ಹಾವೇರಿ: ಉಕ್ರೇನಿನಲ್ಲಿ ರಷ್ಯಾ ಸೇನೆಯ ದಾಳಿಗೆ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿ ನವೀನ್ ಮನೆಗೆ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ನಿಯೋಗ ಭೇಟಿ ನೀಡಿ ನವೀನ್ ತಂದೆ ಶೇಖರಗೌಡ ಮತ್ತು ಸಹೋದರ ಹರ್ಷ ಜೊತೆಗೆ ಮಾತನಾಡಿ, ಕುಟುಂಬಕ್ಕೆ ನಾಡಿನ ವಿದ್ಯಾರ್ಥಿ ಸಮುದಾಯದ ಪರವಾಗಿ ಎಸ್ಎಫ್ಐ ಹಾವೇರಿ ಜಿಲ್ಲಾ ಸಮಿತಿಯು ಸಾಂತ್ವನ ಹೇಳಿತು.
ಎಸ್ಎಫ್ಐ ಸಂಘಟನೆಯು ನವೀನ್ ಮೃತ ದೇಹವನ್ನು ಆದಷ್ಟು ಬೇಗನೇ ಕುಟುಂಬಕ್ಕೆ ಹಸ್ತಾಂತರಿಸಲು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಗಳ ಜೊತೆಗೆ ಚರ್ಚೆ ಮಾಡಿದೆ.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ, ಮುಖಂಡರಾದ ಗುಡ್ಡಪ್ಪ ಮಡಿವಾಳರ, ರವಿ ಹಲವಾಗಲ, ಹೊನ್ನಪ್ಪ ಕುದರಿಹಾಳ, ಗಂಗಾ ಮೊಟೆಬೆನ್ನೂರ, ಸಾವಿತ್ರ ಲಮಾಣಿ, ಮಹಂತೇಶ ದುರಗಣ್ಣನವರ ಉಪಸ್ಥಿತರಿದ್ದರು.