- ಮಳವಳ್ಳಿಯ ಪುರಸಭೆ ಕಚೇರಿ ಎದುರು ಪ್ರತಿಭಟನಾ ಸಪ್ತಾಹ
ಮಂಡ್ಯ: ಕೋವಿಡ್ ಮತ್ತು ಲಾಕ್ ಡೌನ್ ನಿಂದಾಗಿ ಅನೇಕ ಬಡಜನರು, ನಿವೇಶನ ರಹಿತರು, ಬಿದಿಬದಿ ವ್ಯಾಪಾರಸ್ಥರು, ವ್ಯಾಪಾರಿಗಳು, ರೈತರು, ವಿದ್ಯಾರ್ಥಿಗಳು ಸೇರಿ ಹಲವಾರು ಕುಟುಂಬಗಳು ಸಂಕಷ್ಟದಲ್ಲಿದ್ದಾರೆ. ಇವರಿಗೆ ಕೋವಿಡ್ ಪರಿಹಾರವನ್ನು ಒದಗಿಸಲು ಮತ್ತು ತಮ್ಮ ಬೇಡಿಕೆಗಳನ್ನು ಹೀಡೆರಿಸಲು ಒತ್ತಾಯಿಸಿ ಸಿಪಿಐಎಂ ನ ಭಾಗವಾಗಿ ಮಳವಳ್ಳಿಯ ಪುರಸಭೆ ಕಚೇರಿ ಎದುರು ಪ್ರತಿಭಟನಾ ಸಪ್ತಾಹ ನಡೆಸಿದ್ದಾರೆ.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐಎಂ ಮಳವಳ್ಳಿ ತಾಲ್ಲೂಕು ಸಮಿತಿ ಕಾರ್ಯದರ್ಶಿ ದೇವಿ ರವರು ಮಾತನಾಡುತ್ತಾ ದೇಶದಲ್ಲಿ ಕೋವಿಡ್ 19ರ ಹಾವಳಿ ತೀವ್ರವಾಗುತ್ತಲೇ ಇದೆ ಈಗಾಗಲೇ ಐವತ್ತು ಸಾವಿರ ಭಾರತೀಯರು ಕೊರೊನ ಸೋಂಕಿಗೆ ಬಲಿಯಾಗಿದ್ದಾರೆ . 50 ಲಕ್ಷ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆದರೆ ಎಲ್ಲರಿಗೂ ಒಳ್ಳೆಯ ದಿನಗಳ ಭವಿಷ್ಯ ನುಡಿಯುತ್ತಿದ್ದ ಜಾದೂಗಾರ ಮೋದಿ ತನ್ನ ವೈಫಲ್ಯವನ್ನು ಮರೆಮಾಚಲು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ.
ಲಾಕ್ಡೌನ್ ದೇಶದ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ವಿಕಲಾಂಗರ ಮೇಲೆ ಹೇಳತೀರದ ಸಂಕಷ್ಟಗಳನ್ನು ಹೇರಿತು. ಕೇಂದ್ರ ಬಿಜೆಪಿ ಸರ್ಕಾರ ಅವರ ನೆರವಿಗೆ ಧಾವಿಸಲಿಲ್ಲ ಅಂತಹ ಕುಟುಂಬಗಳಿಗೆ ನಗದು ವರ್ಗಾವಣೆ ಮತ್ತು ಆಹಾರ ಧಾನ್ಯಗಳನ್ನು ಉಚಿತವಾಗಿ ವಿತರಿಸಬೇಕೆಂಬ ಬೇಡಿಕೆಯನ್ನು ಈಡೇರಿಸುವುದನ್ನು ನಿರಾಕರಿಸುತ್ತಲೇ ಬಂದಿದೆ ಸೋಂಕು ಹರಡುವುದನ್ನು ತಡೆಯುವಲ್ಲಿ ವಿಫಲವಾದ ಮೋದಿ ಸರಕಾರ ಈಗ ಅಷ್ಟೇ ಬೇಜವಾಬ್ದಾರಿಯಿಂದ ಲಾಕ್ಡೌನ್ ತೆರವು ಮಾಡುತ್ತಾ ತಾನು ಉಂಟುಮಾಡಿದ ಸಮಸ್ಯೆಯನ್ನು ಎದುರಿಸುವ ಹೊರೆಯನ್ನು ರಾಜ್ಯ ಸರ್ಕಾರಗಳಿಗೆ ವರ್ಗಾಯಿಸಿ ಕೈತೊಳೆದುಕೊಂಡಿದೆ ಎಂದು ಕೆಂದ್ರ ಸರ್ಕಾರದದ ವಿರುದ್ಧ ಆರೋಪಿಸಿದರು.
ಕೊರೊನಾ ಸಂಕಷ್ಟ ಆರಂಭವಾಗುವುದಕ್ಕಿತಲೂ ಮೊದಲೇ ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಜಾರತೊಡಗಿತ್ತು. ಕೊರೊನಾ ಸಂಕಷ್ಟ ಗಾಯದ ಮೇಲೆ ಬರೆ ಎಳೆದಂತೆ ಇನ್ನಷ್ಟು ಭೀಕರಗೊಳಿಸಿದೆ ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಿ ಸಾರ್ವಜನಿಕ ರಂಗವನ್ನು ಬಲಪಡಿಸಿ ಹೊಸ ಉದ್ಯೋಗಗಳನ್ನು ಸೃಷ್ಟಿಸಿ ಅವರ ಆದಾಯವನ್ನು ಹೆಚ್ಚಿಸಿ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಬಹುದಾಗಿತ್ತು ಆದರೆ ಮೋದಿ ಸರ್ಕಾರ ರೈಲ್ವೆ ವಿದ್ಯುತ್, ಬಿಎಸ್ಎನ್ಎಲ್, ಕಲ್ಲಿದ್ದಲು, ಪೆಟ್ರೋಲಿಯಂ, ಬ್ಯಾಂಕಿಗ್ ವಿಮೆ ಮೊದಲಾದ ಹಣಕಾಸು ವಲಯವನ್ನು ಖಾಸಗೀಕರಣ ಮಾಡಿ ದೇಶದ ಆಸ್ತಿಯನ್ನು ಲೂಟಿ ಮಾಡಲು ಲಾಭಕೋರ ಕಾರ್ಪೋರೆಟ್ ಕಂಪನಿಗಳಿಗೆ ಮಾರಾಟ ಮಾಡುತ್ತಿದೆ.
ಕೋವಿಡ್ 19ರ ಹಾವಳಿ ಮತ್ತು ಅದು ಸೃಷ್ಟಿಸಿರುವ ಆತಂಕಕ್ಕೆ ಒಳಗಾಗಿ ಕಂಗೆಟ್ಟು ದೇಶದ ಜನಸಾಮಾನ್ಯರಿಗೆ ಅಗತ್ಯ ಆರ್ಥಿಕ ನೆರವು ಮಾನವೀಯ ನೆರವನ್ನು ಒದಗಿಸಬೇಕಾದ ಸರ್ಕಾರ ಗಾಯದ ಮೇಲೆ ಬರೆ ಎಳೆದಂತೆ ಜನರ ಮೇಲೆ ಹೊರಲಾಗದ ಹೊರೆಗಳನ್ನು ಹೇರುತ್ತಿದೆ ಇದನ್ನು ಖಂಡಿಸಿ ಸಿಪಿಐಎಂ ವತಿಯಿಂದ ದೇಶಾದ್ಯಂತ ಪ್ರತಿಭಟನಾ ಸಪ್ತಾಹ ಆಚರಿಸಲಾಗುತ್ತಿದೆ ಎಂದು CPIM ನ ಮುಖಂಡರಾದ ಹೆಚ್.ಕೆ.ತಿಮ್ಮೇಗೌಡ ತಿಳಿಸಿದರು.
ಕೋವಿಡ್ ಸಂಕಷ್ಟದಲ್ಲಿರುವವರಿಗೆ ನಗದು ಪರಿಹಾರ, ಆಹಾರ ಸಾಮಗ್ರಿ ,ನಿವೇಶನ ರಹಿತರಿಗೆ ನಿವೇಶನ, ಬಿದಿಬದಿ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯಗಳನ್ನು ಒದಗಿಸಲು ಕಿರುಕುಳ ತಪ್ಪಿಸಿ ಸೂಕ್ತ ರಕ್ಷಣೆಗಾಗಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳ ಬಡ್ಡಿ ಸಮೇತ ಸಾಲವನ್ನು ಒಳಗೊಂಡಂತೆ 17 ಬೇಡಿಕೆಗಳನ್ನು ಹೀಡೆರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಗೌರಮ್ಮ, ನಂಜಮಣಿ, ಕೃಷ್ಣ, ಹರೀಶ್, ಶಂಕರ್, ಖಾಲಿಕ್ ಮುಂತಾದವರು ಭಾಗವಹಿಸಿದರು.