ಬೆಂಗಳೂರು: ನಗರದಲ್ಲಿ ಆಹಾರ ಸುರಕ್ಷತಾ ಇಲಾಖೆ ಹೋಟೆಲ್ಗಳು ಮತ್ತು ಆಹಾರ ಮಳಿಗೆಗಳ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದ್ದು, ಇತ್ತೀಚಿನ ಪರಿಶೀಲನೆಗಳಲ್ಲಿ 132 ಕೆಜಿ ಆಹಾರ ಪದಾರ್ಥಗಳು ಮತ್ತು 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಬೆಂಗಳೂರು
ಪರಿಶೀಲನೆ ವೇಳೆ ಅನೇಕ ಹೋಟೆಲ್ಗಳಲ್ಲಿ ಕುಲುಷಿತ ಮಾಂಸ, ಮೀನು, ತರಕಾರಿ ಸೇರಿದಂತೆ ಹಾಳಾಗಿದ್ದ ಆಹಾರ ಪದಾರ್ಥಗಳು ಪತ್ತೆಯಾಗಿವೆ.
ಯುಬಿ ಸಿಟಿಯ 16ನೇ ಮಹಡಿಯಲ್ಲಿ ಇರುವ ಸ್ಕೈ ಲೌಂಜ್ನಲ್ಲಿ ಅಶುದ್ಧ ಪರಿಸ್ಥಿತಿ ಕಂಡುಬಂದ ಹಿನ್ನೆಲೆಯಲ್ಲಿ ಅಡುಗೆಮನೆ ಮುಚ್ಚಲಾಗಿದೆ. ಅಲ್ಲದೆ, ಫಂಗಸ್ ಹಿಡಿದಿದ್ದ ಕುಲುಷಿತ ಮಾಂಸ ಮತ್ತು ಬೀಫ್ ಪತ್ತೆಯಾಗಿದೆ. ಸುಮಾರು 10 ದಿನಗಳ ಹಿಂದೆ ಅವಧಿ ಮುಗಿದ ಹಾಲು ಮತ್ತು ಮೊಸರು ಸಹ ಅಧಿಕಾರಿಗಳ ಕೈಗೆ ಸಿಕ್ಕಿವೆ.
ಇದನ್ನೂ ಓದಿ: ಮೀನುಗಾರರ ಶೋಧದಲ್ಲಿ ವಿಳಂಬ: ಕೇರಳ ಸರ್ಕಾರದ ವಿರುದ್ಧ ಆಕ್ರೋಶ
ಹೋಟೆಲ್ ಸ್ಕೈ (ಯುಬಿ ಸಿಟಿ)ಯಲ್ಲಿ 45 ಕೆಜಿ ಕುಲುಷಿತ ಕೋಳಿ ಮತ್ತು ಬೀಫ್, ಜೊತೆಗೆ 6 ಕೆಜಿ ತರಕಾರಿ ಕಟ್ಲೆಟ್ಗಳನ್ನು ಪತ್ತೆಹಚ್ಚಲಾಗಿದೆ. ಅಲ್ಲದೆ 15 ಲೀಟರ್ ಬಳಸಿದ ಅಡುಗೆ ಎಣ್ಣೆಯನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 51 ಕೆಜಿ ಆಹಾರ ಪದಾರ್ಥಗಳನ್ನು ಸೇವನೆಗೆ ಅಯೋಗ್ಯವೆಂದು ಘೋಷಿಸಿ ನಿಯಮಾನುಸಾರ ನಾಶಪಡಿಸಲಾಗಿದೆ. ಬೆಂಗಳೂರು
ರಾಯಲ್ ಚೈನ್ ಹೋಟೆಲ್ನಲ್ಲಿ 50 ಕೆಜಿ ಬಾತುಕೋಳಿ ಮಾಂಸ ಮತ್ತು 5 ಕೆಜಿ ಮೀನು ವಶಪಡಿಸಿಕೊಂಡು ಒಟ್ಟು 55 ಕೆಜಿ ಆಹಾರವನ್ನು ನಾಶಪಡಿಸಲಾಗಿದೆ.

ಮದ್ರಾಸ್ ಕಿಚನ್ನಲ್ಲಿ 5 ಕೆಜಿ ಹಸಿರು ಬಟಾಣಿ, ಟೆಸ್ಕಾನ್ ಹೋಟೆಲ್ನಲ್ಲಿ 5 ಕೆಜಿ ಅಣಬೆಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಂಚೆಝ್ ಹೋಟೆಲ್ನಲ್ಲಿ 3 ಕೆಜಿ ಮೀನು, 7 ಕೆಜಿ ಕೇಕ್, ಆಲೂಗಡ್ಡೆ ಮತ್ತು ಟಾಕೋಗಳನ್ನು ನಾಶಪಡಿಸಲಾಗಿದೆ.
ನಗರದಲ್ಲಿ ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ಸುರಕ್ಷತೆ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ವಿಭಾಗವು ತಪಾಸಣೆಗಳನ್ನು ಹೆಚ್ಚಿಸಿದೆ.
ಇದಕ್ಕೂ ಮೊದಲು ನಡೆದ ವಿಶೇಷ ದಾಳಿಯಲ್ಲಿ 30 ತಂಡಗಳು 26 ಮೂರು ನಕ್ಷತ್ರ ಮತ್ತು ಐದು ನಕ್ಷತ್ರ ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸಿ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿತ್ತು. ಅವಧಿ ಮೀರಿದ ಆಹಾರ, ಫಂಗಸ್ ಬೆಳವಣಿಗೆ, ಅಶುದ್ಧ ಸಂಗ್ರಹಣೆ ಮತ್ತು ಹ್ಯಾಂಡ್ಲಿಂಗ್ ಸೇರಿದಂತೆ ಹಲವು ಉಲ್ಲಂಘನೆಗಳು ಪತ್ತೆಯಾಗಿದ್ದವು.
ಇದನ್ನೂ ನೋಡಿ: ನಾಲ್ಕು ದಶಕಗಳ ಕೋಮುವಾದ: ಕಾನೂನು ಸುವ್ಯವಸ್ಥೆಯ ವೈಫಲ್ಯ ಮತ್ತು ಮುಂದಿನ ದಾರಿ | ನವೀನ್ ಸೂರಿಂಜೆ, ಪತ್ರಕರ್ತರು
