ಹಾರೋಹಳ್ಳಿ ರವೀಂದ್ರ
ಯುದ್ಧ ಭೂಮಿಯ
ಮಸಣದೊಳಗೆ
ನಾನು ಕೂಡ ನಿನ್ನಂತೆ ಶವ
ಬುಲೆಟ್ಟಾದ ನಾನು ನಿನ್ನ ಎದೆಯ ಚುಚ್ಚುವ
ಯಾವ ಹಿರಾದೆಯೂ ನನಗಿರಲಿಲ್ಲ
ನನ್ನ ನಾಯಕ ನನ್ನನ್ನು ತಳ್ಳಿಬಿಟ್ಟ
ಇಬ್ಬರೂ ಜೊತೆಯಾಗಿ ಮಣ್ಣಾಗೋಣ.
ಯುದ್ಧ ಭೂಮಿಯ
ಮಸಣದೊಳಗೆ
ನಾನು ಕೂಡ ನಿನ್ನಂತೆ ಶವ
ಗ್ರನೈಟ್ ಶೆಲ್ ಆಗಿ ನಿನ್ನನ್ನು ಕೊಲ್ಲುವ
ಯಾವ ಹಿರಾದೆಯೂ ನನಗಿರಲಿಲ್ಲ
ನನ್ನ ನಾಯಕ ಕಿಡಿ ಹಚ್ಚಿ ನೂಕಿ ಬಿಟ್ಟ
ಇಬ್ಬರೂ ಜೊತೆಯಾಗಿ ಮಣ್ಣಾಗೋಣ.
ಯುದ್ಧ ಭೂಮಿಯ
ಮಸಣದೊಳಗೆ
ನಾನು ಕೂಡ ನಿನ್ನಂತೆ ಶವ
ಫಿರಂಗಿಯ ಬೆಂಕಿಯಿಂದ ನಿನ್ನನ್ನು ಕೊಲ್ಲುವ
ಯಾವ ಹಿರಾದೆಯೂ ನನಗಿರಲಿಲ್ಲ
ನನ್ನ ನಾಯಕ ಬಾಲಕ್ಕೆ ಬೆಂಕಿ ಇಟ್ಟ
ಇಬ್ಬರೂ ಜೊತೆಯಾಗಿ ಮಣ್ಣಾಗೋಣ.
ಯುದ್ಧ ಭೂಮಿಯ
ಮಸಣದೊಳಗೆ
ನಾನು ಕೂಡ ನಿನ್ನಂತೆ ಶವ
ಬಾಂಬುಗಳ ಭೀಕರತೆಯಲಿ ನಿನ್ನನ್ನು ಕೊಲ್ಲುವ
ಯಾವ ಹಿರಾದೆಯೂ ನನಗಿರಲಿಲ್ಲ
ನನ್ನ ನಾಯಕ ನನ್ನನ್ನು ಕಚ್ಚಿ ಎಸೆದ
ಇಬ್ಬರೂ ಜೊತೆಯಾಗಿ ಮಣ್ಣಾಗೋಣ.
ಯುದ್ಧ ಭೂಮಿಯ
ಈ ಮಸಣದೊಳಗೆ
ನಾವಿಬ್ಬರು ಅಸಾಹಯಕರು
ಅವರೆಲ್ಲಾ ಬಂಡವಾಳಶಾಹಿಗಳು
ಬಡವ ಮತ್ತು ಶಸ್ತ್ರಾಸ್ತ್ರ
ಇಬ್ಬರೂ ಗುಲಾಮರು