ಬೆಂಗಳೂರು : ಚೆಲ್ಲಾಟ ಚಿತ್ರದ ಮುಖಾಂತರ ನಾಯಕನಾಗಿ ಚಂದನವನಕ್ಕೆ ಕಾಲಿಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಹಲವು ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿ ತಮ್ಮ ಅಭಿಮಾನಿಗಳನ್ನು ರಂಜಿಸಿರುವ ಗಣೇಶ್ ಈ ಬಾರಿ ವಿಭಿನ್ನ ಪಾತ್ರಕ್ಕೆ ಕೈಹಾಕಿದ್ದಾರೆ.
ಬಹುತೇಕ ಚಿತ್ರಗಳಲ್ಲಿ ಲವರ್ಬಾಯ್ ಆಗಿ ಕಾಣಿಸಿಕೊಂಡಿದ್ದ ಗಣೇಶ್ ಇದೇ ಮೊದಲ ಬಾರಿಗೆ ಕುರುಡನ ಪಾತ್ರ ನಿಭಾಯಿಸುತ್ತಿದ್ದು, ಅಭಿಮಾನಿಗಳಲ್ಲಿ ಮತ್ತಷು ಕೂತುಹಳ ಮೂಡಿಸಿದೆ.
ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್ನಲ್ಲಿ ಎರಡನೇ ಚಿತ್ರವಾಗಿ ‘ಸಖತ್’ ಸಿನಿಮಾದ ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಪೋಸ್ಟರ್ ನಲ್ಲಿ ಸಿಂಗರ್ ಆಗಿ ಕಾಣಿಸಿಕೊಂಡು ಗಮನ ಸೆಳೆದ ಗಣೇಶ್ ಈಗ ಕುರುಡನ ಪಾತ್ರದಲ್ಲಿ ಕಟೆಕಟೆಯಲ್ಲಿ ನಿಂತು ಡಿಫರೇಟ್ ಲುಕ್ ನಲ್ಲಿ ಮಿಂಚಿದ್ದಾರೆ.
ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ..
ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ.
ಮುಚ್ಚಿಟ್ಟ ಕಣ್ಗಳಿಗೆ.
ಬಿಚ್ಚಿಟ್ಟ ಪ್ರೀತಿಯ ಬೆಳಕಚೆಲ್ಲಿ ಹಾರೈಸಿ..First time in blind role…#entertaning#sakathfilm pic.twitter.com/Cnr4qSfRlA
— Ganesh (@Official_Ganesh) March 22, 2021
ಬಹುತೇಕ ಚಿತ್ರಗಳಲ್ಲಿ ಲವರ್ ಬಾಯ್ ಆಗಿ, ಸ್ಟೈಲಿಶ್ ಲುಕ್ನಲ್ಲಿ ಮುಂಚಿತ್ತಿದ್ದ ಗನೇಶ್ ಇದೇ ಮೊದಲ ಬಾರಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹೊಸ ಪಾತ್ರದ ಬಗ್ಗೆ ತಮಗಿರುವ ಕೂತುಹಲವನ್ನು ಟ್ವಿಟರ್ ಖಾತೆಯ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಮಾ. 24ರಂದು ‘ಹೀರೋ’ ಚಿತ್ರದ ‘ವಿಡಿಯೋ ಸಾಂಗ್ ರಿಲೀಸ್
‘ನಾಯಕನಾಗಿ 15 ವರ್ಷಗಳಿಂದ ನಿಮ್ಮ ನೋಟಗಳಿಗೆ ಸೆರೆಯಾಗಿದ್ದೇನೆ. ಮೊದಲ ಬಾರಿಗೆ ನನ್ನ ನೋಟವನು ಕಟ್ಟಿಟ್ಟು ಕಾಣಿಸಿಕೊಳ್ಳುತ್ತಿದ್ದೇನೆ. ಮುಚ್ಚಿಟ್ಟ ಕಣ್ಗಳಿಗೆ, ಬಿಚ್ಚಿಟ್ಟ ಪ್ರೀತಿಯ ಬೆಳಕು ಚೆಲ್ಲಿ ಹಾರೈಸಿ’ ಎಂದು ಗಣೇಶ್ ಟ್ವೀಟ್ ಮಾಡಿದ್ದಾರೆ.
ಈ ಟ್ವಿಟ್ ಗೆ ಸಾಕಷ್ಟು ಅಭಿಮಾನಗಳು ಶುಭಾಶಯ ಕೂರಿದ್ದು, ಸಖತ್ ಸಿನಿಮಾ ನೀರಿಕ್ಷೆ ಮತ್ತಷ್ಟು ಹೆಚ್ಚಿಸಿದೆ. ಈ ಚಿತ್ರಕ್ಕೆ ಮಾ. 22ರಿಂದ ಶೂಟಿಂಗ್ ಆರಂಭವಾಗಿದ್ದು, ಗಣೇಶ್ಗೆ ಜೋಡಿಯಾಗಿ ನಟಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಹಾಸ್ಯ ನಟ ಧರ್ಮಣ್ಣ ಕಾಣಿಸಿಕೊಳ್ಳಲಿದ್ದಾರೆ. ಅವರ ಫಸ್ಟ್ಲುಕ್ ಪೋಸ್ಟರ್ ಕೂಡ ಈಗಾಗಲೇ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ.