ಮುಂಬೈ,: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಪ್ರಕರಣದಲ್ಲಿ ರಾಮ ಮಂದಿರ ಟ್ರಸ್ಟ್ನ ಖಜಾಂಚಿ ಗೋವಿಂದ್ ಗಿರಿ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ) ಸಂಸದ ಸಂಜಯ್ ರಾವುತ್ ಆಗ್ರಹಿಸಿದ್ದಾರೆ. ರಾಮ
ಗುರುವಾರ ಮುಂಬೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಣಿಗೆ ಹಣದ ದುರ್ಬಳಕೆ ನಡೆದಿರುವುದು ಗೋವಿಂದ್ ಗಿರಿ ಖಜಾಂಚಿಯಾಗಿದ್ದ ಅವಧಿಯಲ್ಲೇ ಆಗಿದ್ದರೆ, ಅವರನ್ನೂ ತನಿಖೆ ನಡೆಸುವುದು ಅಗತ್ಯ. ರಾಮ ಮಂದಿರದ ದೇಣಿಗೆ ನಿಧಿಯನ್ನು ಸುರಕ್ಷಿತವಾಗಿ ಕಾಪಾಡುವುದು ಮತ್ತು ಅದರ ಲೆಕ್ಕಪತ್ರಗಳನ್ನು ನಿರ್ವಹಿಸುವುದು ಖಜಾಂಚಿಯ ಪ್ರಮುಖ ಜವಾಬ್ದಾರಿಯಾಗಿದೆ. ಆದ್ದರಿಂದ ಈ ಆರ್ಥಿಕ ಅಕ್ರಮದಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು” ಎಂದು ಹೇಳಿದರು.
ಇದನ್ನೂ ಓದಿ : ಪಶ್ಚಿಮ ಬಂಗಾಳ ಮತದಾರರ ಪರಿಶೀಲನೆ: ವಿಚಾರಣೆ ಪಟ್ಟಿಯಲ್ಲಿ 70% ಮುಸ್ಲಿಮರು
“ರಾಮ ಮಂದಿರವು ಕೇವಲ ಹಿಂದೂಗಳ ಭಕ್ತಿಯ ಸಂಕೇತವಲ್ಲ, ದೇಶದ ಹೆಮ್ಮೆಯ ಪ್ರತೀಕವೂ ಆಗಿದೆ. ಇದರ ನಿರ್ಮಾಣಕ್ಕಾಗಿ ಅಸಂಖ್ಯಾತ ಜನರು ತ್ಯಾಗ ಮತ್ತು ಕೊಡುಗೆ ನೀಡಿದ್ದಾರೆ. ಅಂತಹ ಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣ ದುರ್ಬಳಕೆಯಾಗಿರುವುದು ಅತ್ಯಂತ ಗಂಭೀರ ವಿಷಯ” ಎಂದು ರಾವುತ್ ಹೇಳಿದರು.
ಜುಲೈ 18ರಿಂದ ನಾಗ್ಪುರದಲ್ಲಿ ಆರಂಭವಾಗಲಿರುವ ‘ರಾಮ ರಕ್ಷಾ ಆಂದೋಲನ’ದಲ್ಲಿ ಭಾಗವಹಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ರಾಮ ಮಂದಿರದ ದೇಣಿಗೆ ಹಣದ ದುರ್ಬಳಕೆಯನ್ನು ವಿರೋಧಿಸಿ ಈ ಹೋರಾಟವನ್ನು ನಡೆಸಲಾಗುವುದು ಎಂದರು.
ಇದನ್ನೂ ನೋಡಿ : ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್ಐಆರ್ | ಕೆ ಎಸ್ ವಿಮಲಾ
