ʼತೆಹಲ್ಕಾʼ ಪತ್ರಿಕೆಯ ಸಂಸ್ಥಾಪಕ ತರುಣ್ ತೇಜ್ಪಾಲ್ ೨೦೧೩ರಲ್ಲಿ ಅವರ ಸಂಸ್ಥೆಯಲ್ಲಿ ಆಗ ಉದ್ಯೋಗಿಯಾಗಿದ್ದ ಯುವತಿಯ ಮೇಲೆ ಅತ್ಯಾಚಾರ ಮತ್ತು ಇತರ ಲೈಂಗಿಕ ಅಪರಾಧಗಳಲ್ಲಿ ತಪ್ಪಿತಸ್ಥರೆಂದು ಮುಂಬೈ ಹೈಕೋರ್ಟ್ ಈಗ ತೀರ್ಪು ನೀಡಿದೆ. ಇದನ್ನು ಹಿರಿಯ ಮಹಿಳಾ ಹಕ್ಕುಗಳ ಹೋರಾಟಗಾರರೂ ಮತ್ತು ಮಾಜಿ ಸಿಪಿಐ(ಎಂ) ರಾಜ್ಯ ಸಭಾ ಸದಸ್ಯರೂ ಆಗಿರುವ ಬೃಂದಾ ಕಾರಟ್ ಸ್ವಾಗತಿಸಿದ್ದಾರೆ. 13
ನ್ಯಾಯ ಸಿಗಲು 13 ವರ್ಷಗಳು ಬೇಕಾಯಿತು ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತ ಈ ಪ್ರಕರಣದಲ್ಲಿ ಎರಡು ಭಯಾನಕ ಸಂಗತಿಗಳಿವೆ ಎಂದು ವಿಶ್ಲೇಷಿಸಿದ್ದಾರೆ.
ಮೊದಲನೆಯದಾಗಿ, ನ್ಯಾಯ ಪಡೆಯಲು ಪ್ರಯತ್ನಿಸುವ ಸಂಪೂರ್ಣ ಪ್ರಕ್ರಿಯೆಯು ದೂರುದಾರರ ಮೇಲೆ ತುಂಬಾ ಹೊರೆಯಾಗಿತ್ತು ಏಕೆಂದರೆ ಆಕೆಯನ್ನೇ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅಪರಾಧಕ್ಕೆ ಯಾವುದೇ ಸಂಬಂಧವಿಲ್ಲದ, ಆಕೆಯ ಸ್ವಂತ ನಡವಳಿಕೆಯ ಇತಿಹಾಸಕ್ಕೆ ಮತ್ತು ಇತ್ಯಾದಿಗಳಿಗೆ ಅತ್ಯಂತ ಆಕ್ಷೇಪಾರ್ಹ ಪ್ರಶ್ನೆಗಳನ್ನು ಕೇಳಲು ಅನುಮತಿ ನೀಡಲಾಯಿತು. ದೂರುದಾರರನ್ನೇ ಈ ರೀತಿ ವಿಚಾರಣೆ ಮಾಡುವ ಅಗತ್ಯ ನ್ಯಾಯಾಲಯಕ್ಕೆ ಏನಿತ್ತು ಎಂದು ಪ್ರಶ್ನಿಸಿರುವ ಬೃಂದಾ ಕಾರಟ್ , ಇದು ಯಾವುದೇ ದೂರುದಾರರು ತನ್ನ ಬಾಸ್ ಎದುರು ಧೈರ್ಯವನ್ನು ತೋರಿಸುವುದನ್ನು ಸಂಪೂರ್ಣವಾಗಿ ನಿರುತ್ಸಾಹಗೊಳಿಸುತ್ತದೆ ಎನ್ನುತ್ತಾರೆ.
ಇದನ್ನೂ ಓದಿ : ಗ್ರಾಮ ಕಾಯಕ ಮಿತ್ರರ ಪ್ರತಿಭಟನೆ: 9 ಬೇಡಿಕೆಗಳ ಈಡೇರಿಕೆಗೆ ಶೀಘ್ರ ಕ್ರಮ – ಸರ್ಕಾರದ ಭರವಸೆ
ಎರಡನೆಯದಾಗಿ, ಇದು ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ಅಭಯ ನೀಡುವ ಪ್ರಕ್ರಿಯೆಯೂ ಆಗಿದೆ. ಆದರೂ “ಈ ತೀರ್ಪು ಈಗ ಬಂದಿರುವುದು ಒಳ್ಳೆಯದು ಮತ್ತು ಮಹಿಳಾ ಕುಸ್ತಿಪಟುಗಳ ಪ್ರಕರಣದಲ್ಲೂ ಇದು ಸಂಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದರಲ್ಲಿಯೂ ಅಭಯ ಹಸ್ತ ಪಡೆದಿರುವ ಒಬ್ಬ ವ್ಯಕ್ತಿಯನ್ನು ಕೆಳ ನ್ಯಾಯಾಲಯವು ತರುಣ್ ತೇಜಪಾಲ್‌ರನ್ನು ಈ ಮೊದಲು ಖುಲಾಸೆಗೊಳಿಸಿದಂತೆಯೇ ಖುಲಾಸೆಗೊಳಿಸಿದೆ. ಹಾಗಾಗಿ ಮಹಿಳಾ ಕುಸ್ತಿಪಟುಗಳ ಪ್ರಕರಣದಲ್ಲೂ ನ್ಯಾಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಬೃಂದಾ ಕಾರಟ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ : ASDDO Shock! | ನಿಮ್ಮ ವೋಟ್ ಡಿಲೀಟ್ ಆಗುತ್ತದೆಯೇ? SIR ಅಸಲಿಯತ್ತು ಏನು? Janashakthi Media
