ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ವಿದ್ಯಾರ್ಥಿ ಸಂಘಟನೆಯಿಂದ ಪ್ರತಿಭಟನೆ

ಕೋಲಾರ : ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (SFI) ತಾಲ್ಲೂಕು ಸಮಿತಿಯ ವತಿಯಿಂದ ನಗರದ ತಹಶಿಲ್ದಾರ್ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರದ ನಿರ್ಲಕ್ಷ್ಯದಿಂದ  ಕೊರೊನಾ ಮಹಾಮಾರಿಯಲ್ಲಿ ವಿದ್ಯಾರ್ಥಿ ಸಮುದಾಯ  ಸಂಕಷ್ಟಕ್ಕೆ ಸಿಲುಕಿ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದೆ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ, ಹಿಂದುಳಿದ ಮತ್ತು ದಲಿತ ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣದಿಂದ  ಮೊಟಕುಗೊಳಿಸುವ ಎಲ್ಲಾ ಪ್ರಯತ್ನಗಳ ನಡೆಯುತ್ತಾ ಇವೆ ಇವುಗಳ ಮಧ್ಯೆ ಹೊಸ ಶಿಕ್ಷಣ ನೀತಿಯನ್ನು ಜಾರಿ ಮಾಡಿ ಇನ್ನಷ್ಟು ಅಪಾಯದ ಅಂಚಿಗೆ ವಿದ್ಯಾರ್ಥಿ ಸಮುದಾಯವನ್ನು ತಳ್ಳುತ್ತಾ ಇದ್ದಾರೆ ಈ ಬಗ್ಗೆ  ಸರ್ಕಾರ ಮತ್ತು ಸಂಬಂಧಿಸಿದ ಶಿಕ್ಷಣ ಇಲಾಖೆ ವಿಶೇಷ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಕೊರೊನಾದಿಂದ ಶಾಲಾ ಕಾಲೇಜುಗಳು ಮುಚ್ಚಿದ ನಂತರ ಸರಕಾರದ ನಿಯಮಗಳ ಪ್ರಕಾರ ಪದವಿ ಕಾಲೇಜುಗಳನ್ನು ಪ್ರಾರಂಭಿಸಿದ್ದು ಈ ಸಂದರ್ಭದಲ್ಲಿ  ವಿದ್ಯಾರ್ಥಿಗಳಿಗೆ ಕೊರೊನಾ ಪರೀಕ್ಷೆಯನ್ನು ಉಚಿತವಾಗಿ ಮಾಡಬೇಕು ಕಾಲೇಜುಗಳು ಪ್ರಾರಂಭವಾಗಿರುವ ಹಿನ್ನಲೆಯಲ್ಲಿ ಎಲ್ಲಾ ಗ್ರಾಮೀಣ ಭಾಗಗಳಿಗೆ ಬಸ್ ಸೌಲಭ್ಯ ಕಲ್ಪಿಸಬೇಕು, ವಿದ್ಯಾರ್ಥಿ ಮತ್ತು ಉಪನ್ಯಾಸಕರಿಗೆ ಅನಾರೋಗ್ಯ ಸಮಸ್ಯೆಯಾದಲ್ಲಿ ಅದರ ಪೂರ್ತಿ ಖರ್ಚು ವೆಚ್ಚವನ್ನು ಸರಕಾರವೇ  ಭರಿಸಬೇಕು ಎಂದು ಆಗ್ರಹಿಸಿದರು.

ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ : ವ್ಯಾಪಕ ಆಕ್ರೋಶ

ಆರೋಗ್ಯದ ದೃಷ್ಟಿಯಿಂದ ವಿಧ್ಯಾರ್ಥಿಗಳ ಮತ್ತು ಉಪನ್ಯಾಸಕರಿಗೆ ಆರೋಗ್ಯ ವಿಮೆಯನ್ನು ಸರಕಾರವೇ ಮಾಡಿಸಬೇಕು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್  ನೀಡಬೇಕು ಪ್ರಥಮ ಮತ್ತು ದ್ವೀತಿಯ ಪದವಿ ವಿದ್ಯಾರ್ಥಿಗಳಿಗೆ ತರಗತಿಗಳಿಗೆ ಅನುಮತಿ ನೀಡಬೇಕು ಅಥವಾ ಆನ್ ಲೈನ್ ಕ್ಲಾಸ್ ಕೇಳಲು ಇಂಟರ್ನೆಟ್‌ ಮತ್ತು ಲ್ಯಾಪ್ ಟಾಪ್ ಸೌಲಭ್ಯಗಳನ್ನು ಸರಕಾರವೇ ಒದಗಿಸಬೇಕು  ವಿದ್ಯಾರ್ಥಿಗಳ ಬಾಕಿ ಉಳಿಸಿಕೊಂಡಿರುವ ವಿದ್ಯಾರ್ಥಿ ವೇತನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಭಾರತ ವಿದ್ಯಾರ್ಥಿ ಫೆಡರೇಷನ್‌ ತಾಲೂಕು ಅಧ್ಯಕ್ಷ ಶ್ರೀಕಾಂತ್, ಕಾರ್ಯದರ್ಶಿ ಅಂಕಿತಾ, ಸಹ ಕಾರ್ಯದರ್ಶಿ ಭರತ್, ತಾಲೂಕು ಸಮಿತಿಯ ಮುಖಂಡರಾದ ಮಾನಸ, ಶಿಲ್ಪ, ರಮೇಶ್, ನಾಗರಾಜ್ , ರಂಜಿತ್, ಶ್ರವಂತಿ ಮುಂತಾದವರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *