ್ರೀನ್‌ಗಳಲ್ಲಿ ದಾಖಲೆಯ ಗಳಿಕೆ ಮಾಡಿದ ಮೊದಲ ಸಿನಿಮಾ
Donate Janashakthi Media

Leave a Reply

Your email address will not be published. Required fields are marked *