- ಮಾಜಿ ಸಿಎಂ ಎಚ್‌ಡಿಕೆ ಹೇಳಿಕೆಯನ್ನು ವ್ಯಂಗ್ಯವಾಡಿದ್ದ ಡಿಸಿಎಂ ಸವದಿ
- ಸದನದಲ್ಲಿ ಬ್ಲೂಫಿಲಂ ನೋಡಿದ ಆರೋಪ ಹೊತ್ತಿದ್ದ ಲಕ್ಷ್ಮಣ ಸವದಿ
ಬೆಂಗಳೂರು: ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್ ಆದರೂ, ಬ್ಲೂ ಫಿಲಂ ಆದರೂ… ಹೀಗೆಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬಗ್ಗೆ ಜೆಡಿಎಸ್ ಮುಖಂಡ, ಮಾಜಿ ಸಚಿವ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.
‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ್ದೇ ಡ್ರಗ್ಸ್ ದಂಧೆಕೋರರು ಎಂಬ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೋಡಿ ನಗು ಬಂತು. ಅವರ ಮಾತು, ಕುಣಿಯಲು ಬರದವರು ನೆಲ ಡೊಂಕು ಎನ್ನುವಂತಿದೆ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಗುರುವಾರ ಟೀಕಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್ ಮುಖಂಡ ಸಾ.ರಾ.ಮಹೇಶ್, ‘ಡ್ರಗ್ಸ್ ದಂದೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‌ಡಿಕೆ ಅವರ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಅಸಲಿಗೆ ಎಲ್ಲವೂ ವ್ಯವಸನವೇ ಡ್ರಗ್ಸ್ ಆದರೂ, ಬ್ಲೂ ಫಿಲ್ಮಂ ಆದರೂ…’ ಎಂದು ವ್ಯಂಗ್ಯವಾಡಿದ್ದಾರೆ.
2012ರಲ್ಲಿ ಸದನ ನಡೆಯುತ್ತಿರುವಾಗಲೇ ಬ್ಲೂ ಫಿಲಂ ನೋಡಿದ ಆರೋಪ ಲಕ್ಷ್ಮಣ ಸವದಿ ಅವರ ಮೇಲೆ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದರು.