ಧರ್ಮಸ್ಥಳ ಪ್ರಕರಣ ತನಿಖೆ ಪೂರ್ಣ: 250ಕ್ಕೂ ಹೆಚ್ಚು ಸಾಕ್ಷಿಗಳು, ಸಾವಿರಾರು ಪುಟಗಳ ವರದಿ ಸಲ್ಲಿಕೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿ, ಎಸ್‌ಐಟಿ ತಂಡ ಜುಲೈ 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿದೆ.

ರಾಜ್ಯದಾದ್ಯಂತ ಕುತೂಹಲ ಕೆರಳಿಸಿದ್ದ ಈ ಪ್ರಕರಣದಲ್ಲಿ, ಎಸ್‌ಐಟಿ ತನಿಖೆಯ ಸಂಪೂರ್ಣ ವಿವರಗಳನ್ನು ಒಳಗೊಂಡ 7,005 ಪುಟಗಳ ವರದಿಯನ್ನು 12 ಪ್ರತ್ಯೇಕ ಫೈಲ್‌ಗಳಾಗಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಮೊದಲಿನ 3,923 ಪುಟಗಳ ವರದಿ ಹಾಗೂ ಇತ್ತೀಚಿನ 3,082 ಪುಟಗಳ ಮಾಹಿತಿಯನ್ನು ಸೇರಿಸಲಾಗಿದೆ.

ಪ್ರಕರಣವು ವರ್ಷ ಹಿಂದೆ ಸಾಕ್ಷಿದಾರನಾಗಿ ಬಂದಿದ್ದ ಚಿನ್ನಯ್ಯ, ತಲೆಬುರುಡೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ನೀಡಿದ ಹೇಳಿಕೆಯಿಂದ ಆರಂಭವಾಗಿತ್ತು. ನಂತರ ರಾಜ್ಯ ಸರ್ಕಾರ ಪ್ರಣವ್ ಮೊಹಂತಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ತನಿಖೆಯ ನಡುವೆ ಚಿನ್ನಯ್ಯ ಸ್ವತಃ ಆರೋಪಿಯಾಗಿಯೂ ಮಾರ್ಪಟ್ಟಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿತ್ತು. ಧರ್ಮಸ್ಥಳ

ಇದನ್ನೂ ಓದಿ: ಬೆಲೆ ಏರಿಕೆಯಿಂದ ಜನರ ಬದುಕು ಸಂಕಷ್ಟಕ್ಕೆ; ಮೋದಿ ಸರ್ಕಾರದ ಜನವಿರೋಧಿ ನೀತಿಗಳ ಫಲ: ಜೈರಾಮ್‌ ರಮೇಶ್‌

ಎಸ್‌ಐಟಿ ವರದಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ತನಿಖೆಯ ವೇಳೆ ಸಂಗ್ರಹಿಸಿದ ವಿವಿಧ ವಸ್ತುಗಳ ಎಫ್‌ಎಸ್‌ಎಲ್ ವರದಿಗಳು, 4 ಟಿಬಿ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿತ ವಿಡಿಯೋ ಹೇಳಿಕೆಗಳು, ವಶಪಡಿಸಿಕೊಳ್ಳಲಾದ ಮೊಬೈಲ್ ಫೋನ್‌ಗಳು ಸೇರಿದಂತೆ ಮಹತ್ವದ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಧರ್ಮಸ್ಥಳ

ಇದಲ್ಲದೆ, ಚಿನ್ನಯ್ಯ ನೀಡಿದ ತಲೆಬುರುಡೆ, ಆತ ಸೂಚಿಸಿದ ಸ್ಥಳದಲ್ಲಿ ಪತ್ತೆಯಾದ ಅಸ್ತಿಪಂಜರಗಳು ಹಾಗೂ ಬಂಗ್ಲೆಗುಡ್ಡ ಪ್ರದೇಶದಲ್ಲಿ ದೊರೆತ ಅವಶೇಷಗಳನ್ನು ಸಹ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಇದಕ್ಕೂ ಮೊದಲು ‘ಸುಳ್ಳು ಸಾಕ್ಷ್ಯ’ ಸಂಬಂಧಿತ ವರದಿಯನ್ನು ನ್ಯಾಯಾಲಯ ಒಪ್ಪದ ಹಿನ್ನೆಲೆಯಲ್ಲಿ, ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿತ್ತು. ಅದರಂತೆ ಇದೀಗ ಸಂಪೂರ್ಣ ತನಿಖಾ ವರದಿ ನ್ಯಾಯಾಲಯದ ಮುಂದಿದ್ದು, ಮುಂದಿನ ಕ್ರಮದ ಕುರಿತು ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದೆ.

ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಇನ್ಸ್‌ಪೆಕ್ಟರ್ ಮಂಜುನಾಥ್ ಸೇರಿದಂತೆ ತಂಡದ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಆರೋಪಿ ಚಿನ್ನಯ್ಯ ಕೂಡ ವಿಚಾರಣೆಗೆ ಹಾಜರಾಗಿದ್ದರು.

ಇದನ್ನೂ ನೋಡಿ: ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಎಡವಟ್ಟುಗಳೇ ಹೆಚ್ಚು? ಗೊಂದಲದ ಗೂಡಾದ ಎಸ್‌ಐಆರ್‌ | ಕೆ ಎಸ್ ವಿಮಲಾ

Donate Janashakthi Media

Leave a Reply

Your email address will not be published. Required fields are marked *