ಮಂಗಳೂರು : ಮೇಲಾಧಿಕಾರಿಗಳ ಕಿರುಕುಳಕ್ಕೆ ನೊಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ಇಂದು ನಡೆದಿದೆ.
ಮಂಗಳೂರು ವಿಭಾಗದ ಮೂರನೇ ಘಟಕದ ಚಾಲಕ ಕಮ್ ನಿರ್ವಾಹಕರಾಗಿದ್ದ ಮೃತ ನಿಂಗಪ್ಪ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ರಾಮವಡಗಿ ಗ್ರಾಮದ ನಿಂಗಪ್ಪ ಕೆಎಸ್‌ಆರ್‌ಟಿಸಿ ಮಂಗಳೂರು ಘಟಕದಲ್ಲಿ ಕರ್ತವ್ಯದಲ್ಲಿದ್ದು, ಮಂಗಳೂರಿನ ಕುಂಟಿಕಾನ ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು.
ಆತ್ಮಹತ್ಯೆಗೆ ಮೇಲಾಧಿಕಾರಿ ಕಿರುಕುಳವೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಬಸ್ ತೆಗೆಯುವ ವಿಚಾರದಲ್ಲಿ ನಿರ್ಲಕ್ಷ್ಯದ ಕಾರಣ ಹೇಳಿ ನಿಂಗಪ್ಪರನ್ನು ಅಮಾನತು ಮಾಡಲಾಗಿತ್ತು.
ಅಮಾನತಾದ ಬಳಿಕ ಇವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಕೆಎಸ್‌ಆರ್‌ಟಿಸಿ ನಂದಕುಮಾರ್, ಡಿಟಿಓ ಕಮಲಾಕರ್ ಹಾಗೂ ಕೆಸ್ಸಾರ್ಟಿಸಿ ಡಿಸಿ ಅರುಣ್ ಕುಮಾರ್ ವಿರುದ್ದ ಆರೋಪ ಕೇಳಿಬಂದಿದ್ದು ಈ ಮೂವರ ಕಿರುಕುಳಕ್ಕೆ ನೊಂದು ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.