ಮತದಾರರ ಪಟ್ಟಿಯಿಂದ ಹೆಸರು ಮರುಸೇರ್ಪಡೆಗೆ ಆಗ್ರಹ: ಸಿಇಒ ಕಚೇರಿಗೆ AIDWA ಮೆರವಣಿಗೆ

ಕೊಲ್ಕತ್ತಾ: ಮತದಾರರ ಪಟ್ಟಿಯಿಂದ ಕೈಬಿಡಲಾಗಿರುವ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘಟನೆ (AIDWA) ಪಶ್ಚಿಮ ಬಂಗಾಳ ಘಟಕ ಶುಕ್ರವಾರ ಕೊಲ್ಕತ್ತಾದಲ್ಲಿ ಪ್ರತಿಭಟನೆ ನಡೆಸಿತು. ಧರ್ಮತಲಾದ ಲೆನಿನ್‌ ಪ್ರತಿಮೆ ಬಳಿಯಿಂದ ಸಿಇಒ ಕಚೇರಿಯತ್ತ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮತದಾರರ 

‘ಮತದಾರರ ಪಟ್ಟಿಯಲ್ಲಿ ನನ್ನ ಹೆಸರು ಮರಳಿ ಸೇರಿಸಿ’ ಎಂಬ ಘೋಷಣೆಯೊಂದಿಗೆ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಹಾಗೂ ಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರು ಭಾಗವಹಿಸಿದರು. SIR ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿವೆ ಎಂದು AIDWA ಆರೋಪಿಸಿದ್ದು, ಅಂತಹ ಎಲ್ಲ ಹೆಸರುಗಳನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿತು.

AIDWA ರಾಜ್ಯ ಕಾರ್ಯದರ್ಶಿ ಮೊನಾಲಿಸಾ ಸಿನ್ಹಾ, SIR ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಲಿಲ್ಲ ಎಂದು ಆರೋಪಿಸಿದರು. ಸಂಘಟನೆಯ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸುಮಾರು 27 ಲಕ್ಷ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿದಿದ್ದು, ಅವರಲ್ಲಿ ಶೇ.63ರಷ್ಟು ಮಹಿಳೆಯರು ಇದ್ದಾರೆ. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೂ ಪ್ರಸ್ತುತ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ ಹಲವು ಪ್ರಕರಣಗಳು ತಮ್ಮ ಸಮೀಕ್ಷೆಯಲ್ಲಿ ಪತ್ತೆಯಾಗಿವೆ ಎಂದು ಅವರು ಹೇಳಿದರು. ಮತದಾರರ 

ಇದನ್ನೂ ಓದಿ :ತುಮಕೂರಿನ ಮುಸ್ಲಿಂ ಕಾಲೋನಿಗೆ ಪ್ರಕಾಶ್‌ ರೈ ಭೇಟಿ: SIR ಸಮಸ್ಯೆ ಆಲಿಕೆ

SIR ಪ್ರಕ್ರಿಯೆ ಕುರಿತು ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿರುವ ವರದಿಗಳನ್ನು ಉಲ್ಲೇಖಿಸಿದ AIDWA ನಾಯಕರು, ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಚುನಾವಣಾ ಪ್ರಕ್ರಿಯೆಯ ಕುರಿತು ಪ್ರಶ್ನೆಗಳು ಉದ್ಭವಿಸಿವೆ ಎಂದು ಹೇಳಿದರು. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್‌ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದರು.

SIR ಜಾರಿಯ ಸಂದರ್ಭದಲ್ಲಿ ಅಕ್ರಮ ಹಾಗೂ ಅಸ್ಪಷ್ಟತೆ ಕುರಿತು ಅಂದಿನ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಅಗರ್ವಾಲ್‌ ಅವರಿಗೂ ಹಲವು ಬಾರಿ ದೂರು ನೀಡಿದ್ದರೂ, ದೂರುಗಳಿಗೆ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಮೊನಾಲಿಸಾ ಸಿನ್ಹಾ ಆರೋಪಿಸಿದರು. ಈ ವಿಚಾರದಲ್ಲಿಯೂ ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿಇಒ ಕಚೇರಿ ಎದುರು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.

ಇದನ್ನೂ ನೋಡಿ : ಮತ ಹಾಕಿದವರ ಮತ ಕಸಿದು, ಜೀವಂತ ವ್ಯಕ್ತಿಯನ್ನೇ ‘ಕೊಂದ’ SIR! Janashakthi Media

 

Donate Janashakthi Media

Leave a Reply

Your email address will not be published. Required fields are marked *