ಬೊಳುವಾರು ಮಹಮದ್ ಕುಂಞ್
‘ಸ್ಕಾರ್ಫ್’ ಅಥವಾ ‘ಓದು’ ಇವೆರಡರಲ್ಲಿ;
ಒಂದನ್ನಷ್ಟೇ ಆಯುವ ಅವಕಾಶ ಉಳಿಸಿರುವಾಗ,
ಸಧ್ಯದ ಮಟ್ಟಿಗೆ, ‘ಓದು’ ಆಯ್ದುಕೊಳ್ಳಲು
ಮಕ್ಕಳಿಗೆ ಅವಕಾಶ ಕೊಡಿ.
ನಿಮ್ಮ ವಾದಗಳೆಲ್ಲವೂ ಸರಿ ಇದೆ.
ಅವರು, ಅದು ತೊಡುವುದಿಲ್ಲವಾ..?
ಇವರು, ಇದು ಹಾಕುವುದಿಲ್ಲವಾ…?
ನಮಗೆ ‘ಸಂವಿಧಾನ’ ಅನುಮತಿಸಿಲ್ಲವಾ..?
ಎಲ್ಲವೂ ನಿಜ. ಎಲ್ಲವೂ ಸರಿ ಇದೆ.
ಆದರೆ…, ಆದರೆ….,
ನ್ಯಾಯಾಲಯದಲ್ಲಿ ನೀವು ಗೆದ್ದು ‘ಕಪ್ಪು’ ತರುವಷ್ಟರಲ್ಲಿ,
ಮಕ್ಕಳ ವಾರ್ಷಿಕ ಪರೀಕ್ಷೆಗಳೆಲ್ಲ ಮುಗಿದಿರುತ್ತವೆ.
ಓದಿನಿಂದ ಅವರನ್ನು ದೂರವಿಡಲೆಂದೇ ಸೃಷ್ಟಿಸಲಾಗಿರುವ
‘ಅಜೆಂಡಾ’ಗಳೆಲ್ಲ ಗೆದ್ದುಬಿಟ್ಟಿರುತ್ತವೆ!
ಆಗ, ಮಕ್ಕಳಿಗೆ ಉಳಿದಿರುವುದು ಚಿಪ್ಪು ಮಾತ್ರ.
‘ಸರಕಾರೀ ಅದೇಶ’ಗಳಿಗೆ ತಲೆ ಬಾಗುವುದನ್ನು
ಸೋಲೆಂದು ತಿಳಿಯಬಾರದು.
Please . ಅರ್ಥ ಮಾಡಿಕೊಳ್ಳಿ.
ನಿಮ್ಮ ಮಕ್ಕಳು ‘ಫಾತಿಮಾ’ ಆಗಬೇಕು.
ನಿಮ್ಮ ಮಕ್ಕಳು ‘ಫರ್ಝಾನ’ ಆಗಬೇಕು.
ಇಂಟೆಲಿಜೆಂಟ್, ವೈಸ್ ಎಲ್ಲ ಆಗಬೇಕು.