ಸಿನಿಮಾ ಕ್ಷೇತ್ರದಲ್ಲಿ ತಮ್ಮ ಕಲೆಗಾರಿಕೆಗೆ ವಿಶ್ವಮನ್ನಣೆ ಪಡೆದ ಭಾರತದ ತ್ರಿವಳಿ ನಿರ್ದೇಶಕರಲ್ಲಿ ಋತ್ವಿಕ್ ಘಟಕ್ ಕಿರಿಯರು. 2026-27ರಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ತ್ರಿವಳಿಯಲ್ಲಿ ಉಳಿದಿಬ್ಬರು – ಸತ್ಯಜಿತ್ ರೇ ಮತ್ತು ಮೃಣಾಲ್ ಸೆನ್ – ಅವರ ಜನ್ಮ ಶತಮಾನೋತ್ಸವಗಳು ಕಳೆದ ಕೆಲವು ವರ್ಷಗಳಲ್ಲಿ ಆಚರಿಸಲಾಗಿದೆ.
ಋತ್ವಿಕ್ ಘಟಕ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ಅಂಗವಾಗಿ ಜನಶಿಕ್ಷಣ ಟ್ರಸ್ಟ್ “ನೂರರ ನಮನ – ಇಂದಿಗೆ ಋತ್ವಿಕ್ ಘಟಕ್” ವೆಬಿನಾರ್ ಸರಣಿಯನ್ನು ಹಮ್ಮಿಕೊಂಡಿದೆ. ಈ ಸರಣಿಯ ನಾಲ್ಕನೆಯ ಉಪನ್ಯಾಸವನ್ನು ಖ್ಯಾತ ಫಿಲಂ ಪರಿಣಿತರು, ಲೇಖಕರು ಶ್ರೀಪಾದ ಭಟ್ ಅವರು ಮಾಡಲಿದ್ದಾರೆ. ಈ ಉಪನ್ಯಾಸವನ್ನು ಝೂಮ್ ನಲ್ಲಿ ಇಂದೇ (ಅಂದರೆ ಸೆಪ್ಟೆಂಬರ್ 26, 2026 ಶನಿವಾರ ಸಂಜೆ 6.00 ಕ್ಕೆ ) ಹಮ್ಮಿಕೊಳ್ಳಲಾಗಿದೆ. ಉಪನ್ಯಾಸದ ವಿಷಯ “ವಿಭಜನೆ ಮತ್ತು ವಲಸಿಗರ ತ್ರಿವಳಿ” ಆಗಿರುತ್ತದೆ. ಉಪನ್ಯಾಸದ ನಂತರದ ಸಂವಾದ ನಿರ್ವಹಣೆಯನ್ನು ಫಿಲಂ ಪರಿಣತ ಕೆ.ಫಣಿರಾಜ್ ಮಾಡುತ್ತಾರೆ.
ದೇಶ ವಿಭಜನೆ ಮತ್ತು ಅದು ಸೃಷ್ಟಿಸಿದ ಭೀಕರ ವಲಸಿಗರ ಸಮಸ್ಯೆ ಘಟಕ್ ಅವರನ್ನು ಬಹುವಾಗಿ ಕಾಡಿದ ಥೀಮ್. ಅದು ಅವರ ಎಲ್ಲ ಫಿಲಂಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತವಾಗುತ್ತದೆ. ಮೇಘೆ ಡಾಕಾ ತಾರಾ, ಕೋಮಲ ಗಾಂಧಾರ, ಸುಬರ್ಣರೇಖಾ – ಅವರ ಈ ಮೂರು ಫಿಲಂಗಳನ್ನು ‘ವಿಭಜನಾ ತ್ರಿವಳಿ” ಎಂದು ಗುರುತಿಸಲಾಗುತ್ತದೆ. ಉಪನ್ಯಾಸ-ಸಂವಾದಕ್ಕೆ ಭಾಗವಹಿಸಲು ಮೊದಲು ಈ ಮೂರು ಫಿಲಂಗಳನ್ನು ನೋಡಲು ಕೋರಲಾಗಿದೆ. ಈ ಫಿಲಂಗಳ ಆನ್-ಲೈನ್ ಲಭ್ಯತೆ ವಿವರಗಳು ಈ ಕೆಳಗಿವೆ.
ಜನಶಿಕ್ಷಣ ಟ್ರಸ್ಟ್ ಎಲ್ಲ ಫಿಲಂ ಆಸಕ್ತರನ್ನು ಈ ವೆಬಿನಾರಿನಲ್ಲಿ ಭಾಗವಹಿಸಲು ಆಹ್ವಾನಿಸುತ್ತಿದೆ.
ಙೂಮ್ ಸಭೆ ಸೇರಿಕೊಳ್ಳಲು ಈ ಲಿಂಕ್ ಒತ್ತಬಹುದು
https://us06web.zoom.us/j/83338422636?pwd=QQJsfyFHE8VXqkfUOpmzYGrL0JGImF.1
ಅಥವಾ ಈ ಕೆಳಗಿನ ವಿವರಗಳನ್ನು ಬಳಸಬಹುದು
Meeting ID 833 3842 2636
Passcode 419393
‘ಮೇಘೆ ಡಾಕಾ ತಾರಾ’ ವಿಡಿಯೊ ಯೂಟ್ಯೂಬ್ (ಸಬ್ ಟೈಟಲ್ ರಹಿತ) ಮತ್ತು ಅಮೆಜಾನ್ ಪ್ರೈಮ್ ನಲ್ಲಿ ಈ ಲಿಂಕ್ ನಲ್ಲಿದೆ
https://www.youtube.com/watch?v=zl4Vj0u_eg0
https://www.primevideo.com/detail/0SGFKYU342TCIGRZSJI3S6OD6A
‘ಕೋಮಲ ಗಾಂಧಾರ’ ವಿಡಿಯೊ ಯೂಟ್ಯೂಬ್ ನಲ್ಲಿ ಈ ಲಿಂಕ್ ನಲ್ಲಿದೆ
https://www.youtube.com/watch?v=C6K5-TLMtZ4
“ಸುಬರ್ಣರೇಖಾ” ವಿಡಿಯೊ ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಮ್ ನಲ್ಲಿ ಈ ಲಿಂಕ್ ನಲ್ಲಿದೆ
https://www.youtube.com/watch?v=IMDPtSBplkU
https://www.primevideo.com/detail/0NYIYCH471XR8UNA5043I8H9VG
ಈ ವೆಬಿನಾರ್ ಸರಣಿಯ ಮೊದಲ ಮತ್ತು ಉದ್ಗಾಟನಾ ಉಪನ್ಯಾಸ 1 ಈ ಲಿಂಕ್ ನಲ್ಲಿದೆ. ಘಟಕ್ ಅವರ ಮತ್ತು ಫಿಲಂ ಗಳ ಪರಿಚಯ, ಮಹತ್ವದ ಬಗ್ಗೆ ಫಿಲಂ ಪರಿಣತ ವಿದ್ಯಾಶಂಕರ್ ಮಾತಾಡಿದ್ದಾರೆ
https://www.youtube.com/live/ASVaEqAJx00?si=hnOTWe5tyosp5Ncu
