“ಶಾಂತಿಯುತ ಪ್ರತಿಭಟನೆಯು ಅಧಿಕಾರದಲ್ಲಿರುವವರಿಗೆ ಸವಾಲೊಡ್ಡುತ್ತದೆ ಎಂಬ ಕಾರಣಕ್ಕಾಗಿ ಸರಕಾರ ರಾಜಕೀಯ ಸೇಡಿನ ಸಾಧನವಾಗಿ ಪೊಲೀಸರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ” – ರಾಷ್ಟ್ರಪತಿಗಳಿಗೆ ದಿಲ್ಲಿ ಪೊಲಿಸ್‌ನ ಕ್ರೂರ ಹಲ್ಲೆಗೊಳಗಾದ ಸಂಸದ ಜಾನ್‌ ಬ್ರಿಟ್ಟಾಸ್‌ ಪತ್ರ

ಶೀರ್ಷಿಕೆ ಫೋಟೋ ಕೃಪೆ: ಲೈವ್‌ ಲಾ
ಅಕ್ಟೋಬರ್‌ ೧೧ರಂದು  ಸಿಪಿಐ(ಎಂ)  ಸಂಸದ ಮತ್ತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಗುಂಪಿನ ಮುಖಂಡರಾದ ಜಾನ್ ಬ್ರಿಟ್ಟಾಸ್ ಮಾಧ್ಯಮಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ ದಿಲ್ಲಿ ಪೊಲೀಸ್ ಅವರೊಂದಿಗೆ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾರೆ. ಅವರನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ, ಹಲ್ಲೆ ನಡೆಸಿ, ನಂತರ ದಾರಿಯಲ್ಲಿ ಬಿಟ್ಟುಹೋಗಲಾಗಿದೆ; ಸದ್ಯ ಅವರು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಾನ್‌

ಈ ಘಟನೆಯ ಬಗ್ಗೆ ಬ್ರಿಟ್ಟಾಸ್‌ ರಾಷ್ಟ್ರಪತಿಗಳು, ರಾಜ್ಯಸಭಾ ಅಧ್ಯಕ್ಷರೂ ಆಗಿರುವ  ಉಪರಾಷ್ಟ್ರಪತಿಗಳು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದು ದಿಲ್ಲಿಯಲ್ಲಿ ಶಾಂತಿಯುತ ಮಾಧ್ಯಮ ಸಂವಾದದ ವೇಳೆ ರಾಜ್ಯಸಭಾ ಸದಸ್ಯನಾದ ತನ್ನ ಮೇಲೆ ಪೊಲೀಸರಿಂದ ಕ್ರೂರ ಹಲ್ಲೆ, ಇದರಲ್ಲಿ  ಸಾಂವಿಧಾನಿಕ ಸ್ವಾತಂತ್ರ್ಯಗಳು ಮತ್ತು ಸಂಸದೀಯ ಘನತೆಯ ಗಂಭೀರ ಉಲ್ಲಂಘನೆಯ ವಿಷಯದಲ್ಲಿ  ತುರ್ತು ಮಧ್ಯಪ್ರವೇಶ ಮಾಡಬೇಕು  ಮತ್ತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ.

ಈ ಘಟನೆಯನ್ನು ಇನ್ನಷ್ಟು ಆಘಾತಕಾರಿಯನ್ನಾಗಿಸಿರುವ ಸಂಗತಿಯೆಂದರೆ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮ ಬಂಧನದಿಂದ ರಕ್ಷಿಸಬೇಕು, ಅಡೆತಡೆಯಿಲ್ಲದ ಇಂಟರ್ನೆಟ್ ಸಂಪರ್ಕ ಹಾಗೂ ಸಾಮಾನ್ಯ ಮೆಟ್ರೋ ಮತ್ತು ರೈಲು ಸೇವೆಗಳನ್ನು ಖಚಿತಪಡಿಸಬೇಕು ಮತ್ತು ಜನರ ಮುಕ್ತ ಸಂಚಾರವನ್ನು ರಕ್ಷಿಸಬೇಕು ಎಂದು  ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಕೆಲವೇ ಗಂಟೆಗಳಲ್ಲಿ ಈ ಕ್ರೂರ ಕೃತ್ಯ ನಡೆದಿರುವುದು ಎಂದು ತಮ್ಮ ಪತ್ರದಲ್ಲಿ ಖೇದ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯೋಗದ ಮೇಲಿನ ಟೀಕೆ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ ಮತ್ತು ಚುನಾವಣಾ ಸಮಗ್ರತೆಯನ್ನು ರಕ್ಷಿಸಲು ನಡೆಸುವ ಶಾಂತಿಯುತ ಸಂಯೋಜನೆಗಳು ಪ್ರಜಾಸತ್ತಾತ್ಮಕ ಚರ್ಚೆಯ ನ್ಯಾಯಸಮ್ಮತ ವಿಷಯಗಳಾಗಿವೆ ಎಂಬುದನ್ನು ಆಡಳಿತಾರೂಢ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯು ಅಧಿಕಾರದಲ್ಲಿರುವವರಿಗೆ ಸವಾಲೊಡ್ಡುತ್ತದೆ ಎಂಬ ಕಾರಣಕ್ಕಾಗಿಯೇ ಅದನ್ನು ಬೆದರಿಕೆ ಎಂದು ಪರಿಗಣಿಸಲಾಗದು. ಅಧಿಕಾರಿಗಳು ಈ ಬೇಡಿಕೆಗಳನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು, ಆದರೆ ಅವುಗಳಿಗೆ ದೈಹಿಕ ಹಿಂಸೆಯ ಮೂಲಕ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಸರ್ಕಾರವು ಪ್ರಜಾಪ್ರಭುತ್ವವನ್ನು ಬೆದರಿಕೆಯ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅದು ರಾಜಕೀಯ ಸೇಡಿನ ಸಾಧನವಾಗಿ ಪೊಲೀಸರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ, ತರ್ಕದ ಶಕ್ತಿಗೆ ಬದಲಾಗಿ ಲಾಠಿಯ ಬಲವನ್ನು ಬಳಸಲು ಸಾಧ್ಯವಿಲ್ಲ. ಹಾಗೂ ಅದು ಅಧಿಕಾರಸ್ಥರಿಗೆ  ಭಿನ್ನಮತ  ಅನಾನುಕೂಲಕರವೆಂದು ತೋರುತ್ತದೆ ಎಂಬ ಕಾರಣಕ್ಕಾಗಿಯೇ ಜನರು ತಮ್ಮ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಆ ಪತ್ರದ ಪೂರ್ಣ ಪಾಠ ಹೀಗಿದೆ:

“ನವದೆಹಲಿಯಲ್ಲಿ ಇಂದು ನನ್ನ ವಿರುದ್ಧ ಪೊಲೀಸರು ಎಸಗಿದ ಕ್ರೂರ ಹಲ್ಲೆಯ ಒಂದು ಆಘಾತಕಾರಿ ಘಟನೆಯನ್ನು ನಿಮ್ಮ ತುರ್ತು ಗಮನಕ್ಕೆ ತರಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಮುಖ್ಯ ಚುನಾವಣಾ ಆಯುಕ್ತ ಶ್ರೀ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಕುರಿತು ಪತ್ರಕರ್ತರೊಂದಿಗೆ ಶಾಂತಿಯುತವಾಗಿ ಸಂವಾದ ನಡೆಸುತ್ತಿದ್ದಾಗ, ಪೊಲೀಸ್ ಸಿಬ್ಬಂದಿ ನನ್ನನ್ನು ಬಲವಂತವಾಗಿ ಎಳೆದು ದೈಹಿಕವಾಗಿ ಎತ್ತಿಕೊಂಡು ಹೋಗಿ ಪೊಲೀಸ್ ವಾಹನದೊಳಗೆ ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ, ನಂತರ ರಸ್ತೆ ಬದಿಯಲ್ಲಿ ಬಿಟ್ಟುಹೋದರು. ಈ ಸಂಪೂರ್ಣ ಘಟನೆಯು ಕಾನೂನಿನ ಆಳ್ವಿಕೆ, ಪ್ರಜಾಸತ್ತಾತ್ಮಕ ಭಿನ್ನಮತದ ಹಕ್ಕಿನ ಖಾತರಿ ಮತ್ತು ಕಾನೂನು ಜಾರಿಯ ಹೊಣೆ ನೀಡಲ್ಪಟ್ಟವರ  ಜವಾಬುದಾರಿಕೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಈ ಘಟನೆಯನ್ನು ಇನ್ನಷ್ಟು ಆಘಾತಕಾರಿಯನ್ನಾಗಿಸಿರುವ ಸಂಗತಿಯೆಂದರೆ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮ ಬಂಧನದಿಂದ ರಕ್ಷಿಸಬೇಕು, ಅಡೆತಡೆಯಿಲ್ಲದ ಇಂಟರ್ನೆಟ್ ಸಂಪರ್ಕ ಹಾಗೂ ಸಾಮಾನ್ಯ ಮೆಟ್ರೋ ಮತ್ತು ರೈಲು ಸೇವೆಗಳನ್ನು ಖಚಿತಪಡಿಸಬೇಕು ಮತ್ತು ಜನರ ಮುಕ್ತ ಸಂಚಾರವನ್ನು ರಕ್ಷಿಸಬೇಕು ಎಂದು  ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಕೆಲವೇ ಗಂಟೆಗಳಲ್ಲಿ ಈ ಕ್ರೂರ ಕೃತ್ಯ ನಡೆದಿರುವುದು.

ಕೆಲವು ಯುವ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಅವರನ್ನು ದಸ್ತಗಿರಿ ಮಾಡಲಾಗುತ್ತಿದೆ ಎಂದು ತಿಳಿದು, ನಾನು ಇಂದು ಮಧ್ಯಾಹ್ನ 12.30ರ ಸುಮಾರಿಗೆ ಕನ್ನಾಟ್ ಪ್ಲೇಸ್‌ಗೆ ತಲುಪಿದೆ ಮತ್ತು ಮಾಧ್ಯಮ ಪತ್ರಕರ್ತರೊಂದಿಗೆ ಸಂವಾದ ನಡೆಸುತ್ತಿದ್ದೆ. ನಾನು ಕೇವಲ ಪತ್ರಿಕೆಗಳೊಂದಿಗೆ ಮಾತನಾಡುವ ನನ್ನ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸುತ್ತಿದ್ದೆ. ಆದಾಗ್ಯೂ, ನಾನು ಸಂಸದನೆಂದು ನಾನೂ ಹಾಗೂ ಅಲ್ಲಿ ಉಪಸ್ಥಿತರಿದ್ದ ಪತ್ರಕರ್ತರು ಪದೇ ಪದೇ ಹೇಳಿದರೂ, ದಿಲ್ಲಿ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (CRPF) ಸಿಬ್ಬಂದಿ ನನ್ನ ಮೇಲೆ  ಬಲವಂತದಿಂದ ಕೈಮಾಡಿ, ಸುಮಾರು 50 ಮೀಟರ್‌ಗಳಷ್ಟು ದೂರಕ್ಕೆ ಎಳೆದುಕೊಂಡು ಹೋದರು. ಕೆಲವು ಪೊಲೀಸ್ ಸಿಬ್ಬಂದಿ ನನ್ನನ್ನು ದೈಹಿಕವಾಗಿ ಮೇಲಕ್ಕೆತ್ತಿ ಒಂದು ಪೊಲೀಸ್ ವಾಹನದತ್ತ ಕೊಂಡೊಯ್ದರು; ಒಬ್ಬ ಹಾಲಿ ಸಂಸದನಾದ ನನ್ನನ್ನು ಯಾವುದೋ ನಿರ್ಜೀವ ವಸ್ತುವಿನಂತೆ ಎಳೆದೊಯ್ದರು. ಈ ದರ್ಪದ ಕ್ರಮವನ್ನು ಸಮರ್ಥಿಸಿಕೊಳ್ಳಲು ಯಾವುದೇ ಪ್ರಚೋದನೆ ಇರಲಿಲ್ಲ. ಜಾನ್‌

ಫೋಟೋ ಕೃಪೆ: ಡೆಕ್ಕನ್‌ ಹೆರಾಲ್ಡ್‌

ಈ ಘಟನೆಯನ್ನು ಇನ್ನಷ್ಟು ಆಘಾತಕಾರಿಯನ್ನಾಗಿಸಿರುವ ಸಂಗತಿಯೆಂದರೆ, ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯ ಶಾಂತಿಯುತ ಪ್ರತಿಭಟನಾಕಾರರನ್ನು ಅಕ್ರಮ ಬಂಧನದಿಂದ ರಕ್ಷಿಸಬೇಕು, ಅಡೆತಡೆಯಿಲ್ಲದ ಇಂಟರ್ನೆಟ್ ಸಂಪರ್ಕ ಹಾಗೂ ಸಾಮಾನ್ಯ ಮೆಟ್ರೋ ಮತ್ತು ರೈಲು ಸೇವೆಗಳನ್ನು ಖಚಿತಪಡಿಸಬೇಕು ಮತ್ತು ಜನರ ಮುಕ್ತ ಸಂಚಾರವನ್ನು ರಕ್ಷಿಸಬೇಕು ಎಂದು  ಸ್ಪಷ್ಟ ನಿರ್ದೇಶನಗಳನ್ನು ನೀಡಿದ ಕೆಲವೇ ಗಂಟೆಗಳಲ್ಲಿ ಈ ಕ್ರೂರ ಕೃತ್ಯ ನಡೆದಿರುವುದು.

ಇದನ್ನೂ ಓದಿ : ಎಸ್‌ಐಆರ್‌ ವಿರೋಧಿ ಹೋರಾಟಕ್ಕೆ ಪೊಲೀಸರ ತಡೆ: ಫ್ರೀಡಂ ಪಾರ್ಕ್‌ನಲ್ಲೇ ವಿದ್ಯಾರ್ಥಿಗಳ ಬಂಧನ

ವಾಹನದೊಳಗೆ ಹಾಕಿದ ನಂತರ ದೌರ್ಜನ್ಯ ತೀವ್ರಗೊಂಡಿತು. ಪೊಲೀಸ್ ಸಿಬ್ಬಂದಿ ನನ್ನ ಮೇಲೆ ಹಲ್ಲೆ ನಡೆಸಿ, ಸೀಟಿಗೆ ಒತ್ತಿ ಹಿಡಿದರು. ನಾನು ಸಂಸದನೆಂದು ಗುರುತಿಸಿಕೊಂಡ ನಂತರವೂ ಹಲ್ಲೆ ಮುಂದುವರಿಯಿತು. ಚುನಾಯಿತ ಪ್ರತಿನಿಧಿಯಾಗಿದ್ದರೂ, ನನ್ನನ್ನು ಹೀಗೆ ಅವಮಾನಕಾರಿ ಮತ್ತು ದೈಹಿಕವಾಗಿ ಹಿಂಸಾತ್ಮಕವಾಗಿ ನಡೆಸಿಕೊಳ್ಳಲು ಅವರು ಹಿಂಜರಿಯಲಿಲ್ಲ. ನನ್ನ ಬಂಧನವು ಸಂಪೂರ್ಣವಾಗಿ ಕಾನೂನುಬಾಹಿರವೆಂದು ಕಂಡುಕೊಂಡ ಸಂಬಂಧಪಟ್ಟ ಡಿಸಿಪಿ (DCP) ಬಿಡುಗಡೆಗೆ ಆದೇಶಿಸಿದ ನಂತರ, ನನ್ನನ್ನು ರಸ್ತೆ ಬದಿಯಲ್ಲಿ ಹಾಕಿ ಹೊರಟುಹೋದರು. ಹಲ್ಲೆಯ ನಂತರ, ನಾನು ತೀವ್ರ ದೈಹಿಕ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದೇನೆ. ಜಾರ್ಖಂಡ್‌ನ ಯುವಕರೊಬ್ಬರು ಈ ಘಟನೆಗೆ ಸಾಕ್ಷಿಯಾಗಿದ್ದರು ಮತ್ತು ನನಗೆ ಸಹಾಯ ಮಾಡಿದರು; ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿದೆ. ಹಲ್ಲೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ಉಪ ಆಯುಕ್ತರಿಗೆ (DCP) ತಿಳಿದಿತ್ತು ಮತ್ತು ವಾಹನದಲ್ಲಿದ್ದ ಸಿಬ್ಬಂದಿಗೆ ದೂರವಾಣಿ ಮೂಲಕ ನೀಡಿದ ಸೂಚನೆಯ ಮೇರೆಗೆ ನನ್ನನ್ನು ಬಿಡುಗಡೆ ಮಾಡಲಾಯಿತು ಎಂಬುದು ಅವರಿಗೆ ತಿಳಿದಿತ್ತು. ಸಂಬಂಧಪಟ್ಟ ಮೇಲಧಿಕಾರಿಗಳ ಪಾತ್ರ ಮತ್ತು ಅವರಿಗೆ ಇದ್ದ ಮಾಹಿತಿಯನ್ನೂ ಒಳಗೊಂಡಂತೆ, ಈ ಸಂಪೂರ್ಣ ಘಟನೆಯ ಬಗ್ಗೆ ಸ್ವತಂತ್ರ ತನಿಖೆಯಾಗಬೇಕಾಗಿದೆ.

ಇವು ಗುರುತಿಸಬಹುದಾದ ಸಿಬ್ಬಂದಿ, ಒಂದು ಪೊಲೀಸ್ ವಾಹನ, ಒಂದು ಪತ್ತೆಹಚ್ಚಬಹುದಾದ ಆದೇಶ ಸರಪಳಿ (chain of command) ಮತ್ತು ಪ್ರತ್ಯಕ್ಷದರ್ಶಿಗಳನ್ನು ಒಳಗೊಂಡಿರುವ ದೌರ್ಜನ್ಯದ ನಿರ್ದಿಷ್ಟ ಮತ್ತು ಪರಿಶೀಲಿಸಬಹುದಾದ ಕೃತ್ಯಗಳಾಗಿವೆ. ಪತ್ರಕರ್ತರು ಮತ್ತು ಸ್ಥಳದಲ್ಲಿದ್ದವರು ಮಾಡಿರುವ ಸಂಬಂಧಿತ ದಾಖಲೀಕರಣಗಳನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಈ ಆತಂಕಕಾರಿ ಘಟನೆಯನ್ನು ದಾಖಲಿಸುವ ಮತ್ತು ನನ್ನ ಮೇಲಾದ ಕ್ರೂರ ಹಲ್ಲೆಗೆ ಸಾಕ್ಷಿಯಾಗಿರುವ ಕೆಲವು ಸುದ್ದಿ ವರದಿಗಳ ಲಿಂಕ್‌ಗಳನ್ನು ನಾನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಇವು ಕೇವಲ ಉದಾಹರಣೆಗಳಷ್ಟೇ; ಘಟನೆಗೆ ಸಂಬಂಧಿಸಿದ ಇನ್ನೂ ಅನೇಕ ವರದಿಗಳು ಮತ್ತು ದಾಖಲೀಕರಣಗಳು ಲಭ್ಯವಿವೆ. ಯಾವುದೇ ಸಾಕ್ಷ್ಯವು ಕಳೆದುಹೋಗದಂತೆ ಮತ್ತು ಅಪರಾಧಿಗಳು ಹಾಗೂ ಆದೇಶ ಸರಪಳಿಯಲ್ಲಿ ಜವಾಬ್ದಾರರಾಗಿರುವವರನ್ನು ಹೊಣೆಗಾರರನ್ನಾಗಿಸಲು ಅವುಗಳನ್ನು ತುರ್ತಾಗಿ ಗುರುತಿಸಿ, ಸಂಗ್ರಹಿಸಿ ಸಂರಕ್ಷಿಸಬೇಕಾಗಿದೆ.

ನಾನು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದೆ,  ಯಾವುದೇ ಅಪರಾಧ ಎಸಗುತ್ತಿರಲಿಲ್ಲ. ಮೇಲೆ ವಿವರಿಸಲಾದ ಸನ್ನಿವೇಶದಲ್ಲಿ ನನ್ನ ವಿರುದ್ಧ ದೈಹಿಕ ಹಿಂಸೆಯನ್ನು ಪ್ರಯೋಗಿಸುವುದನ್ನು ಸಮರ್ಥಿಸುವಂತದ್ದು ಏನೂ ಇಲ್ಲ. ಈಗ ನಡೆಯುತ್ತಿರುವ ಪ್ರತಿಭಟನೆಗಳ ಒಟ್ಟಾರೆ ಹಿನ್ನೆಲೆಯಿಂದ ಪ್ರತ್ಯೇಕವಾಗಿ ಈ ಘಟನೆಯನ್ನು ನೋಡಲು ಸಾಧ್ಯವಿಲ್ಲ. ನಿನ್ನೆ, ಕೇರಳದ ಮಾಜಿ ಮುಖ್ಯಮಂತ್ರಿ ಶ್ರೀ ಪಿಣರಾಯಿ ವಿಜಯನ್ ಮತ್ತು ನಾನು ಸೇರಿದಂತೆ ವಿರೋಧ ಪಕ್ಷದ ಹಲವು ನಾಯಕರನ್ನು ದಸ್ತಗಿರಿ ಮಾಡಲಾಗಿತ್ತು. ನಮ್ಮನ್ನು ಎಲ್ಲಿಗೆ ಕರೆದೊಯ್ಯಲಾಗುತ್ತಿದೆ ಅಥವಾ ಈ ನಿರಂತರ ಪ್ರಯಾಣದ ಉದ್ದೇಶವೇನು ಎಂಬುದರ ಬಗ್ಗೆ ಸೂಕ್ತ ಸ್ಪಷ್ಟತೆಯಿಲ್ಲದೆ ದೆಹಲಿಯಾದ್ಯಂತ ಗಂಟೆಗಳ ಕಾಲ ಅಲೆದಾಡಿಸಲಾಯಿತು. ವಶದಲ್ಲಿರುವವರಿಗೆ ಆಹಾರ ಮತ್ತು ಅಗತ್ಯ ಔಷಧಿಗಳನ್ನು ನಿರಾಕರಿಸಿದ ಅಥವಾ ವಿಳಂಬ ಮಾಡಿದ ವಿಷಯದ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಯಿತು. ಈ ಒಟ್ಟು ರಾಜಕೀಯ ಹಿನ್ನೆಲೆಯು ಇಂದಿನ ಘಟನೆಯನ್ನು ವಿಶೇಷವಾಗಿ ಆತಂಕಕಾರಿಯನ್ನಾಗಿಸುತ್ತದೆ.ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವ ಪ್ರಕ್ರಿಯೆಯು ಪ್ರಜಾಸತ್ತಾತ್ಮಕ ಅಣಿನೆರಿಕೆ ಮತ್ತು ರಾಜಕೀಯ ಅಭಿವ್ಯಕ್ತಿಯ ಮೂಲಕ ನಡೆಯುತ್ತಿದೆ. ಈ ಬೇಡಿಕೆಗಳಾಗಲಿ ಅಥವಾ ಸಾರ್ವಜನಿಕ ಸಂಸ್ಥೆಗಳ ಮೇಲಿನ ಟೀಕೆಗಳಾಗಲಿ, ಪ್ರಭುತ್ವವು ಬೆದರಿಕೆ ತಂತ್ರಗಳನ್ನು ಬಳಸಲು ಪರವಾನಗಿ ಎಂದು ಪರಿಗಣಿಸಬಾರದು. ಜಾನ್‌

ಈ ಒಟ್ಟು ರಾಜಕೀಯ ಹಿನ್ನೆಲೆಯು ಇಂದಿನ ಘಟನೆಯನ್ನು ವಿಶೇಷವಾಗಿ ಆತಂಕಕಾರಿಯನ್ನಾಗಿಸುತ್ತದೆ.ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವ ಪ್ರಕ್ರಿಯೆಯು ಪ್ರಜಾಸತ್ತಾತ್ಮಕ ಅಣಿನೆರಿಕೆ ಮತ್ತು ರಾಜಕೀಯ ಅಭಿವ್ಯಕ್ತಿಯ ಮೂಲಕ ನಡೆಯುತ್ತಿದೆ. ಈ ಬೇಡಿಕೆಗಳಾಗಲಿ ಅಥವಾ ಸಾರ್ವಜನಿಕ ಸಂಸ್ಥೆಗಳ ಮೇಲಿನ ಟೀಕೆಗಳಾಗಲಿ, ಪ್ರಭುತ್ವವು ಬೆದರಿಕೆ ತಂತ್ರಗಳನ್ನು ಬಳಸಲು ಪರವಾನಗಿ ಎಂದು ಪರಿಗಣಿಸಬಾರದು.

ಚುನಾವಣಾ ಆಯೋಗದ ಮೇಲಿನ ಟೀಕೆ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹ ಮತ್ತು ಚುನಾವಣಾ ಸಮಗ್ರತೆಯನ್ನು ರಕ್ಷಿಸಲು ನಡೆಸುವ ಶಾಂತಿಯುತ ಸಂಯೋಜನೆಗಳು ಪ್ರಜಾಸತ್ತಾತ್ಮಕ ಚರ್ಚೆಯ ನ್ಯಾಯಸಮ್ಮತ ವಿಷಯಗಳಾಗಿವೆ ಎಂಬುದನ್ನು ಆಡಳಿತಾರೂಢ ಸರ್ಕಾರ ಅರ್ಥಮಾಡಿಕೊಳ್ಳಬೇಕು. ಶಾಂತಿಯುತ ಪ್ರತಿಭಟನೆಯು ಅಧಿಕಾರದಲ್ಲಿರುವವರಿಗೆ ಸವಾಲೊಡ್ಡುತ್ತದೆ ಎಂಬ ಕಾರಣಕ್ಕಾಗಿಯೇ ಅದನ್ನು ಬೆದರಿಕೆ ಎಂದು ಪರಿಗಣಿಸಲಾಗದು. ಅಧಿಕಾರಿಗಳು ಈ ಬೇಡಿಕೆಗಳನ್ನು ಒಪ್ಪಬಹುದು ಅಥವಾ ಒಪ್ಪದಿರಬಹುದು, ಆದರೆ ಅವುಗಳಿಗೆ ದೈಹಿಕ ಹಿಂಸೆಯ ಮೂಲಕ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಸರ್ಕಾರವು ಪ್ರಜಾಪ್ರಭುತ್ವವನ್ನು ಬೆದರಿಕೆಯ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅದು ರಾಜಕೀಯ ಸೇಡಿನ ಸಾಧನವಾಗಿ ಪೊಲೀಸರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ, ತರ್ಕದ ಶಕ್ತಿಗೆ ಬದಲಾಗಿ ಲಾಠಿಯ ಬಲವನ್ನು ಬಳಸಲು ಸಾಧ್ಯವಿಲ್ಲ. ಹಾಗೂ ಅದು ಅಧಿಕಾರಸ್ಥರಿಗೆ  ಭಿನ್ನಮತ  ಅನಾನುಕೂಲಕರವೆಂದು ತೋರುತ್ತದೆ ಎಂಬ ಕಾರಣಕ್ಕಾಗಿಯೇ ಜನರು ತಮ್ಮ ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಬಿಟ್ಟುಕೊಡಬೇಕೆಂದು ನಿರೀಕ್ಷಿಸಲು ಸಾಧ್ಯವಿಲ್ಲ.

ಪೊಲೀಸ್ ದೌರ್ಜನ್ಯವು ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ  ಸಭೆ ಸೇರುವ ಹಕ್ಕನ್ನು ರಕ್ಷಿಸುವ ಸಂವಿಧಾನದ ವಿಧಿ 19(1)(a) ಮತ್ತು 19(1)(b) ಹಾಗೂ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುವ ವಿಧಿ 21ರ ಅಡಿಯಲ್ಲಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತದೆ. ಯಾವುದೇ ನಿರ್ಬಂಧ ಅಥವಾ ಬಂಧನವು ಕಾನೂನುಬದ್ಧ ಆಧಾರವನ್ನು ಹೊಂದಿರಬೇಕು ಮತ್ತು ಬಲಪ್ರಯೋಗವು ಸಮರ್ಥನೀಯ ಹಾಗೂ ಸೂಕ್ತ ಪ್ರಮಾಣದಲ್ಲಿರಬೇಕು. ಕ್ರೂರ ಹಲ್ಲೆ, ನನ್ನನ್ನು ಕರೆದೊಯ್ದ ಸಂದರ್ಭಗಳು ಮತ್ತು ನನ್ನನ್ನು ಬಿಡುಗಡೆ ಮಾಡಿದ ರೀತಿ – ಇವೆಲ್ಲವೂ  ಈ ಸಾಂವಿಧಾನಿಕ ಖಾತರಿಗಳು ಹಾಗೂ ಪೊಲೀಸ್ ನಡವಳಿಕೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಅನ್ವಯವಾಗುವ ಕಾನೂನುಗಳು ಮತ್ತು ನಿಯಮಗಳ ಅಡಿಯಲ್ಲಿ ತುರ್ತು ಪರಿಶೀಲಿಸಬೇಕಾದ ಸಂಗತಿಗಳು.

ಈ ಘಟನೆಯನ್ನು ಸಂಸದೀಯ ಸವಲತ್ತು ಮತ್ತು ಘನತೆಯ ದೃಷ್ಟಿಕೋನದಿಂದಲೂ ಗಂಭೀರವಾಗಿ  ಪರಿಗಣಿಸಬೇಕಾಗುತ್ತದೆ.  ಸಂವಿಧಾನದ ವಿಧಿ 105 ಸಂಸದೀಯ ವಾಕ್ ಸ್ವಾತಂತ್ರ್ಯವನ್ನು ಮತ್ತು ಅದರ ನಿಗದಿತ ವ್ಯಾಪ್ತಿಯೊಳಗೆ ಸಂಸತ್ತಿನ ಸಾಂಸ್ಥಿಕ ಕಾರ್ಯನಿರ್ವಹಣೆಯನ್ನು ರಕ್ಷಿಸುತ್ತದೆ. ಸಂಸತ್‌ ಸದಸ್ಯತ್ವವು ಕಾನೂನಿನಿಂದ ವಿನಾಯಿತಿ ನೀಡುತ್ತದೆ ಎಂದು ನಾನು ಪ್ರತಿಪಾದಿಸುವುದಿಲ್ಲ. ಆದಾಗ್ಯೂ, ಸಾರ್ವಜನಿಕ ಮಹತ್ವದ ವಿಷಯವೊಂದರ ಕುರಿತು ಮಾಧ್ಯಮಗಳೊಂದಿಗೆ ಶಾಂತಿಯುತವಾಗಿ ಸಂವಹನ ನಡೆಸುತ್ತಿರುವಾಗ ಹಾಲಿ ಸದಸ್ಯರೊಬ್ಬರ ಮೇಲೆ ನಡೆಯುವ ದೈಹಿಕ ಹಲ್ಲೆಯು ಗಂಭೀರ ಸಾಂಸ್ಥಿಕ ಪರಿಶೀಲನೆಯನ್ನು ಬಯಸುತ್ತದೆ ಮತ್ತು ಇದು ವಿಶೇಷ ಸವಲತ್ತಿನ ಉಲ್ಲಂಘನೆಯಾಗುತ್ತದೆ. ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಲಾಗಿದೆ; ಅವರು ಕಾನೂನಿಗಿಂತ ಮೇಲಲ್ಲ. ಸಮವಸ್ತ್ರವು ಹಲ್ಲೆ, ಕಾನೂನುಬಾಹಿರ ಬಂಧನ ಅಥವಾ ಅಧಿಕಾರದ ದುರುಪಯೋಗಕ್ಕೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ. ಆದ್ದರಿಂದ, ಕೇಂದ್ರ ಸರ್ಕಾರ ಮತ್ತು ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದಿಂದ ಸಮಗ್ರ ವರದಿಯನ್ನು ಪಡೆಯಲು ಹಾಗೂ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಪ್ರಾರಂಭಿಸುವುದನ್ನು ಖಚಿತಪಡಿಸಿಕೊಳ್ಳಲು ನಾನು ನಿಮ್ಮ ತುರ್ತು ಮಧ್ಯಪ್ರವೇಶವನ್ನು ಕಳಕಳಿಯಿಂದ ಕೋರುತ್ತೇನೆ. ಸಂಪೂರ್ಣ ಮತ್ತು ಸಂಪಾದಿಸದ ವೀಡಿಯೊ ರೆಕಾರ್ಡಿಂಗ್‌ಗಳು, ವಾಹನ ಗುರುತಿಸುವಿಕೆ ಮತ್ತು ಸಂಚಾರದ ದಾಖಲೆಗಳು, ಕರ್ತವ್ಯದ ಪಟ್ಟಿಗಳು (ಡ್ಯೂಟಿ ರೋಸ್ಟರ್‌ಗಳು), ನಿಯೋಜನೆ ಆದೇಶಗಳು, ವೈರ್‌ಲೆಸ್ ಸಂವಹನಗಳು, ನಿಯಂತ್ರಣ ಕೊಠಡಿಯ ದಾಖಲೆಗಳು ಹಾಗೂ ನನ್ನ ಬಂಧನ ಮತ್ತು ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಎಲ್ಲಾ ಸಂಬಂಧಿತ ಸಾಕ್ಷ್ಯಗಳನ್ನು ತಕ್ಷಣವೇ ಸಂರಕ್ಷಿಸಬೇಕಾಗಿದೆ. ಇದರಲ್ಲಿ ಭಾಗಿಯಾಗಿರುವ ಸಿಬ್ಬಂದಿಯ ಗುರುತನ್ನು ವಿಳಂಬವಿಲ್ಲದೆ ಖಚಿತಪಡಿಸಿಕೊಳ್ಳಬೇಕು. ಹಲ್ಲೆಯ ಬಗ್ಗೆ ಮಾಹಿತಿ ಪಡೆದಿದ್ದ ಡಿಸಿಪಿ (DCP) ಮತ್ತು ಇತರ ಮೇಲ್ವಿಚಾರಣಾ ಅಧಿಕಾರಿಗಳ ಪಾತ್ರವನ್ನು ಪರಿಶೀಲಿಸಬೇಕಾಗಿದೆ. ಹೊಣೆಗಾರರೆಂದು ಕಂಡುಬರುವವರು – ಇದರಲ್ಲಿ ಶಾಮೀಲಾಗಿರುವ ಅಥವಾ ಕರ್ತವ್ಯ ಲೋಪವೆಸಗಿರುವ ಮೇಲ್ವಿಚಾರಣಾ ಅಧಿಕಾರಿಗಳೂ ಸೇರಿದ್ದಾರೆ – ಕಾನೂನಿನ ಪ್ರಕಾರ ಸೂಕ್ತ ಶಿಸ್ತುಕ್ರಮ ಮತ್ತು ಕ್ರಿಮಿನಲ್ ಕ್ರಮಗಳನ್ನು ಎದುರಿಸಲೇಬೇಕು.

ಶಾಂತಿಯುತ ಪ್ರತಿಭಟನೆಯು ಅಧಿಕಾರದಲ್ಲಿರುವವರಿಗೆ ಸವಾಲೊಡ್ಡುತ್ತದೆ ಎಂಬ ಕಾರಣಕ್ಕಾಗಿಯೇ ಅದನ್ನು ಬೆದರಿಕೆ ಎಂದು ಪರಿಗಣಿಸಲಾಗದು.ಸರ್ಕಾರವು ಪ್ರಜಾಪ್ರಭುತ್ವವನ್ನು ಬೆದರಿಕೆಯ ಮೂಲಕ ಮೌನಗೊಳಿಸಲು ಸಾಧ್ಯವಿಲ್ಲ. ಅದು ರಾಜಕೀಯ ಸೇಡಿನ ಸಾಧನವಾಗಿ ಪೊಲೀಸರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ, ತರ್ಕದ ಶಕ್ತಿಗೆ ಬದಲಾಗಿ ಲಾಠಿಯ ಬಲವನ್ನು ಬಳಸಲು ಸಾಧ್ಯವಿಲ್ಲ.

ದೈಹಿಕ ಅವಮಾನಕ್ಕೆ ಒಳಗಾದ ವ್ಯಕ್ತಿಯಾಗಿ ಮಾತ್ರವಲ್ಲದೆ, ನಮ್ಮ ಗಣರಾಜ್ಯದ ಮೇಲೆ ಇಂತಹ ನಡವಳಿಕೆಯು ಬೀರಬಹುದಾದ ಪರಿಣಾಮಗಳ ಬಗ್ಗೆ ತೀವ್ರ ಕಳವಳ ಹೊಂದಿರುವ ಸಂಸದನಾಗಿಯೂ ನಾನು ಈ ದೂರು ಸಲ್ಲಿಸುತ್ತಿದ್ದೇನೆ. ಮಾಧ್ಯಮಗಳೊಂದಿಗೆ ಶಾಂತಿಯುತವಾಗಿ ಸಂವಹನ ನಡೆಸುತ್ತಿದ್ದಾಗ, ಸಂಸದನೆಂದು ಗುರುತಿಸಿಕೊಂಡ ನಂತರವೂ ಒಬ್ಬ ಚುನಾಯಿತ ಪ್ರತಿನಿಧಿಯನ್ನೇ ಥಳಿಸಿ ರಸ್ತೆಬದಿಯಲ್ಲಿ ಬಿಟ್ಟುಹೋಗಬಹುದಾದರೆ, ಪ್ರಭುತ್ವದ  ಅಧಿಕಾರದ ನಿರಂಕುಶ ಬಳಕೆ ಎದುರಾದಾಗ ಸಾಮಾನ್ಯ ನಾಗರಿಕರು ಯಾವ ರಕ್ಷಣೆಯನ್ನು ನಿರೀಕ್ಷಿಸಲು ಸಾಧ್ಯ? ಇದು ಸಂಸದರಿಗೆ ವಿಶೇಷ ಸವಲತ್ತು ಬೇಕೆಂಬ ಆಗ್ರಹವಲ್ಲ. ಬದಲಾಗಿ, ಕಾನೂನು ಎಲ್ಲರನ್ನೂ ಸಮಾನವಾಗಿ ರಕ್ಷಿಸಬೇಕು ಮತ್ತು ಅದನ್ನು ಜಾರಿಗೊಳಿಸುವವರು ಅದಕ್ಕೆ ಬದ್ಧರಾಗಿರಬೇಕು ಹಾಗೂ ಹೊಣೆಗಾರರಾಗಿರಬೇಕು ಎಂಬ ಆಗ್ರಹವಾಗಿದೆ. ಪ್ರಜಾಪ್ರಭುತ್ವದ ಶಕ್ತಿಯಿರುವುದು ಭಿನ್ನಮತವನ್ನು  ದಮನಿಸುವ ಸಾಮರ್ಥ್ಯದಲ್ಲಿ ಅಲ್ಲ, ಬದಲಾಗಿ ಅದನ್ನು ಆಲಿಸಿ ಪರಿಹರಿಸುವ ಸಾಮರ್ಥ್ಯದಲ್ಲಿದೆ.

ಆದ್ದರಿಂದ, ನನ್ನ ಮೇಲಿನ ಪೊಲೀಸ್ ಹಲ್ಲೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯುವುದನ್ನು, ಎಲ್ಲಾ ಸಂಬಂಧಿತ ಸಾಕ್ಷ್ಯಗಳನ್ನು ಸಂರಕ್ಷಿಸುವುದನ್ನು, ಹೊಣೆಗಾರಿಕೆಯನ್ನು ನಿಗದಿಪಡಿಸುವುದನ್ನು ಮತ್ತು ತಪ್ಪಿತಸ್ಥರೆಂದು ಕಂಡುಬರುವ ಎಲ್ಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಾನು ಮತ್ತೊಮ್ಮೆ ನಿಮ್ಮ ತುರ್ತು ಮಧ್ಯಪ್ರವೇಶವನ್ನು ಕಳಕಳಿಯಿಂದ ಕೋರುತ್ತೇನೆ. ಸಾಕ್ಷಿಗಳನ್ನು ಒದಗಿಸಬಹುದಾದ ವ್ಯಕ್ತಿಗಳು ಅಥವಾ ಇತರರ ವಿರುದ್ಧ ಯಾವುದೇ ರೀತಿಯ ಪ್ರತೀಕಾರದ ಕ್ರಮಗಳನ್ನು ತಡೆಯಲು ಪರಿಣಾಮಕಾರಿ ರಕ್ಷಣಾ ಕ್ರಮಗಳನ್ನು ಜಾರಿಗೆ ತರುವಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಬೇಕೆಂದು ನಾನು ಇದೇ ವೇಳೆ ಕೋರುತ್ತೇನೆ.”

 

ಫೋಟೋ ಕೃಪೆ: ಲೆಫ್ಟ್‌ವ್ಯೂಸ್

ಇದನ್ನೂ ನೋಡಿ : SIR ಹೋರಾಟ | ಪ್ರಜಾಪ್ರಭುತ್ವಕ್ಕೆ ಬೀಗ ಹಾಕಿದ ಕೇಂದ್ರ! ತಡೆಗೋಡೆ ಭೇದಿಸಿ ಬೀದಿಗಿಳಿದ Gen Z

Donate Janashakthi Media

Leave a Reply

Your email address will not be published. Required fields are marked *