ಡಿಲಿಮಿಟೇಶನ್‌ನಿಂದ ಮಹಿಳಾ ಮೀಸಲಾತಿಯನ್ನು ಬೇರ್ಪಡಿಸಿ ಜಾರಿಗೆ ತರಬೇಕು: ನ್ಯಾಯಮೂರ್ತಿ ನಾಗಮೋಹನ ದಾಸ್

ಬೆಂಗಳೂರು: ಮಹಿಳೆಯರಿಗೆ ಶೇ.33ರಷ್ಟು ರಾಜಕೀಯ ಮೀಸಲಾತಿ ನೀಡುವ ಸಂವಿಧಾನ ತಿದ್ದುಪಡಿಯನ್ನು ಡಿಲಿಮಿಟೇಶನ್‌ (ಕ್ಷೇತ್ರ ಮರುವಿಂಗಡಣೆ) ಪ್ರಕ್ರಿಯೆಗೆ ಜೋಡಿಸಿರುವುದು ಸರಿಯಲ್ಲ. ಮಹಿಳಾ ಮೀಸಲಾತಿಯನ್ನು ತಕ್ಷಣವೇ ಪ್ರತ್ಯೇಕವಾಗಿ ಜಾರಿಗೆ ತರಬೇಕು ಎಂದು ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್ ಒತ್ತಾಯಿಸಿದ್ದಾರೆ. ಮಹಿಳಾ 

ಸೌಹಾರ್ದ ಸಂಭಾಂಗಣದಲ್ಲಿ ಜನವಾದಿ ಮಹಿಳಾ ಸಂಘಟನೆ ಮತ್ತು  ವಿವಿಧ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ಡಿಲಿಮಿಟೇಶನ್ ಮತ್ತು ಜನಗಣತಿ ಪೂರ್ಣಗೊಳ್ಳುವವರೆಗೆ ಮುಂದೂಡಿರುವುದು ಮಹಿಳೆಯರಿಗೆ ಆಗುತ್ತಿರುವ ಅನ್ಯಾಯವಾಗಿದೆ ಎಂದು ಹೇಳಿದರು.

ಮಹಿಳೆಯರಿಗೆ ರಾಜಕೀಯದಲ್ಲಿ ಸಮಾನ ಪ್ರಾತಿನಿಧ್ಯ ಕಲ್ಪಿಸುವುದು ಪ್ರಜಾಪ್ರಭುತ್ವದ ಮೂಲ ಆಶಯವಾಗಿದೆ. ಆದರೆ ಡಿಲಿಮಿಟೇಶನ್‌ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಕಾಯುವ ಷರತ್ತಿನಿಂದ ಮಹಿಳಾ ಮೀಸಲಾತಿಯ ಜಾರಿ ಅನಿರ್ದಿಷ್ಟವಾಗಿ ಮುಂದೂಡಲ್ಪಡುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರ ಈ ಎರಡನ್ನೂ ಬೇರ್ಪಡಿಸಿ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಅವರು ಆಗ್ರಹಿಸಿದರು.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಡಿಲಿಮಿಟೇಶನ್ ಕುರಿತು ಈಗಾಗಲೇ ಆತಂಕಗಳಿವೆ. ಈ ಪ್ರಕ್ರಿಯೆ ಮತ್ತು ಮಹಿಳಾ ಮೀಸಲಾತಿಯನ್ನು ಒಂದಕ್ಕೊಂದು ಕಟ್ಟಿ ಹಾಕುವುದರಿಂದ ಮಹಿಳೆಯರ ರಾಜಕೀಯ ಹಕ್ಕುಗಳು ಮತ್ತಷ್ಟು ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಅವರು ಎಚ್ಚರಿಸಿದರು. ಮಹಿಳಾ

ಇದನ್ನೂ ಓದಿ : ಜುಲೈ 19 ರಂದು ‘ಕರ್ಂಗೋಲ್‌ – ಕಂಗುಲು’ ಸಾಕ್ಷ್ಯಚಿತ್ರ ಪ್ರದರ್ಶನ ; ‘ಕುದ್ಕ ಬಚ್ಚಿರೆ’ ಪುಸ್ತಕ ಬಿಡುಗಡೆ!

ಮಹಿಳೆಯರಿಗೆ ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ನ್ಯಾಯಯುತ ಪ್ರಾತಿನಿಧ್ಯ ದೊರಕುವುದು ಸಾಮಾಜಿಕ ನ್ಯಾಯದ ಪ್ರಮುಖ ಅಂಶವಾಗಿದೆ. ಆದ್ದರಿಂದ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಹಿಳಾ ಮೀಸಲಾತಿಯನ್ನು ತಕ್ಷಣ ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ಅವರು ಮಹಿಳಾ ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜಕ್ಕೆ ಕರೆ ನೀಡಿದರು.

ಸಭೆಯಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ಚಂದ್ರಕುಮಾರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ, ಹಿರಿಯ ಹೋರಾಟಗಾರರಾದ ಕೆ.ಎಸ್. ವಿಮಲಾ, ಆಶಾ ರಮೇಶ್, ಪ್ರಭಾ ಎನ್., ಎಸ್‌ಎಫ್‌ಐ ರಾಜ್ಯ ನಾಯಕಿ ಸುಜಾತಾ, ಲೀಲಾ ಪಾಟೀಲ್, ಕೂಲಿಕಾರರ ಸಂಘಟನೆಯ ಸರೋಜಮ್ಮ, ಜನವಾದಿ ಮಹಿಳಾ ಸಂಘಟನೆಯ ಗೌರಮ್ಮ ಹಾಗೂ ಸುಶೀಲಾ ಮಾತನಾಡಿ, ಡಿಲಿಮಿಟೇಶನ್‌ಗೆ ಮಹಿಳಾ ಮೀಸಲಾತಿಯನ್ನು ಜೋಡಿಸದೆ ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಕಾರ್ಯಕ್ರಮವನ್ನು ಎಸ್‌ಎಫ್‌ಐನ ಅರ್ಪಿತಾ ಗ್ರೇಸಿ ನಿರ್ವಹಿಸಿದರು. ಜನವಾದಿ ಮಹಿಳಾ ಸಂಘಟನೆಯ ಬಸ್ಸಮ್ಮ ವಂದನಾರ್ಪಣೆ ಸಲ್ಲಿಸಿದರು. ಮಹಿಳಾ

ಇದನ್ನೂ ನೋಡಿ : ಉಸಿರಾಡುವ ಗಾಳಿಯೇ ವಿಷ! ಆಯುಷ್ಯ ಕಸಿಯುತ್ತಿರುವ ‘ಸೈಲೆಂಟ್ ಕಿಲ್ಲರ್’ | ಗುರುರಾಜ ದೇಸಾಯಿ Janashakthi Media

Donate Janashakthi Media

Leave a Reply

Your email address will not be published. Required fields are marked *