ಸ್ವಾಮೀಜಿ ಹುಟ್ಟುಹಬ್ಬ : ಸಿಎಂ ಆಗಮನಕ್ಕಾಗಿ ನೆಟ್ಟಿದ್ದ ಗಿಡಗಳೇ ನಾಶ!

ಹುಬ್ಬಳ್ಳಿ: ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಲ್ಲಿ ಸ್ವಾಮೀಜಿ ಹುಟ್ಟುಹಬ್ಬಕ್ಕೆ ಮುಖ್ಯಮಂತ್ರಿ ಆಗಮನ ಹಿನ್ನೆಲೆ, ನರೇಗಾ ಯೋಜನೆ ಅಡಿ 4 ಲಕ್ಷ ವೆಚ್ಚದಲ್ಲಿ ನೆಟ್ಟಿದ್ದ ಗಿಡಗಳನ್ನು ನಾಶ ಮಾಡಲಾಗಿದೆ.

ಮನಗುಂಡಿಯ ಮಾಹಾಮನಿ ಬಸವಾನಂದ ಸ್ವಾಮೀಜಿಯ 50ನೇ ಹುಟ್ಟುಹಬ್ಬದ ಪ್ರಯುಕ್ತ ಇದೇ ನವೆಂಬರ್ 13ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಮನಗುಂಡಿ ಸರ್ಕಾರಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿರುವ ಈ ಕಾಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಪೆಂಡಾಲ್ ಹಾಕಲು ಅಲ್ಲಿದ್ದ 150ಕ್ಕೂ ಹೆಚ್ಚಿನ ಗಿಡಗಳನ್ನು ಕಡಿದು ಹಾಕಲಾಗಿದೆ. ಈ ಗಿಡಗಳನ್ನ ನರೇಗಾ ಯೋಜನೆಯಲ್ಲಿ 4 ಲಕ್ಷ ಹಣ ಖರ್ಚು ಮಾಡಿ ನೆಡಲಾಗಿತ್ತು. ಆದ್ರೆ ಅರಣ್ಯ ಇಲಾಖೆಗೆ ಒಂದು ಮಾಹಿತಿಯನ್ನು ನೀಡದೆ ಕಡಿಯಲಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ಪುಂಡಲೀಕ ಜಕ್ಕಣ್ಣವರ ಎಂಬುವವರು ಅರಣ್ಯ ಇಲಾಖೆಗೆ ಯಾವುದೇ ಮಾಹಿತಿಯನ್ನ ನೀಡದೆ ಗಿಡಗಳನ್ನು ನಾಶ ಮಾಡಿಸಿದ್ದು, ಪರಿಸರ ಪ್ರೇಮಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *