ಆಂಧ್ರಪ್ರದೇಶದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: 45 ಲಕ್ಷ ಹೆಸರುಗಳು ಕೈಬಿಟ್ಟ ಈಸಿಐ

ಜುಲೈ 31ರಿಂದ ಆಕ್ಷೇಪಣೆಗಳಿಗೆ ಅವಕಾಶ: ಅಂತಿಮ ಪಟ್ಟಿ ಅಕ್ಟೋಬರ್ 3ಕ್ಕೆ ಪ್ರಕಟ
ನವದೆಹಲಿ: ಭಾರತದ ಚುನಾವಣಾ ಆಯೋಗ (ECI) ಜುಲೈ 31ರಂದು ಆಂಧ್ರಪ್ರದೇಶ ರಾಜ್ಯದ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ನಂತರದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಪರಿಶೀಲನಾ ಪ್ರಕ್ರಿಯೆಯ ಬಳಿಕ ಸುಮಾರು 45 ಲಕ್ಷ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಆಂಧ್ರಪ್ರದೇಶ

ಮುಖ್ಯ ಚುನಾವಣಾಧಿಕಾರಿ ವಿವೇಕ್ ಯಾದವ್ ಅವರ ಪ್ರಕಾರ, ಒಟ್ಟು 44.89 ಲಕ್ಷ ಮತದಾರರನ್ನು ಕರಡು ಪಟ್ಟಿಯಿಂದ ಹೊರಗಿಟ್ಟಲಾಗಿದೆ. ಆಂಧ್ರಪ್ರದೇಶ

ಇದರಲ್ಲಿ: 

– 22.30 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಅಥವಾ ಪರಿಶೀಲನೆ ವೇಳೆ ಲಭ್ಯವಾಗಿಲ್ಲ,

– 15.22 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ,

– 7.37 ಲಕ್ಷ ಮಂದಿ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ನೋಂದಾಯಿತರಾಗಿದ್ದರು.

ಇದನ್ನೂ ಓದಿ: ಭಿವಂಡಿಯಲ್ಲಿ ಕಟ್ಟಡ ಕುಸಿತ ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ

ಈ ವಿಶೇಷ ತೀವ್ರ ಪರಿಷ್ಕರಣೆ ಜೂನ್ 15ರಿಂದ ಜುಲೈ 24ರವರೆಗೆ ನಡೆಯಿತು. ಈ ಅವಧಿಯಲ್ಲಿ, ರಾಜ್ಯದ ಒಟ್ಟು 4.16 ಕೋಟಿ ಮತದಾರರಲ್ಲಿ 3.71 ಕೋಟಿ (89.22%) ಮತದಾರರಿಂದ ಎಣಿಕೆ ಫಾರ್ಮ್‌ಗಳನ್ನು ಸಂಗ್ರಹಿಸಲಾಗಿದೆ.

ಉಳಿದ ಮತದಾರರಿಂದ ಫಾರ್ಮ್‌ಗಳನ್ನು ಪಡೆಯಲು ಬೂತ್ ಮಟ್ಟದ ಅಧಿಕಾರಿಗಳು (BLOs) ವಿಫಲರಾದ ಕಾರಣಗಳೆಂದರೆ—ಅವರು ಬೇರೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ನೋಂದಾಯಿಸಿಕೊಂಡಿರುವುದು, ಪತ್ತೆಯಾಗದಿರುವುದು, ಗಡುವಿನೊಳಗೆ ಫಾರ್ಮ್ ಸಲ್ಲಿಸದಿರುವುದು ಅಥವಾ ಮತದಾರರ ಪಟ್ಟಿಯಲ್ಲಿ ಉಳಿಯಲು ಆಸಕ್ತಿ ತೋರಿಸದಿರುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ರಾಜ್ಯದ ಎಲ್ಲಾ 175 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹೆಸರುಗಳನ್ನು ಕೈಬಿಟ್ಟ ಮತದಾರರ ಪಟ್ಟಿಯ ಜೊತೆಗೆ, ಅವರನ್ನು ತೆಗೆದುಹಾಕಿದ ಸಾಧ್ಯ ಕಾರಣಗಳನ್ನು ಚುನಾವಣಾ ನೋಂದಣಿ ಅಧಿಕಾರಿಗಳ (ERO) ಮತ್ತು ಸಹಾಯಕ ಅಧಿಕಾರಿಗಳ (AERO) ಕಚೇರಿಗಳು, ಸ್ಥಳೀಯ ಸಂಸ್ಥೆಗಳು, ಮತಗಟ್ಟೆಗಳು ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿದೆ.

ಚುನಾವಣಾ ಆಯೋಗ ಸ್ಪಷ್ಟಪಡಿಸಿರುವಂತೆ, ಪಟ್ಟಿಯಿಂದ ಹೆಸರು ತಪ್ಪಿಹೋದ ಅರ್ಹ ಮತದಾರರು ಜುಲೈ 31ರಿಂದ ಆಗಸ್ಟ್ 30ರವರೆಗೆ ಇರುವ ‘ಕ್ಲೇಮ್ಸ್ ಮತ್ತು ಆಬ್ಜೆಕ್ಷನ್ಸ್’ ಅವಧಿಯಲ್ಲಿ Form-6 ಸಲ್ಲಿಸಿ ತಮ್ಮ ಹೆಸರನ್ನು ಸೇರಿಸಿಕೊಳ್ಳಬಹುದು.

ಈ ಆಕ್ಷೇಪಣೆಗಳು ಮತ್ತು ಅರ್ಜಿಗಳನ್ನು ಸೆಪ್ಟೆಂಬರ್ 28ರವರೆಗೆ ಪರಿಶೀಲಿಸಲಾಗುತ್ತದೆ. ನಂತರ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 3ರಂದು ಪ್ರಕಟಿಸುವ ಯೋಜನೆ ಇದೆ.

ಈ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ರಾಜ್ಯದ ಚುನಾವಣಾ ಅಧಿಕಾರಿಗಳು, ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಂಯೋಜಿತ ಪ್ರಯತ್ನ ಕಾರಣವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ನೋಡಿ: ಧರ್ಮೇಂದ್ರ ಪ್ರಧಾನ ರಾಜೀನಾಮೆ: ವಿದ್ಯಾರ್ಥಿಗಳ ಐಕ್ಯ ಹೋರಾಟಕ್ಕೆ ಗೆಲುವು; ಸಂಘಟನೆಗಳಿಂದ ಸಂಭ್ರಮಾಚರಣೆ

Donate Janashakthi Media

Leave a Reply

Your email address will not be published. Required fields are marked *