ಡಿವೈಎಫ್‌ಐ ಉಳ್ಳಾಲ ತಾಲೂಕು ಸಮ್ಮೇಳನ: ನೂತನ ತಾಲೂಕು ಸಮಿತಿ ರಚನೆ

ಮಂಗಳೂರು: ಡಿವೈಎಫ್‌ಐನ 16ನೇ ಉಳ್ಳಾಲ ತಾಲೂಕು ಸಮ್ಮೇಳನವು ಆಗಸ್ಟ್ 9ರಂದು ಮುಡಿಪುವಿನ ಮಂಟಮೆ ಹಾಲ್‌ನಲ್ಲಿ ನಡೆಯಿತು. ಮುಡಿಪು ಜಂಕ್ಷನ್‌ನಿಂದ ಮಂಟಮೆ ಹಾಲ್‌ವರೆಗೆ ಆಕರ್ಷಕ ರ್ಯಾಲಿ ನಡೆಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಡಿವೈಎಫ್‌ಐ 

ಕೇರಳದ ಡಿವೈಎಫ್‌ಐ ಮಾಜಿ ಮುಖಂಡ ಡಾ. ವಿ.ಪಿ.ಪಿ. ಮುಸ್ತಫಾ ಸಮ್ಮೇಳನವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮುಡಿಪು ವಲಯದ ನಾಲ್ಕು ಸರ್ಕಾರಿ ಪ್ರೌಢಶಾಲೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಉದ್ಘಾಟನಾ ಸಮಾರಂಭದ ಬಳಿಕ ಪ್ರತಿನಿಧಿ ಅಧಿವೇಶನ ನಡೆಯಿತು. 100ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದ ಅಧಿವೇಶನದಲ್ಲಿ ಕಳೆದ ಮೂರು ವರ್ಷಗಳ ಸಂಘಟನೆಯ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಯಿತು.

ಏಳು ಪ್ರಮುಖ ನಿರ್ಣಯ

ಸಮ್ಮೇಳನದಲ್ಲಿ ಉಳ್ಳಾಲ ತಾಲೂಕಿಗೆ ಸಂಬಂಧಿಸಿದಂತೆ ಏಳು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು, ಸ್ಥಳೀಯ ಕಂಪನಿಗಳಲ್ಲಿ ಸ್ಥಳೀಯ ಯುವಕರಿಗೆ ಭದ್ರತೆಯ ಉದ್ಯೋಗ ಕಲ್ಪಿಸುವುದು, ತಾಲೂಕು ಆಸ್ಪತ್ರೆಯನ್ನು ಶೀಘ್ರ ಸ್ಥಾಪಿಸುವುದು, ತಾಲೂಕಿಗೊಂದು ಸಂಚಾರಿ ಪೊಲೀಸ್ ಠಾಣೆ ಸ್ಥಾಪಿಸುವುದು, ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನು ಉಳಿಸುವುದು, ಮಿನಿ ವಿಧಾನಸೌಧ ನಿರ್ಮಿಸುವುದು ಹಾಗೂ ಸುಸಜ್ಜಿತ ಕ್ರೀಡಾಂಗಣ ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸುವಂತೆ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲಾಯಿತು. ಡಿವೈಎಫ್‌ಐ 

ಇದನ್ನೂ ನೋಡಿ : ಪುರೋಹಿತಶಾಹಿ ಆರೆಸ್ಸೆಸ್ ನ ಖೆಡ್ಡಾ ಕುರಿತು ಮೈಯೆಲ್ಲಾ ಕಣ್ಣಾಗಿರಿ ಜೆನ್ ಜಿಗಳೇ… Janashakthi Media

ನೂತನ ತಾಲೂಕು ಸಮಿತಿ

ಸಮ್ಮೇಳನದಲ್ಲಿ ಒಟ್ಟು 31 ಸದಸ್ಯರ ನೂತನ ಉಳ್ಳಾಲ ತಾಲೂಕು ಸಮಿತಿಯನ್ನು ರಚಿಸಲಾಯಿತು.

  • ಅಧ್ಯಕ್ಷರು: ಅಡ್ವೊಕೇಟ್ ನಿತಿನ್ ಕುತ್ತಾರ್
  • ಕಾರ್ಯದರ್ಶಿ: ರಿಝ್ವಾನ್ ಹರೇಕಳ
  • ಕೋಶಾಧಿಕಾರಿ: ರಝಾಕ್ ಮುಡಿಪು
  • ಉಪಾಧ್ಯಕ್ಷರು: ಸುನೀಲ್ ತೇವುಲ, ಅಶ್ಫಾಕ್ ಅಲೇಕಲ, ರಝಾಕ್ ಮೊಂಟೆಪದವು
  • ಜೊತೆ ಕಾರ್ಯದರ್ಶಿಗಳು: ಮಿಥುನ್ ಕಂಪ ಕುತ್ತಾರ್, ಸರ್ಫರಾಝ್ ಗಂಡಿ, ಸಂಕೇತ್ ಕುತ್ತಾರ್, ಖಾಲಿದ್ ಪಂಜಿಮಾಡಿ

ಸಮ್ಮೇಳನವು ಸಂಘಟನೆಯ ಮುಂದಿನ ಹಂತದ ಕಾರ್ಯಚಟುವಟಿಕೆಗಳು ಹಾಗೂ ಉಳ್ಳಾಲ ತಾಲೂಕಿನ ಯುವಜನರ ಪ್ರಮುಖ ಸಮಸ್ಯೆಗಳ ಕುರಿತು ಹೋರಾಟ ರೂಪಿಸುವ ಸಂಕಲ್ಪದೊಂದಿಗೆ ಮುಕ್ತಾಯಗೊಂಡಿತು.

ಇದನ್ನೂ ಓದಿ : ಯುಪಿಐ ವಿಚಾರದಲ್ಲಿ ಅಮೆರಿಕದ ಒತ್ತಡ: ನಿರ್ಮಲಾ ವಿರುದ್ಧ ಬ್ರಿಟ್ಟಾಸ್ ಆರೋಪ

Donate Janashakthi Media

Leave a Reply

Your email address will not be published. Required fields are marked *